ಅಕ್ರಮ ಮರಳು ತುಂಬಿಕೊಂಡ ಟ್ರ್ಯಾಕ್ಟರ್ನಿಂದ ಬಿದ್ದು ವ್ಯಕ್ತಿ ಮರಣ ಪ್ರಕರಣ ದಾಖಲು
ಕೊಟ್ಟೂರು ತಾಲ್ಲೂಕು ಹ್ಯಾಳ್ಯಾ ಗ್ರಾಮದ ಹಳ್ಳದಿಂದ ಎಸ್.ರಾಜ ಎನ್ನುವವರು ಅಕ್ರಮವಾಗಿ ಮರಳು ತುಂಬಿಕೊಂಡು ಅತೀ ವೇಗವಾಗಿ ಹೋಗುತ್ತಿದ್ದ ಸಮಯದಲ್ಲಿ ಹೊಸದುರ್ಗ ತಿಮ್ಮಪ್ಪ (೪೩) ಎನ್ನುವ ವ್ಯಕ್ತಿ ಟ್ರ್ಯಾಕ್ಟರ್ನಿಂದ ಬಿದ್ದು ಮೃತ ಹೊಂದಿದ್ದು ಈ ಹಿನ್ನೆಲೆಯಲ್ಲಿ ಅವರ ಪತ್ನಿ ಲಕ್ಷ್ಮಮ್ಮ ದೂರಿನ ಮೇರೆಗೆ ಕೊಟ್ಟೂರು ಪಿಎಸ್ಐ ಗೀತಾಂಜಲಿ ಶಿಂಧೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶುಕ್ರವಾರ ಬೆಳಿಗ್ಗೆ ೫.೦೦ ಗಂಟೆ ಸುಮಾರಿಗೆ ಆರೋಪಿ ಚಾಲಕ ಎಸ್.ರಾಜ ತನ್ನ ತಂದೆ ಸೋವೇನಹಳ್ಳಿ ತಿಮ್ಮಪ್ಪ ಹೇಳಿದಂತೆ ಕೊಟ್ಟೂರು ತಾಲ್ಲೂಕಿನ ಗ್ರಾಮದ ಬಳಿ ಇರುವ ಹಳ್ಳದಲ್ಲಿ ಕಳ್ಳತನದಿಂದ ತಮ್ಮ ಸೋನಾಲಿಕಾ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿನಲ್ಲಿ ಮರಳನ್ನು ಲೋಡ್ ಮಾಡಿಕೊಂಡು ಮರಳು ತುಂಬಿದ ಟ್ರ್ಯಾಲಿಯಲ್ಲಿ ಹೊಸದುರ್ಗ ತಿಮ್ಮಪ್ಪ ಮತ್ತು ಪಂಪಣ್ಣನನ್ನು ಕೂಡಿಸಿಕೊಂಡು ಹ್ಯಾಳ್ಯಾ ಬಳಿ ಇರುವ ಹಳ್ಳದಿಂದ ಹ್ಯಾಳ್ಯಾ ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ ಸಿ.ಸಿ.ರಸ್ತೆಯಲ್ಲಿ ಟ್ರ್ಯಾಕ್ಟರ್ನ್ನು ನಿರ್ಲಕ್ಷ್ಯತನದಿಂದ ಅತೀ ಜೋರಾಗಿ ಚಲಾಯಿಸಿಕೊಂಡು ಹೋಗಿ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿರುವುದರಿಂದ ಟ್ರ್ಯಾಲಿಯಲ್ಲಿದ್ದ ಹೊಸದುರ್ಗ ತಿಮ್ಮಪ್ಪ ಆಯತಪ್ಪಿ ಬಿದ್ದು ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸುವ ಮುನ್ನವೇ ಮೃತರಾಗಿದ್ದಾರೆ. ಚಾಲಕ ಟ್ರ್ಯಾಕ್ಟರ್ನ್ನು ತೆಗೆದುಕೊಂಡು ಹೋಗಿದ್ದರ ಮೇರೆಗೆ ಪ್ರಕರಣ ದಾಖಲಾಗಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ