ಅಪೇ ಆಟೋರಿಕ್ಷಾಕ್ಕೆ ಕಾರು ಢಿಕ್ಕಿ ಸ್ಥಳದಲ್ಲೆ ಮಹಿಳೆ ಸಾವು


ಕೊಟ್ಟೂರು : ತೂಲಹಳ್ಳಿಯಿಂದ ಚಿನ್ನೇನಹಳ್ಳಿ ಹೋಗುತ್ತಿರುವ ಅಪೇ ಆಟೋರಿಕ್ಷಾದಲ್ಲಿ ಪ್ರಯಾಣಿಕರನ್ನು ಕರೆತರುತ್ತಿರುವಾಗ ಕಾರು ಚಾಲಕನು ಕಾರನ್ನು ಅತಿವೇಗದಲ್ಲಿ ಕೋಣನಹಳ್ಳಿಯಿಂದ ಉಜ್ಜಿನಿಗೆ ಹೋಗುತ್ತಿದ್ದ ವೇಳೆಗೆ ಎದುರಿಗೆ ಬಂದ ಅಪೇ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋ ದಲ್ಲಿ ಪ್ರಯಾಣಿಸುತ್ತಿದ್ದ ಗೀತಮ್ಮ (೪೨) ಮಹಿಳೆ ಸಾವನ್ನಪ್ಪಿದ್ದಾರೆ. 

ಆಟೋ ಡ್ರೈವರ್ ಬೊಮ್ಮಪ್ಪ, ನೇತ್ರಮ್ಮ, ಲಕ್ಷ್ಮಮ್ಮ, ಬಸಮ್ಮ, ಮಂಗಳಮ್ಮ, ಶಾರದಮ್ಮ ಸೇರಿ ಐದು ಜನರಿಗೆ ತೀವ್ರವಾಗಿ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಗೆ ಕಳಿಸಲಾಗಿದೆ ಮತ್ತು ಅಪೇ ಆಟೋದಲ್ಲಿ ಇರುವ ಮಕ್ಕಳಿಗೆ ಗಾಯಗಳಾಗಿದ್ದು. ಕೊಟ್ಟೂರು ಆರೋಗ್ಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. 

ಧರ್ಮಸ್ಥಳ ಸಂಘದ ವತಿಯಿಂದ ಈ ನಂಬರ ಕೆಎ ೨೬ ಎ ೬೬೬೮ ಕಾರನ್ನು ಹಳ್ಳಿಗಳಲ್ಲಿ ಮಹಿಳೆಯರ ಸಂಘಗಳಿಗೆ ಸಾಲದ ಹಣವನ್ನು ಸಂಗ್ರಹ ಮಾಡುವುದಕ್ಕೆ ಹೊರಗಿರುವ ಸಂದರ್ಭದಲ್ಲಿ ಅಗಿರುವ ಘಟನೆಯಾಗಿದೆ. ವೇಗದಿಂದ ಚಲಾಯಿಸಿದ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಕೊಟ್ಟೂರು ಪೊಲೀಸ್ ಹಾಜರಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*