ರೈತರ ಬರಪರಿಹಾರಕ್ಕೆ ಎಫ್.ಐ.ಡಿ (FID) ಕಡ್ಡಾಯ

ಕೊಟ್ಟೂರು: 2023-24 ನೇ ಸಾಲಿನಲ್ಲಿ ಕೊಟ್ಟೂರು ತಾಲೂಕು ಬರಪೀಡಿತ ಎಂದು ಘೋಷಣೆಯಾಗಿರುವ ಹಿನ್ನೆಲೆ ಸರ್ಕಾರದಿಂದ ಪರಿಹಾರದ ಹಣ ಪಡೆಯಲು ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ಎಫ್.ಐ.ಡಿ ಮಾಡಿಸಿಕೊಳ್ಳಬೇಕು, ಒಬ್ಬ ರೈತನಿಗೆ 05 ಸರ್ವೇ ನಂಬರ್ ಇದ್ದು 01 ಸರ್ವೇ ನಂಬರ್ ಮಾತ್ರ ಎಫ್.ಐ.ಡಿ ಗೆ ನಮೂದು ಮಾಡಿಸಿದ್ದಲ್ಲಿ ಎಲ್ಲಾ ಸರ್ವೇ ನಂಬರ್‌ಗಳನ್ನು ಎಫ್.ಐ.ಡಿ ಗೆ ಲಿಂಕ್ ಮಾಡಿಸಬೇಕು ಹಾಗೂ ಜಂಟಿ ಖಾತೆದಾರರು ಇದ್ದಲ್ಲಿ ಪ್ರತಿಯೊಬ್ಬ ಖಾತೆದಾರರು ಪ್ರತ್ಯೇಕವಾಗಿ ಎಫ್.ಐ.ಡಿ ಮಾಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಬರಪರಿಹಾರದ ಹಣ ರೈತರ ಖಾತೆಗೆ ಜಮೆಯಾಗುವುದಿಲ್ಲ.ಎಫ್.ಐ.ಡಿ ಮಾಡಿಸಿಕೊಳ್ಳಲು ಬೇಕಾದ ದಾಖಲಾತಿಗಳು ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್, ಆಧಾರ್ ಕಾರ್ಡು ಜೆರಾಕ್ಸ್ ಮತ್ತು ಪಹಣಿಗಳು. ಈಗಾಗಲೇ ಎಫ್.ಐ.ಡಿ ಮಾಡಿಸಿಕೊಂಡ ರೈತರು ಮತ್ತೊಮ್ಮೆ ಎಫ್.ಐ.ಡಿ ಮಾಡಿಸಿಕೊಳ್ಳವುದು ಅವಶ್ಯಕತೆ ಇರುವುದಿಲ್ಲ ಎಂದು ತಹಶೀಲ್ದಾರರು. ಕೊಟ್ಟೂರು ರವರು ಮಾಹಿತಿ ನೀಡಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಸಂಗೋಪನೆ ಇಲಾಖೆ, ರೇಷ್ಮೆ ಇಲಾಖೆ ಅಥವಾ ಕಂದಾಯ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.ಸಹಾಯಕ ಕೃಷಿ ನಿರ್ದೇನಿಕರು ಪತ್ರಿಕೆಗೆ ತಿಳಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ