ಯುವಕರು ಉನ್ನತ ಶಿಕ್ಷಣ ಪಡೆದು ಸ್ವಾವಲಂಬಿ ಜೀವನ ನಡೆಸಲು ಕರೆ : ಸುರೇಶ್ ಭೂಮರೆಡ್ಡಿ

 ವರದಿ : - ಮಂಜುನಾಥ್ ಕೋಳೂರು, ಕೊಪ್ಪಳ            

ಕೋಪ್ಪಳ ನವಂಬರ್ 26 :-  ನಗರದ ಕಿನ್ನಾಳ ರಸ್ತೆಯಲ್ಲಿರುವ ಬಿ.ಎಸ್ಪಿ ಕಾಂಫಟ್೯  ಹೋಟೆಲ್ ಸಭಾಂಗಣದಲ್ಲಿ              ಕನಾ೯ಟಕ ದಲಿತ ಸಂಘಷ್೯ ಸಮಿತಿ ಭಿಮವಾದ ವತಿಯಿಂದ ಸಂವಿಧಾನ ಸಮರ್ಪಣ ದಿನಾಚರಣೆಯ ಅಂಗವಾಗಿ ಶೋಷಿತರ ವಿಮೋಚನೆಗಾಗಿ ಹಾಗೂ ಸಂವಿಧಾನ ಉಳಿವಿಗಾಗಿ ಜಾಗೃತಿ ಸಮಾವೇಶ  "ಸಂವಿಧಾನ ದಿನಾಚರಣೆ" ಕಾರ್ಯಕ್ರಮವನ್ನು ಭಾನುವಾರ ಆಚರಿಸಲಾಯಿತು. 

 ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ                      ಜಿಲ್ಲಾ ಗುತ್ತೇದಾರರ ಸಂಘದ ಅಧ್ಯಕ್ಷ ಸುರೇಶ್ ಭೂಮರೆಡ್ಡಿ ಅವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ  ಮಾಲಾರ್ಪಣೆ ಮಾಡಿ ಪುಜೆ ಸಲ್ಲಿಸುವ ಮೂಲಕ ಕಾಯ೯ಕ್ರಮಕ್ಕೆ ಚಾಲನೆ ನೀಡಿದರು.                                              ಬಳಿಕ ಮಾತನಾಡಿದ ಅವರು, ಯುವಕರು ಮೊದಲು ಶಿಕ್ಷಣಕ್ಕೆ ಆದ್ಯತೆ  ಕೊಟ್ಟು   ಉನ್ನತ ಮಟ್ಟದ ವಿದ್ಯಾಭ್ಯಾಸವನ್ನು  ಮುಗಿಸಿ  ಪ್ರಮುಖ ಹುದ್ದೆಗಳಾದ ಐ.ಎ.ಎಸ್ , ಐ.ಪಿ.ಎಸ್ ,  ಗಳಂತ  ಉನ್ನತ ಹುದ್ದೆಗಳನ್ನು ಪಡೆದುಕೊಂಡು  ಸಾರ್ವಜನಿಕರ ವಲಯದಲ್ಲಿ ಕೆಲಸವನ್ನು ಮಾಡುತ್ತ . ಬಡವರ , ಕೂಲಿ ಕಾರ್ಮಿಕರ , ಶೋಷಣೆ ಗೋಳಪಟ್ಟವರ , ತುಳಿತಕೊಳಗಾದವರ , ಕೆಳ ವರ್ಗದವರ  ಮಕ್ಕಳನ್ನು ಶೈಕ್ಷಣಿಕ , ಆರ್ಥಿಕ , ಸಾಮಾಜಿಕವಾಗಿ   ಸಹಾಯ ಹಸ್ತ ಚಾಚಿ ಅವರನ್ನು  ಸಮಾಜಮುಖಿಯಾಗಿ ಮೇಲೆತ್ತುವ ಮುಖಾಂತರ  ಅವರನ್ನು ಸಾವಲಂಬಿಗಳಾಗಿ ಮಾಡಿ ದೇಶದಲ್ಲಿರುವ       ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ "ಸಂವಿಧಾನವನ್ನು" ಗಟ್ಟಿಗೊಳಿಸಬೇಕಾಗಿದೆ    ಅಂದಾಗ ಮಾತ್ರ ನಾವು ಬಾಬಾಸಾಹೇಬ್ರ ತತ್ವ ಸಿದ್ಧಾಂತಕ್ಕೆ ಗೌರವ ಕೊಟ್ಟಂತಾಗುತ್ತದೆ   ಎಂದು ಕರೆ ನೀಡಿದರು.    

ಮಕ್ಕಳಿಗೆ ಶಿಕ್ಷಣ ಜೊತೆಗೆ    ಬಾಬಾ ಸಾಹೇಬರ  ಹೋರಾಟದ ಬಗ್ಗೆ ಅವರ  ಕಟ್ಟಿದ ಸಂಘಟನೆ ಬಗ್ಗೆ ತಿಳಿಸಿದಾಗ ಮಾತ್ರ ಶಿಕ್ಷಣದ ಜೊತೆಗೆ ಮಕ್ಕಳಿಗೂ ಸಂಘಟನೆಯ ಬಗ್ಗೆ ಹಾಗೂ  ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ  ನಡೆದು ಬಂದ ದಾರಿಯ ಬಗ್ಗೆ ಚಿಕ್ಕ ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ  ಕಾಲೋನಿಗಳಲ್ಲಿ ಮೂಲ ಸೌಕರ್ಯ ಈಡೇರಿಕೆಗೆ ಸರಕಾರಕ್ಕೆ ಮನವಿ ಸಲ್ಲಿಸುವಂತೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಇನ್ನೋರ್ವ ಮುಖ್ಯ ಅತಿಥಿಗಳಾದ ರಾಜ್ಯ ಸಂಘಟನಾ ಸಂಚಾಲಕರಾದ  ಯಲ್ಲಪ್ಪ ಹಳೆಮನೆ ಮಾತನಾಡುತ್ತಾ  ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶದ ಎಲ್ಲ ಜಾತಿಯ ಜನಾಂಗದವರ ಗೋಸ್ಕರ ಹಗಲಿರುಳು ಅನ್ನದೇ  ಸಂವಿಧಾನದ ರಚನೆಯ ಸಮಿತಿಯ  ಅಧ್ಯಕ್ಷರಾಗಿ 6ಜನ ಸದಸ್ಯರ ಜೊತೆ  ಸಂವಿಧಾನ ರಚನೆ ಮಾಡುವ ಸಂದರ್ಭದಲ್ಲಿ ಸದಸ್ಯರು  ಒಬ್ಬರು

 ಮರಣ ಹೊಂದಿದರು , ಇಬ್ಬರು ಅನಾರೋಗ್ಯದಿಂದ  ದೂರ ಉಳಿದರು ,  ಇನ್ನಿಬ್ಬರು ಸರ್ಕಾರಿ ವೃತ್ತಿಯಲ್ಲಿ ನಿರತರಾದರು, ಒಬ್ಬರು ರಾಜಕೀಯದಲ್ಲಿ ನಿರತರಾದರು ಹೀಗೆ ಆರು ಜನ  ಸಂವಿಧಾನ ರಚನಾ ಸಮಿತಿಯ ಸದಸ್ಯರು ಗೈರಾದರು ಸಹ   ಸಂವಿಧಾನ ರಚನಾ ಕರುಡು ಸಮಿತಿಯ ಅಧ್ಯಕ್ಷರಾಗಿರುವ  ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂಪೂರ್ಣ ಸಂವಿಧಾನ ಬರೆಯುವ ಜವಾಬ್ದಾರಿ ಹೋತರು . ಅವರ ಆರೋಗ್ಯ ತೀರ ಹದಿಗೆಟ್ಟರೂ ಸಹ ಅವರು ಇಡೀ ಜೀವಮಾನ ಹೋರಾಡಿ ಸಿಕ್ಕಿದ ಸದಾ ಅವಕಾಶವನ್ನು ಪೂರ್ಣವಾಗಿ ಬಳಸಿಕೊಂಡರು 1948 ಫೆಬ್ರುವರಿಯಲ್ಲಿ ಅಂಬೇಡ್ಕರ್ ಅವರು ಭಾರತ ಸಂವಿಧಾನದ ಕರಡನ್ನು ಪೂರ್ಣಗೊಳಿಸಿದರು. 04-10-1948 ರಂದು ಸಂವಿಧಾನದ ಕರಡು ಪ್ರತಿಯನ್ನು ಸಂವಿಧಾನ ರಚನಾ ಸಮಿತಿಗೆ ಅರ್ಪಿಸಿದರು.  20-11-1948 ರಂದು ""ಅಸ್ಪೃಶ್ಯತಾ ನಿಷೇಧ ಕಾನೂನು-ಅನುಚ್ಛೇದ 17ನ್ನು"" ಸಂವಿಧಾನದಲ್ಲಿ ಅಳವಡಿಸಲು ಒಪ್ಪಿಗೆ ಪಡೆದರು. 25-11-1949  ರಂದು ಸಂವಿಧಾನ ರಚನಾ ಸಮಿತಿಯ ಸಭೆಯನ್ನು ಉದ್ದೇಶಿಸಿ ಡಾ. ಬಿಆರ್ ಅಂಬೇಡ್ಕರ್ ರವರ ಸುಧೀರ್ಘ ಭಾಷಣ ಮಾಡಿದರು. 26-11-1949ರಂದು  ""ಸಂವಿಧಾನದ ಕರಡುನ್ನು"" ರಚನಾ ಸಮಿತಿ ಅನುಮೋದಿಸಿತು. 

 ಅಂಬೇಡ್ಕರ್ ರ ಎಲ್ಲಾ ಹೋರಾಟ ಮತ್ತು ತ್ಯಾಗಕ್ಕೆ ಕಡೆಯ ಜಯ ಸಿಕ್ಕಿತು . ಸಾವಿರಾರು ವರ್ಷಗಳಿಂದ ಇದ್ದ ಎಲ್ಲಾ ಶೋಷಣೆ ಮತ್ತು ಅಸಮಾನತೆಗಳನ್ನು ಕಾನೂನು ಬದ್ಧವಾಗಿ ತೊಡೆದು ಹಾಕಿ "ಶೋಷಿತರ ವಿಮೋಚಕರಾದರು". 11-01-1950ರಂದು  ಸಂಜೆ ಮುಂಬೈನ ನಾರ್ವೆ ಪಾರ್ಕ್ ಮೈದಾನದಲ್ಲಿ ಬೃಹತ್ ಸಭೆಯಲ್ಲಿ ""ಭಾರತ ಸಂವಿಧಾನ ""ಪ್ರತಿಯನ್ನು ಬೆಳ್ಳಿಯ ಪೆಟ್ಟಿಗೆಯಲ್ಲಿ ಇಟ್ಟು ಅಂಬೇಡ್ಕರ್ ಅವರಿಗೆ ಹುಡುಗರೆಯಾಗಿ ಭಾರತ ಸರ್ಕಾರದಿಂದ ನೀಡಲಾಯಿತು.26-01-1950  ರಂದು ಅಂಬೇಡ್ಕರ  ಬರೆದ ಸಂವಿಧಾನ ಈ ದೇಶದಲ್ಲಿ ಜಾರಿಗೆ ಬಂತು ಅಂದಿನಿಂದ ಶಾಸಕಾಂಗ , ನ್ಯಾಯಾಂಗ ಹಾಗೂ ಕಾರ್ಯಾಂಗಗಳು ಸಂವಿಧಾನದ   ಅಡಿಯಲ್ಲೇ ಕೆಲಸ ನಿರ್ವಹಿಸುತ್ತಿವೆ.  ನ್ಯಾಯಾಲಯಗಳು ನೀಡುವ ಎಲ್ಲಾ ತೀರ್ಪುಗಳು , ಶಾಸಕಾಂಗ ಮಾಡುವ ಎಲ್ಲಾ ಕಾನೂನುಗಳು ಹಾಗೂ ಕಾರ್ಯಾಂಗವು ಹೊರಡಿಸುವ ಎಲ್ಲಾ ಆದೇಶಗಳನ್ನು ಸಂವಿಧಾನದ ನಿರ್ದೇಶನದಲ್ಲಿ ಅಡಿಯಲ್ಲಿಯೇ ಇರಬೇಕಾಗುತ್ತದೆ "ಭಾರತದ ಸಂವಿಧಾನ "ಬರೆದು ಮುಗಿಸಲು ಅಂಬೇಡ್ಕರ್ ತೆಗೆದುಕೊಂಡ ಸಮಯ 2 ವರ್ಷ 11 ತಿಂಗಳು 17 ದಿನಗಳು , ಒಟ್ಟು 395 ಅನುಚ್ಛೇದಗಳು ಮತ್ತು 8 ಪರಿಚ್ಛೇದಗಳನ್ನು ಹೊಂದಿರುವ ಭಾರತ ಸಂವಿಧಾನ ಜಗತ್ತಿನಲ್ಲೇ ಅತ್ಯಂತ ದೊಡ್ಡ ಸಂವಿಧಾನವಾಗಿದೆ .ಸಂವಿಧಾನ ಬರೆದ ನಂತರ ಕರಡು ಪ್ರತಿಗಳನ್ನು ಸಾರ್ವಜನಿಕ ಚರ್ಚೆಗೆ ಬಿಟ್ಟಾಗ ಒಟ್ಟು 7635 ತಿದ್ದುಪಡಿಗಳ  ಸಲಹೆಗಳು ಬಂದವು .  ಈ ತಿದ್ದುಪಡಿಗಳಿಗೆ ಅಂಬೇಡ್ಕರ್ ಅವರು ಅತ್ಯಂತ ಸಮರ್ಪಕವಾಗಿ ಉತ್ತರ ನೀಡಿ ಅಂಗೀಕಾರ ಪಡೆದುಕೊಂಡರು. ಚರ್ಚೆಗೆ ಒಟ್ಟು 165 ದಿನಗಳು 11 ಅಧಿವೇಶನಗಳು ನಡೆದವು ಚರ್ಚಾಪುಟಗಳ ಸಂಖ್ಯೆ ಒಟ್ಟು 8,000 ಇವುಗಳ 14 ಸಂಪುಟಗಳಲ್ಲಿವೆ   ಇಂಥ ಮಹತ್ವವನ್ನು ಹೊಂದಿರುವಂತ ನಮ್ಮ ಸಂವಿಧಾನವನ್ನು ಇಂದಿನ ಮಕ್ಕಳು ಶಿಕ್ಷಣ ಜೊತೆಗೆ ಸಂವಿಧಾನ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.  ಜಿಲ್ಲಾ ಸಂಚಾಲಕ  ಸಿ. ಕೆ.ಮರಿಸ್ವಾಮಿ ಬರಗೂರ ಅವರು ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಅಂಬೇಡ್ಕರ್ ಅವರು ಹೇಳಿದ ಸಂದೇಶ ಗಳನ್ನ ಪ್ರತಿಯೊಬ್ಬರೂ ಪಾಲಿಸುವುದು ಅಗತ್ಯವಿದೆ, ಮೌಡ್ಯ ಕಂದಾಚಾರ ವಿರುದ್ದ ದನಿ ಎತ್ತಬೇಕು, ಎಲ್ಲ   ಶೋಷಿತ ವರ್ಗದವರ ಹಿತಾಸಕ್ತಿಗಾಗಿ ಡಿ.ಎಸ್.ಎಸ್ ಭಿಮಾವಾದ  ಸಂಘಟನೆ ಹೋರಾಡುತ್ತ  ಬೆನ್ನೆಲುಬಾಗಿ ನಿಲ್ಲುತ್ತದೆ ಎಂದು ತಿಳಿಸಿದರು.   ರಾಜ್ಯ ಸಮಿತಿ ಸದಸ್ಯ ಶರಣಪ್ಪ , ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಗಳ ಮೇಲ್ವಿಚಾರಣೆ ಮತ್ತು  ಬಲವರ್ಧನೆ ಸಮಿತಿಯ ರಾಜ್ಯ ಸಮಿತಿಯ ಸದಸ್ಯ ಮಂಜುನಾಥ್ ಕೋಳೂರು, ಜಿಲ್ಲಾ ಪದಾಧಿಕಾರಿಗಳಾದ  ಜಿಲ್ಲಾ ಸಂಘಟನಾ ಸಂಚಾಲಕರಾದ ಪ್ರಕಾಶ್ ದೊಡ್ಡಮನಿ , ಮಾರುತಿ , ಪ್ರಭು ಗೌಡ ವಕೀಲರು, ಕೊಪ್ಪಳ ತಾ ಸ  ರವಿಚಂದ್ರ ಕಾಳಿ ಗುಂಡ್ಲಾನೂರ್  ,   ಕಾರಟಗಿ ತಾ ಸ ಮಂಜುನಾಥ್ ಗೋಮರ್ಸಿ,  ಕನಕಗಿರಿ ತಾ ಸ ಹನುಮೇಶ ,  ಗಂಗಾವತಿ ತಾ ಸ ಸುರೇಶ,      , ರಾಘವೇಂದ್ರ ಕಾತರಕಿ, ತಾಲೂಕು ಸಂಘಟನಾಸಂಚಾಲಕರಾದ ನಾಗರಾಜ್ ಮ್ಯಗಳಮನಿ ,ಸುಂಕಪ್ಪ ,ಭುವನೇಶ , ಶಾವಂತ್ರೇಪ್ಪ , ಪ್ರಕಾಶ್ ವೀರಾಪುರ್ ಮೊದಲಾದವರು ಹಾಜರಿದ್ದರು.   ಕಾರ್ಯಕ್ರಮದಲ್ಲಿ ಕ್ರಾಂತಿ ಗೀತೆಗಳನ್ನು ಹಾಡಲಾಯಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ