ಖರ್ಚಿಲ್ಲದ ಕಡಮೆ ಖರ್ಚಿನ ಉತ್ಪಾದನೆ ಕಲಿಕೆಗೆ ಪೂರಕ
ಬಳ್ಳಾರಿ(ballari news) : ನಮ್ಮ ಸುತ್ತು ಮುತ್ತಲಿನ ಅನುಪಯುಕ್ತ ವಸ್ತುಗಳನ್ನು ಬಳಸಿಕೊಂಡೇ ಲೋ ಕಾಸ್ಟ್ ಅಂಡ್ ನೋ ಕಾಸ್ಟ್ ಮಾದರಿಯ ಪಾಠಕ್ಕೆ ಪೂರಕವಾದ ಕಲಿಕೋಪಕರಣಗಳನ್ನು ತಯಾರಿಸಿ ಕೊಳ್ಳಬಹುದು ಎಂದು ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ರವಿಚೇಳ್ಳಗುರ್ಕಿ ಹೇಳಿದರು.
ಶಾಲೆಯ ವಿದ್ಯಾರ್ಥಿಗಳು ಅಂಟ್ರಿಕೆ ಎಂಬ ಕಳೆ ಗಿಡದ ಹೂಗಳಿಂದ ತಯಾರಿಸಿದ ಹಕ್ಕಿ ಗೂಡು, ಬುಟ್ಟಿ, ಬಕೆಟ್ ಮುಂತಾದ ವಸ್ತುಗಳನ್ನು ಪ್ರದರ್ಶಿಸಿ, ಮಕ್ಕಳನ್ನು ಪ್ರಶಂಸಿಸಿ,ಪ್ರೋತ್ಸಾಹಿಸಿ ಮಾತನಾಡಿ ಈರೀತಿ ಮಾಡಲು ಕಲಿಯುವುದರಿಂದ ಕಳೆ ಮತ್ತು ಬೆಳೆ ಗಿಡಗಳ ನಡುವಿನ ವ್ಯತ್ಯಾಸ ತಿಳಿಯಲು ಅನುಕೂಲವಾಗುತ್ತದೆ.ಕ ಲಿಕೆ ಆನಂದದಾಯಕವಾಗಿರುತ್ತದೆ.
ಯೋಚನಾಶಕ್ತಿ,ಕ್ರಿಯಾತ್ಮಕತೆ,ಹುಡುಕುವ ಹಾಗೂ ಗುರುತಿಸುವ ಸಾಮರ್ಥ್ಯವನ್ನು ಮೈಗೂಡಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ಹೇಳಿದರು.
#bellary #ballari #ballarilatest
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ