ಪ್ರಸಾದ್ ಮದ್ಲಾಪೂರ ಹತ್ಯೆ ಮಾಡಿದ ಕೊಲೆಗಡುಕರನ್ನು ಬಂಧಿಸಿ ಜೀವಾವಧಿ ಶಿಕ್ಷೆಯನ್ನು ವಿಧಿಸಿ : ದಲಿತಪರ ಸಂಘಟನೆಗಳ ಒತ್ತಾಯ
ಮಸ್ಕಿ : ಮಾನ್ವಿ ತಾಲೂಕಿನ ಮದ್ಲಾಪೂರ ಗ್ರಾಮದಲ್ಲಿ ಪ್ರಸಾದ್ ಎಂಬ ದಲಿತ ಮುಖಂಡನನ್ನು ದಿನಾಂಕ 30-10-2023 ಸೋಮವಾರ ದಂದು ಬೆಳಗ್ಗೆ 7-30 ಕ್ಕೆ ನಾಯಕ ಸಮುದಾಯದವರು ಬರ್ಬರವಾಗಿ ಹತ್ಯೆ ಮಾಡಿದ ಕೊಲೆಗಡುಕರನ್ನು ಬಂಧಿಸಿ ಜೀವಾವಧಿ ಶಿಕ್ಷೆಯನ್ನು ವಿಧಿಸಬೇಕು ಎಂದು ವಿವಿಧ ದಲಿತಪರ ಸಂಘಟನೆಗಳು ತಹಶೀಲ್ದಾರ್ ಮೂಲಕ ಕರ್ನಾಟಕ ಸರಕಾರದ ಗೃಹ ಸಚಿವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ತಾಲ್ಲೂಕಿನ ದಲಿತ ಮುಖಂಡರು ರಾಯಚೂರ ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ದಲಿತರ ಕೊಲೆಗಳು, ದೌರ್ಜನ್ಯಗಳು ಹೆಚ್ಚಾಗುತ್ತಿವೆ. ದಲಿತರಿಗೆ ಸೂಕ್ತ ರಕ್ಷಣೆ ಇಲ್ಲದಾಗಿದೆ.
ಮಾನ್ವಿ ತಾಲೂಕಿನ ಮದ್ಲಾಪೂರ ಗ್ರಾಮದಲ್ಲಿ ಪ್ರಸಾದ್ ಎಂಬ ದಲಿತ ಮುಖಂಡನನ್ನು ದಿನಾಂಕ 30-10-2023 ಸೋಮವಾರ ದಂದು ಬೆಳಗ್ಗೆ 7-30 ಕ್ಕೆ ಅದೇ ಗ್ರಾಮದ ನಾಯಕ ಸಮುದಾಯದ ಮುಖಂಡರ ಪ್ರಚೋದನೆಯಿಂದ ರಬ್ಬಣಕಲ್ ಗ್ರಾಮದ ಕೇಶವ ಮತ್ತು ರಾಮು ಎಂಬುವರು ಸುಪಾರಿ ತೆಗೆದುಕೊಂಡು ಬೆಳಗಿನ ಜಾವ ಹೊಲಕ್ಕೆ ಹೋಗುವಾಗ ಪ್ರಸಾದ್ ರವರನ್ನು ದಾರಿ ಅಡ್ಡಗಟ್ಟಿ ಲಾಂಗ್ ಮಚ್ಚು ಮಾರಕಾಸ್ತೃಗಳಿಂದ ಕೈ ಕತ್ತರಿಸಿ, ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈಗಾಗಲೇ ಪ್ರಸಾದ ತಂದೆ ಮರಿಸ್ವಾಮಿ ದೂರಿನ ಆದಾರದ ಮೇಲೆ 12 ಜನರ ಮೇಲೆ ಪ್ರಕರಣ ದಾಖಲಾಗಿ ಮೂರು ದಿನಗಳಾದರೂ ಪೋಲಿಸರು ಬಂಧಿಸದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ. ಸಮಾಜದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಹಾಳಾಗಲು ಪೋಲಿಸರೇ ನೇರ ಹೊಣೆಯಾಗಿದ್ದಾರೆ. ಇದರಿಂದ
ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಪ್ರಸಾದ್ ಕೊಲೆಗೆ ಪ್ರಚೋದನೆ ನೀಡಿದ ನಾಯಕ ಸಮುದಾಯದ ರಬ್ಬಣಕಲ್ ಗ್ರಾಮದ ಕೇಶವ, ರಾಮು, ದೇವನಾಯಕ, ರಮೇಶ ಮದ್ಲಾಪೂರ ಗ್ರಾಮದ ಸಾಲಿ ವೆಂಕಟೇಶ, ಶಿವು, ಪಾಂಡುನಾಯಕ, ತಿಮ್ಮಯ್ಯಹನುಮಪ್ಪ,ಈರಣ್ಣನಾಯಕ, ಸಜ್ಜೆರೊಟ್ಟಿ ಮುದಕಪ್ಪ ವೆಂಕಟೇಶ ಮೇಲೆ ಪ್ರಕರಣ ದಾಖಲಾಗಿದ್ದರಿಂದ ಈ ಕೊಲೆಗಡುಕರನ್ನು ಕೂಡಲೇ ಬಂಧಿಸಬೇಕು.
ಮದ್ಲಾಪೂರ ಗ್ರಾಮದ ಮಾದಿಗ ಕೇರಿಗೆ ಹಬ್ಬ ಹರಿದಿನಗಳಲ್ಲಿ ನಾಯಕರು ಕುಡಿದು ಬಂದು ಮೋಜು-ಮಸ್ತು ಮಾಡುತ್ತಾ ದಲಿತರ ಮೇಲೆ ದೌರ್ಜನ್ಯ ಮಾಡುತ್ತಿರುವುದನ್ನು ಪ್ರಸಾದ್ ಖಂಡಿಸುತ್ತಿದ್ದರಿಂದ ಈ ವಿಷಯವಾಗಿ ಎರಡು ತಿಂಗಳುಗಳಿಂದ ನಾಯಕ ಸಮುದಾಯವರು ಮಾದಿಗ ಸಮಾಜದವರ ಮೇಲೆ ಹಲ್ಲೆ, ದೌರ್ಜನ್ಯ ನಡೆದಾಗ ಮಾನ್ವಿ ಪೊಲೀಸ್ ಇಲಾಖೆಯು ಪ್ರಕರಣವನ್ನು ದಾಖಲಿಸಿಕೊಳ್ಳದೆ ಕಠಿಣಕ್ರಮ ಜರುಗಿಸದೇ ಇರುವುದರಿಂದ ಈ ಘಟನೆ ನಡೆದಿದೆ.
ಸರ್ಕಾರದ ನಿಯಮ ಪ್ರಕಾರ ದಲಿತ ಕೇರಿಗಳಲ್ಲಿ ಪ್ರತಿ ತಿಂಗಳಿಗೊಮ್ಮೆ ಸಂಬಂಧ ಪಟ್ಟ ಪೊಲೀಸ್ ಇಲಾಖೆ ಶಾಂತಿ ಸಭೆ ಮಾಡಬೇಕಾಗಿತ್ತು. ಆದರೆ ಆ ಮಾನವಿ ಪೋಲಿಸ್ ಇಲಾಖೆ ಮದ್ಲಾಪೂರ ಗ್ರಾಮದಲ್ಲಿ ಯಾವುದೇ ಶಾಂತಿ ಸಭೆ ಮಾಡಿರುವುದಿಲ್ಲ. ಮಾದಿಗ ಸಮಾಜದವರು ಎಂದು ನಾಮಕಾವಸ್ತೆ ಫೋಟೋ ಹೊಡೆದುಕೊಂಡು ಶಾಂತಿ ಸಭೆ ಮಾಡಲಾಗಿದೆ ಎಂದು ಸರಕಾರಕ್ಕೆ ನಕಲಿ ವರದಿ ನೀಡಿರುತ್ತಾರೆ.
ಮಾದಿಗ ಸಮಾಜದ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಪೊಲೀಸ್ ಇಲಾಖೆ ಕ್ರಮ ಜರುಗಿಸಲು ಸಂಪೂರ್ಣವಾಗಿ ವಿಫಲವಾಗಿದೆ. ಇದು ಮಾನವಿ ತಾಲೂಕಿಗೆ ಮಾತ್ರ ಸಂಬಂಧಿಸಿರುವುದಿಲ್ಲ, ರಾಯಚೂರು ಜಿಲ್ಲೆಯಾದ್ಯಂತ ಮಾದಿಗ ಸಮಾಜದ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಈ ರಾಜ್ಯದಲ್ಲಿ ಮಾದಿಗ ಸಮಾಜಕ್ಕೆ ಯಾವುದೇ ರಕ್ಷಣೆ ಇಲ್ಲದಾಗಿದೆ. ಹಾಗಾಗಿ
ಮಾದಿಗ ಸಮಾಜಕ್ಕೆ ಜೀವರಕ್ಷಣೆ ಸದಾ ನೀಡಬೇಕು.ಪ್ರತಿಯೊಂದು ತಾಲೂಕು ಮತ್ತು ಗ್ರಾಮಗಳಲ್ಲಿ ಮಾದಿಗ ಸಮಾಜದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ದೌರ್ಜನ್ಯಗಳು ನಡೆಯುತ್ತಿರುವುದರಿಂದ ಘನ ಸರ್ಕಾರ ರಕ್ಷಣೆಗೆ ಮುಂದಾಗಬೇಕು.
ಪ್ರತಿ ತಾಲೂಕಿನ ಶಾಸಕರು ನಮ್ಮ ಸಮಾಜದ ಮೇಲೆ ಆಗುತ್ತಿರುವ ಅನ್ಯಾಯ, ದೌರ್ಜನ್ಯ ಖಂಡಿಸಬೇಕು. ಈ ದುಷ್ಕರ್ಮಿಗಳ ಮೇಲೆ ಕಾನೂನು ಕ್ರಮ ಜರುಗಿಸಲು ಮುಂದಾಗಬೇಕು.
ಬರ್ಬರ ಹತ್ಯೆಗೊಳಗಾದ ಕುಟುಂಬವು, ಪ್ರಸಾದರ ಮೇಲೆ ಅವಲಂಬನೆ ಆಗಿದ್ದರಿಂದ ಪ್ರಸಾದ್ ರನ್ನು ಕಳೆದುಕೊಂಡ ಕುಟುಂಬಕ್ಕೆ ಸರ್ಕಾರದಿಂದ ನೌಕರಿ ನೀಡಬೇಕು. ಮತ್ತು ಆತನ ಮಕ್ಕಳಿಗೆ ಸಂಪೂರ್ಣ ಶಿಕ್ಷಣ ಕೊಡಿಸಬೇಕು.ಸರ್ಕಾರದ ಕಡೆಯಿಂದ ಇವರ ಉಪಜೀವನಕ್ಕೆ ಜಮೀನು ಮತ್ತು ಒಂದು ಕೋಟಿ ರೂಪಾಯಿ ಹಣವನ್ನು ಪರಿಹಾರವಾಗಿ ನೀಡಬೇಕು.
ಕಾಂಗ್ರೆಸ್ ಸರ್ಕಾರ ಇದ್ದರೂ ಸಹಿತ ಹಾಡು ಹಗಲೇ ದಲಿತ ಹೋರಾಟಗಾರರ ಬರ್ಬರ ಹತ್ಯೆಗಳು ನಡೆಯುತ್ತಿರುವುದು ದುರಂತಸಂಗತಿಯಾಗಿದೆ .ದಲಿತರನ್ನು ರಕ್ಷಣೆ ಮಾಡಬೇಕಾದವರು ಭಕ್ಷಕರಾಗಿ ನಿಂತಿದ್ದಾರೆ.
ಪ್ರತಿ ಪೋಲಿಸ್ ಇಲಾಖೆಯವರು ದಲಿತರ ಕೇರಿಗಳಲ್ಲಿ ಕುಂದುಕೊರತೆ ಸಭೆ ಮಾಡಬೇಕು. ಗ್ರಾಮಗಳಲ್ಲಿ ಅಸ್ಪೃಶ್ಯತೆ ಆಚರಣೆ ಮಾಡುವವರ ಮೇಲೆ ಕಾನೂನು ಕ್ರಮ ಜರುಗಿಸಲು ಮುಂದಾಗಬೇಕು.
ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು. ಮದ್ಲಾಪೂರ ಗ್ರಾಮದ ಪ್ರಸಾದ್ ಕೊಲೆಗೆ ಕಾರಣರಾದವರನ್ನು ಈ ಕೂಡಲೇ ಬಂಧಿಸಿ ಅವರನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕೆಂದು ನಮ್ಮ ಸಮಾಜವು ಮನವಿ ಪತ್ರದ ಮುಖಾಂತರ ಒತ್ತಾಯಿಸುತ್ತೇವೆ. ಬಂಧಿಸದೇ ತಡವಾದಲ್ಲಿ ನಮ್ಮ ಸಮಾಜದ ವತಿಯಿಂದ ಚಲೋ ಮದ್ಲಾಪೂರ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸುತ್ತೇವೆ ಎಂಬುದಾಗಿ ವಿವಿಧ ದಲಿತಪರ ಸಂಘಟನೆಯ ಅಧ್ಯಕ್ಷರೂ ಹಾಗೂ ಪದಾಧಿಕಾರಿಗಳು ಮಸ್ಕಿ ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ್ ಸೈಯದ್ ಅಖ್ತರ್ ಅಲಿ ರವರ ಮುಖಾಂತರ ಕರ್ನಾಟಕ ಸರಕಾರದ ಗೃಹ ಸಚಿವರು ವಿಧಾನಸೌಧ ಬೆಂಗಳೂರು ಇವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಹನುಮಂತಪ್ಪ ವೆಂಕಟಾಪುರ,ಮೌನೇಶ್ ಮುರಾರಿ,ಹನುಮಂತಪ್ಪ ಪರಾಪೂರ,ಮಲ್ಲಯ್ಯ ಬಳ್ಳಾ, ಸುರೇಶ್ ಅಂತರಗಂಗಿ, ರಾಯಪ್ಪ ಮುರಾರಿ,ಮಲ್ಲಪ್ಪ ಗೋನಾಳ,ಬಾಲಸ್ವಾಮಿ ಜಿನ್ನಾಪೂರ, ಕಿರಣ್ ವಿ ಮುರಾರಿ,ಅಶೋಕ್ ಮುರಾರಿ, ಪೌಲ್ ರಾಜ್ ಯದ್ದಲ ದಿನ್ನಿ,ತುರುಮಂದೆಪ್ಪ,ಹುಲುಗಪ್ಪ ಉದ್ಬಾಳ, ಬಸವರಾಜ ಡಿ ಉದ್ಬಾಳ,ಕಾಸಿಂ ಡಿ ಮುರಾರಿ, ಮಾರುತಿ ಜಿನ್ನಾಪೂರ,ರಾಯಪ್ಪ ಮುರಾರಿ,ಜಯಪ್ಪ ಮೆದಿಕಿನಾಳ, ದಾನಪ್ಪ ಮೆದಿಕಿನಾಳ ಸೇರಿದಂತೆ ಇನ್ನುಳಿದ ದಲಿತ ಮುಖಂಡರು ಇದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ