"ಸಾಧನೆ ಸಾಧಕರ ಸ್ವತ್ತು :ಸಿದ್ದರಾಮ ಕಲ್ಮಠ "

ಕೊಟ್ಟೂರು:ಕೊಟ್ಟೂರೇಶ್ವರ ಮಹಾ ವಿದ್ಯಾಲಯ ಕೊಟ್ಟೂರು ದಿನಾಂಕ 20/11/2023 ಮತ್ತು 21/11/2023ರಂದು ಜರುಗಿದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಟೇಬಲ್ ಟೆನಿಸ್ ಪಂದ್ಯಾವಳಿ ಮತ್ತು ವಿಶ್ವವಿದ್ಯಾಲಯದ ತಂಡದ ಆಯ್ಕೆಯನ್ನು ನಮ್ಮ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು. ನಮ್ಮ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಸಿದ್ದರಾಮ ಕಲ್ಮಠ ಉದ್ಘಾಟಿಸಿ ಮಾತನಾಡಿ ಎಲ್ಲಾ ಕ್ರೀಡಾಪಟುಗಳಿಗೆ ಸೋಲು ಗೆಲವು ಸಾಮಾನ್ಯ ಆದರೆ ಕ್ರೀಡೆಯಲ್ಲಿ ಆಸಕ್ತಿ ವಹಿಸಿ ಭಾಗವಹಿಸುವುದು ಕ್ರೀಡಾಪಟುವಿನ ಮುಖ್ಯ ಪಾತ್ರವಾಗಿದೆ .ಸಾಧನೆ ಸಾಧಕರ ಸ್ವತ್ತು ಎಂದು ಉತ್ತೇಜಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯರಾದ ಡಾ. ಎಂ .ರವಿಕುಮಾರ್ ಕ್ರೀಡೆಯಿಂದ ವಿದ್ಯಾರ್ಥಿಗಳು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಂತರಾಗುವುದರ ಜೊತೆಗೆ ಕ್ರೀಡೆಯು ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸನ್ನು ನಿರ್ಮಿಸುತ್ತದೆ . ಇದರಿಂದ ಭಾವಿ ಜೀವನವನ್ನು ರೂಪಿಸಿಕೊಳ್ಳುಲು ಸಾಧ್ಯ ಎಂದು ಹೇಳಿದರು. ಈ ಪಂದ್ಯಾವಳಿಯಲ್ಲಿ ಪುರುಷರ ವಿಭಾಗದಲ್ಲಿ 5 ತಂಡಗಳು ಮಹಿಳಾ ವಿಭಾಗದಲ್ಲಿ 3 ತಂಡಗಳು ಭಾಗವಹಿಸಿದ್ದರು. ಪುರುಷರ ವಿಭಾಗದಲ್ಲಿ ಕೊಟ್ಟೂರೇಶ್ವರ ಮಹಾವಿದ್ಯಾಲಯ ತಂಡವು ಪ್ರಥಮ ಸ್ಥಾನವನ್ನು ಪಡೆದು ವಿಶ್ವವಿದ್ಯಾಲಯದ ಚಾಂಪಿಯನ್ ಗಳಾಗಿ ಹೊರಹೊಮ್ಮಿದರು. 

ದ್ವಿತೀಯ ಸ್ಥಾನವನ್ನು ಸರಳಾದೇವಿ ಕಾಲೇಜ್ ಬಳ್ಳಾರಿ ಪಡೆದುಕೊಂಡರು. ಹಾಗೂ ಮಹಿಳಾ ವಿಭಾಗದಲ್ಲಿ ಎಸ್ .ಡಿ. ಕಾಲೇಜ್ ಕೊಪ್ಪಳ ಪ್ರಥಮ ಸ್ಥಾನ ಪಡೆದರೆ, S.A.V.T ಕೂಡ್ಲಿಗಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ.ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಡಿ. ಎಸ್. ಶಿವಮೂರ್ತಿ, ಮಾತನಾಡಿದರು .ಅಡಿಕೆ ಮಂಜುನಾಥಯ್ಯ, ಮಂಜುನಾಥ್ ಮಠಪತಿ ,ಕೆ .ಬೀ. ಮಲ್ಲಿಕಾರ್ಜುನ್ ,ಕೋರಿ ಬಸವರಾಜ್ ,ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಕೊಟ್ರೇಶ ಹರಪನಹಳ್ಳಿ ಗುರು ಬಸವರಾಜ್ ವೆಂಕಟೇಶ್ ಹಾಗೂ ವಿಶ್ವವಿದ್ಯಾಲಯ ಪ್ರತಿನಿಧಿ ಹುಲಿರಾಜ್ ಮತ್ತು ನವಾಜ್ ಭಾಷಾ ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಉಪನ್ಯಾಸಕರುಗಳಾದ ಪ್ರೊ. ರವೀಂದ್ರ ಗೌಡ, ಪ್ರೊ. ಕೃಷ್ಣಪ್ಪ, ಶ್ರೀಮತಿ ವಿಜಯಲಕ್ಷ್ಮಿ, ಪ್ರೊ. ಬಿ. ಎಸ್. ಪಾಟೀಲ್, ಬಸವರಾಜ್ ಬಣಕಾರ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಈ ಕಾರ್ಯಕ್ರಮದ ಸ್ವಾಗತವನ್ನು ಮಹಾವಿದ್ಯಾಲಯದ ದೈಹಿಕ ನಿರ್ದೇಶಕರಾದ ಡಾ. ಶಿವಕುಮಾರ ಅಚ್ಚುಕಟ್ಟಾಗಿ ನೆರವೇರಿಸಿದರು, ಪ್ರಭಾಕರ್ ನಿರೂಪಿಸಿದರು, ರೇವಣ್ಣ ಹೊಂದಿಸಿದರು. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಪುರುಷರ ಮತ್ತು ಮಹಿಳೆಯರ ಟೇಬಲ್ ಟೆನಿಸ್ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ