*ಕನಕ ಜಯಂತಿ ಅಂಗವಾಗಿ ಸಂತ ಶರಣರ ವೇಷ ಧರಿಸಿ ಪ್ರದರ್ಶನ ನೀಡಿದ ರಾಷ್ಟ್ರೋತ್ಥನ ವಿದ್ಯಾ ಕೇಂದ್ರದ ಮಕ್ಕಳು*
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿ.ಬಿ. ಎಸ್. ಇ ಯಲ್ಲಿ ಗುರುವಾರ ರಂದು ಸಂತ ಶರಣರು ಕನಕದಾಸ ಜಯಂತಿಯನ್ನು ಆಚರಿಸಲಾಯಿತು.
ಈ ಸಂರ್ಭದಲ್ಲಿ 8ನೇ ತರಗತಿ ವಿದ್ಯಾರ್ಥಿನಿಯಾದ ಕುಮಾರಿ ಕೊಟ್ರಮ್ಮ ಇವರು ಕನಕದಾಸರ ಕುರಿತು " ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ.
ಕನಕದಾಸರು ದಂಡನಾಯಕರಾಗಿದ್ದು ಯುದ್ಧವೊಂದರಲ್ಲಿ ಸೋತ ಅವರಿಗೆ ಉಪರತಿ/ವೈರಾಗ್ಯ ಉಂಟಾಗಿ ಹರಿಭಕ್ತರಾದರು" ಎಂದು ಹೇಳಿದಳು. 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳು ದಾಸ ಸಾಹಿತ್ಯದ ಕೀರ್ತನೆಗಳನ್ನು ಹೇಳಿದರು. 6ನೇ ತರಗತಿಯ ವಿದ್ಯಾರ್ಥಿಯಾದ ಕಾರ್ನಿಕ್ ಕನಕದಾಸರ ವೇಷಧಾರಿ ಆಗಿದ್ದನು. ಮನ್ವಿತ್ ಪುರಂದರದಾಸರ ವೇಷಧಾರಿಯಾಗಿದ್ದನು. ವಿದ್ಯಾರ್ಥಿನಿ ಅಂಕಿತ ಕನಕದಾಸರ ತಾಯಿಯ ವೇಷಧರಿಸಿದ್ದಳು, ಬೃಂದಾ ಪುರಂದರದಾಸರ ತಾಯಿಯ ವೇಷ ಧರಿಸಿದ್ದಳು, ದೀಕ್ಷಾ ಪುರಂದರದಾಸರ ಹೆಂಡತಿಯ ವೇಷ ಧರಿಸಿದ್ದಳು. ಹೀಗೆ ಆರನೇ ತರಗತಿಯ ಮಕ್ಕಳಿಂದ ದಾಸ ಪರಂಪರೆಯ ಛದ್ಮವೇಷ ಪ್ರದರ್ಶನ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲೆಯ ಉಪ ಪ್ರಧಾನಾಚಾರ್ಯರಾದ ಶ್ರೀಸುವೀರರವರು, ಗುರುವೃಂದದವರು, ಪಾಲಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ