68ನೇ ಕರ್ನಾಟಕ ರಾಜ್ಯೋತ್ಸವದ ಹಟ್ಟಿ ಚಿನ್ನದ ಗಣಿ ಕಂಪನಿಯ ಅಧಿಕಾರಿ ಪ್ರಕಾಶ್ ಬಹದ್ದೂರ್ ಕಾರ್ಯನಿರ್ವಾಹಕ ನಿರ್ದೇಶಕರಿಂದ ರಾಷ್ಟ್ರಧ್ವಜಾರೋಹಣ.

ಹಟ್ಟಿ ಚಿನ್ನದ ಗಣಿ : ಹೆಸರಾಗಿತು ಕರ್ನಾಟಕ ಉಸಿರಾಗಲಿ ಕನ್ನಡ. ಕರ್ನಾಟಕ ರಾಜ್ಯದ್ಯಂತ ಕನ್ನಡಿಗರ ಪಾಲಿಗೆ ಪವಿತ್ರ ದಿನ.

ಕರ್ನಾಟಕ ರಾಜ್ಯೋತ್ಸವ 68ನೇ ಹಾಗೂ 50 ವರ್ಷದ ಕನ್ನಡ ರಾಜ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಯಿತು. ಎಲ್ಲೆಲ್ಲಿ ನೋಡಿದರೂ ನಮ್ಮ ನಾಡ ಧ್ವಜ. ತಾಯಿ ಭವನೇಶ್ವರಿ ಅರಿಶಿನ ಕುಂಕುಮದ ಸಂಕೇತವಾದ ಕೆಂಪು ಹಳದಿ ಬಣ್ಣದ ಬಾವುಟಗಳು. ರಾರಾಜಿಸುತ್ತವೆ.ಇಂದು ಕರುನಾಡು ಕಂಗಳಿಸುತ್ತಿದೆ.

ಅದೇ ರೀತಿ 

ಹಟ್ಟಿ ಚಿನ್ನದ ಗಣಿ ಕಂಪನಿಯು ಆಯೋಜಿಸಿದ 68ನೇ ಕರ್ನಾಟಕ ರಾಜ್ಯೋತ್ಸವನ್ನು ಕ್ರೀಡಾ ಸಂಸ್ಥೆಯ ಮುಂಭಾಗದಲ್ಲಿರುವ ಕರ್ನಾಟಕ ಧ್ವಜ ಸ್ತಂಭದ ಕಟ್ಟಿಯಲ್ಲಿ ತಾಯಿ ಭವನೇಶ್ವರಿ ಭಾವಚಿತ್ರಕ್ಕೆ ಹಾಗೂ ಧ್ವಜಸ್ತಂಬಕ್ಕೆ ಕಂಪನಿ ಅಧಿಕಾರಿಗಳು ಪೂಜಿಸಲ್ಲಿಸುವದರ ಮೂಲಕ 50 ವರ್ಷದ ಹಾಗೂ 68ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯ ಅಧಿಕಾರಿಗಳಾದ ಪ್ರಕಾಶ್ ಬಹದ್ದೂರ್ ಕಾರ್ಯನಿರ್ವಾಹಕ ನಿರ್ದೇಶಕರು, ರವಿಕುಮಾರ ಟಿ ಪ್ರಧಾನ ವ್ಯವಸ್ಥಾಪಕರು,

ವಿಜಯ ಭಾಸ್ಕರ್ ಪ್ರಧಾನ ಕಾರ್ಯದರ್ಶಿಗಳು.ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಮತ್ತು ಕಾರ್ಮಿಕರ ಸಂಘ, ವಿಶೇಷ ಅತಿಥಿಯಾಗಿ ಡಾಕ್ಟರ್ ನಾಗರಾಜ್ ಹೀರಾ ಹಿರಿಯ ಉಪನ್ಯಾಸಕರು ಸರಕಾರಿ ಪದವಿಪೂರ್ವ ಕಾಲೇಜ್ ಕುಷ್ಟಗಿ, ವಿಶ್ವನಾಥ್, ಸುರೇಶ್ , ಜಗನ್ , ರಮೇಶ್ ಆಫೀಸರ್ ನವೀನ್ ಸೇರಿದಂತೆ ಅನೇಕ ಕಾರ್ಮಿಕ ಮುಖಂಡರು ಹಟ್ಟಿ ಚಿನ್ನದ ಗಣಿ ಕಂಪನಿಯ ಕಾರ್ಮಿಕರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*