ಕೃಷ್ಣನನ್ನೇ ತನ್ನೆಡೆಗೆ ತಿರುಗಿಸಿದ ಭಕ್ತಿವಂತ ಕನಕದಾಸರು- ಅಮರೇಶ್ ಜಿ ಕೆ

ಕೊಟ್ಟೂರು 30.11.2023 :- ತಾಲೂಕು ಕಛೇರಿ, ಕೊಟ್ಟೂರಿನ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಇಂದು ದಾಸಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ತಹಶೀಲ್ದಾರರು ಹಾಗೂ ತಾಲೂಕಿನ ಕುರುಬ ಸಮಾಜದ ಮುಖಂಡರೆಲ್ಲರೂ ಕನಕದಾಸರಿಗೆ ಪುಷ್ಪಾರ್ಚನೆ ಮಾಡಿ ಭಕ್ತಿ ಸಮರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

16ನೇ ಶತಮಾನದಲ್ಲಿಅನೇಕ ದಾಸರು ಬಂದರು. ಅವರಲ್ಲೆಲ್ಲಾ ಶ್ರೇಷ್ಠ ದಾಸರಾಗಿ, ಸಂತ್ರರಾಗಿ ಬದುಕಿದ್ದರು. ಅವರ ಭಕ್ತಿ ಎಷ್ಟಿತ್ತೆಂದರೆ ಭಗವಂತ ಶ್ರೀಕೃಷ್ಣನನ್ನೇ ತನ್ನೆಡೆಗೆ ತಿರುಗಿಸಿಕೊಂಡರು. ಇವರು ಭಕ್ತಿ ಚಳುವಳಿಯ ಜೊತೆಗೆ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ಮಾನವೀಯತೆಯನ್ನು ಎತ್ತಿಹಿಡಿದು ಅರಿವಿನ ಬೆಳಕಿನ ದಾರಿಯನ್ನು ತೋರಿಸಿದ್ದಾರೆ. ಇವರ ಸಾಹಿತ್ಯ ಜನರಾಡುವ ಭಾಷೆಯಲ್ಲಿದ್ದುದರಿಂದ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸಾಹಿತ್ಯವಾಗಿ ಜೀವಂತಿಕೆಯನ್ನು ಪಡೆದಿದೆ ಎಂದು ತಹಶೀಲ್ದಾರರಾದ ಅಮರೇಶ ಜಿ ಕೆ ಇವರು ಕನಕದಾಸರನ್ನು ನೆನೆದರು.

ಸಮಾಜದ ಮುಖಂಡರಾದ ಸಿದ್ದೇಶ್ , ಮೂಗಪ್ಪ ಅಧ್ಯಕ್ಷರು, ತಾಲೂಕು ಕುರುಬ ಸಮಾಜ, ಪುಲಿಕೇಶಿ ವಕೀರಲು ಹಾಗೂ ತಾಲೂಕು ಕುರುಬ ಸಮಾಜದ ಖಜಾಂಚಿ ಇವರು ಕನಕದಾಸರು ಇಡೀ ಮನುಕುಲಕ್ಕೆ ನೀಡಿದ ಕೊಡುಗೆ ಕುರಿತು ಮಾನನಾಡಿದರು.

 ಕಾರ್ಯಕ್ರಮದಲ್ಲಿ ಲೀಲಾ.ಎಸ್. ತಹಶೀಲ್ದಾರ್ ಗ್ರೇಡ್-2, ಕುರುಬ ಸಮಾಜದ ಉಪಾಧ್ಯಕ್ಷರಾದ ಮೇಘರಾಜ, ಪಟ್ಟಣ ಪಂಚಾಯಿತಿ ಸದಸ್ಯರಾದ ತೋಟದ ರಾಮಣ್ಣ, ಮಾಜಿ ಸದಸ್ಯರಾದ ಪೂಜಾರ ನಾಗಪ್ಪ, ಹೊಸಕೋಡಿಹಳ್ಳಿ ಗ್ರಾ ಪಂ ಸದಸ್ಯರಾದ ಕೋಡಿಹಳ್ಳಿ ಭರಮನಿಂಗಪ್ಪ, ಮುಖಂಡರಾದ ಐನಳ್ಳಿ ನಿಂಗಪ್ಪ, ಹಾಲಪ್ಪ, ಮರಿಯಪ್ಪ, ಮುಪ್ಪಣ್ಣ, ನಾಗರಾಜ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಸಿದ್ದಪ್ಪ, ಶಿಕ್ಷಣ ಇಲಾಖೆಯ ಇಸಿಒ ನಿಂಗಪ್ಪ, ಅಜ್ಜಪ್ಪ ಸಿ, ಸಿ.ಮ.ಗುರುಬಸವರಾಜ, ಪುಟಾಣಿ ವಿಜಯಕುಮಾರ್ ಹಾಗೂ ಸಿಬ್ಬಂದಿ ಹಾಜರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ