ಪೀಠ ರೋಹಣ ಹನ್ನೆರಡನೇ ವರ್ಷದ ವರ್ಧಂತಿ ಮಹೋತ್ಸವ ಹಾಗೂ ನವೀಕರಣಗೊಂಡ ದಾಸೋಹ ಭವನ ಉದ್ಘಾಟನೆ.

ಕೊಟ್ಟೂರು: ಉಜ್ಜಿನಿ ಸದ್ಧರ್ಮ ಪೀಠಕ್ಕೆ ನಾಡಿನೆಲ್ಲೆಡೆ ಮಾತ್ರವಲ್ಲದೇ ಹೊರ ರಾಜ್ಯದಿಂದಲೂ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಸರ್ವ ರೀತಿಯಲ್ಲಿ ವ್ಯವಸ್ಥಿತವಾದ ಅಭಿವೃದ್ಧಿ ಕಾರ್ಯಗಳಿಗೆ ಚುರುಕು ನೀಡಲಾಗುತ್ತಿದ್ದು, ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾ ಸ್ವಾಮಿಗಳು ಹೇಳಿದರು.

ಶ್ರೀ ಸದ್ಧರ್ಮ ಪೀಠದಲ್ಲಿ ನಡೆದ ಜಗದ್ಗುರುಗಳ ಪೀಠರೋಹಣದ ದ್ವಾದಶ ವರ್ಧಂತಿ ಆಚರಣೆ ಕಾರ್ಯಕ್ರಮ ಹಾಗೂ ನವಿಕರಣಗೊಂಡ ಪ್ರಸಾದ ನಿಲಯದ ಉದ್ಘಾಟನೆ ಕಾರ್ಯಕ್ರಮದ ಸಾನ್ನಿದ್ಯ ವಹಿಸಿದ್ದ ಅವರು ಶುಕ್ರವಾರ ಮಾತನಾಡಿದರು.


ಶ್ರೀ ಪೀಠದ ಎಲ್ಲ ಜಗದ್ಗುರುಗಳಗೆ ೧೨ವರ್ಷಗಳಾದ ಸಂದರ್ಭದಲ್ಲಿ ಅದ್ದೂರಿ ಕಾರ್ಯಕ್ರಮ ನಡೆಸುವುದ ಪೀಠದ ಭಕ್ತರ ಅಪೇಕ್ಷೆಯಾಗಿತ್ತು. ಆದರೆ ಬರಗಾಲದ ಹಿನ್ನಲೆಯಲ್ಲಿ ಸರಳವಾಗಿ ನಡೆಸುವಂತೆ ಮಾಡಿದ ಆದೇಶವನ್ನು ಭಕ್ತರು ಪಾಲಿಸಿದ್ದಾರೆ. ದೇಶದಲ್ಲಿ 28 ಸಾವಿರ ಶಾಖಾ ಮಠಗಳನ್ನು ಹೊಂದಿರುವ ಸದ್ಧರ್ಮ ಪೀಠದ ಕಾರ್ಯಕ್ರಮಕ್ಕೆ ಪ್ರಧಾನಿಗಳು ಆಗಮಿಸಬೇಕು ಎಂಬ ಪೀಠದ ಭಕ್ತರ ಅಪೇಕ್ಷೆಯಂತೆ ಒಳ್ಳೆಯ ಮಹೂರ್ತದಲ್ಲಿ ನಡೆಸುವ ದ್ವಾದಶ ವರ್ಧಂತಿ ಕಾರ್ಯಕ್ರಮದಲ್ಲಿ ಅದು ಈಡೇರುವ ಭರವಸೆ ಇದೆ ಎಂದು ಹೇಳಿದರು.  

ಶ್ರೀ ಪೀಠದ ಎಲ್ಲ ಜಗದ್ಗುರುಗಳ ಫಲದಿಂದ ಸಾಕಷ್ಟು ಅಭಿವೃದ್ಧಿಯನ್ನು ಸದ್ಧರ್ಮ ಪೀಠ ಹೊಂದಿದೆ. ಈಗಿನ ಕಾಲಕ್ಕೆ ತಕ್ಕಂತೆ ಭಕ್ತರಿಗಾಗಿ ಹೆಚ್ಚಿನ ವಸತಿ ಸೌಕರ್ಯ ಸೇರಿ ಇತರೆ ಸೌಲಭ್ಯಗಳ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಗಮನ ನೀಡಲಾಗುವುದು. ಹೆಚ್ಚುತ್ತಿರುವ ಭಕ್ತರ ಸಂಖ್ಯೆಗೆ ಅನುಗುಣವಾಗಿ ನೂತನ ಪ್ರಸಾದ ನಿಲಯಕ್ಕೆ ಬಾಯ್ಲರ್ ವ್ಯವಸ್ಥೆಯನ್ನು ಅಳವಡಿಸಿಕೊಂಡು ಅಧುನೀಕರಣಗೊಳಿಸಿರುವ ಹೊಸ ಪ್ರಸಾದ ನಿಲಯ ನಿರ್ಮಿಸಿ ಇದೇ ದಿನದಂದು ಲೊಕರ್ಪಣೆಗೊಳ್ಳಸಲಾಯಿತು . ಅನಿವಾರ್ಯವಾಗಿ ಸ್ಥಗಿತವಾಗಿದ್ದ ಶ್ರೀ ಪೀಠದ ಸದ್ಧರ್ಮ ಪ್ರಭೆ ಪತ್ರಿಕೆ ಪ್ರಕಟಣೆ ಕಾರ್ಯವನ್ನು ಪುನರ್ ಆರಂಭಿಸಲಾಗುವುದು, ಪೀಠದ ಗೋಶಾಲೆ ನಿರ್ಮಾಣ, ಭಸ್ಮ ತಯಾರಿಕೆ ಘಟಕ ಆರಂಭಿಸಲಾಗುವುದು.

ತಾವು ಸದ್ಧರ್ಮ ಪೀಠದ ಜಗದ್ಗುರುಗಳಾಗಿ ೧೨ವರ್ಷಗಳು ಗತಿಸಿವೆ. ಈ ಸಂದರ್ಭದಲ್ಲಿ ಅನೇಕ ಮಠಾದಿಶರು, ಮುಖಂಡರು ದ್ವಾದಶ ವರ್ಧಂತಿಯ ಧಾರ್ಮಿಕ ಕಾರ್ಯಗಳನ್ನು ನೆರವೇರಿಸುವ ಮೂಲಕ ಹೆಚ್ಚಿನ ಬಲ ಹಾಗೂ ಜವಾಬ್ದಾರಿಯನ್ನು ನೀಡಿದ್ದಾರೆ. ವೀರಶೈವ ಪರಂಪರೆಯಲ್ಲಿ ಪಂಚ ಪೀಠಗಳ ಮಹತ್ವ ಅಗಾಧವಾಗಿದೆ. ಗ್ರಾಮೀಣ ಭಾಗವಾಗಿರುವ ಉಜ್ಜಯಿನಿಯಲ್ಲಿ ಸದ್ಧರ್ಮ ಪೀಠ ಇರುವುದು ಈ ಭಾಗದ ಜನರ ಭಾಗ್ಯವಾಗಿದೆ. ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ಕಾರ್ತಿಕೋತ್ಸವ, ರಥೋತ್ಸವ, ಶಿಖರ ತೈಲಾಭಿಷೇಕಕ್ಕೆ ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯದಿಂದಲೂ ಅಸಂಖ್ಯಾತ ಭಕ್ತರು ಆಗಮಿಸುತ್ತಾರೆ. ಬಂದ ಭಕ್ತರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ಸರ್ವ ರೀತಿಯ ಸೌಕರ್ಯಗಳನ್ನು ಕಲ್ಪಿಸುವುದು ಬಹು ಮುಖ್ಯವಾಗಿದೆ. ಪೀಠದಿಂದ ಕೈಗೊಳ್ಳುವ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಭಕ್ತರ ಸಹಕಾರವೂ ಅಗತ್ಯವಾಗಿದೆ ಎಂದರು.

ಕೊಟ್ಟೂರು ಚಾನುಕೋಟಿ ಮಠಾಧ್ಯಕ್ಷ ಡಾ.ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮಂದಗತಿಯಲ್ಲಿದ್ದ ಶ್ರೀ ಪೀಠದ ಅಭಿವೃದ್ಧಿ ಕಾರ್ಯಗಳು ದ್ವಾದಶ ವರ್ಧಂತಿ ಕಾರ್ಯಕ್ರಮದ ಮೂಲಕ ಹೆಚ್ಚು ಚುರುಕು ಪಡೆದುಕೊಂಡು  ಹೊಸ ಬೆಳವಣಿಗೆಗಳು ಕಾಣಲಿ, ಬರಗಾಲ ಆವರಿಸಿರುವ ಕಾರಣಕ್ಕಾಗಿ ಜಗದ್ಗುರುಗಳ ದ್ವಾದಶ ವರ್ಧಂತಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗಿದೆ ಎಂದು ಹೇಳಿದರು.

ಕೂಡ್ಲಿಗಿಯ ಶ್ರೀ ಪ್ರಶಾಂತಸಾಗರ ಶಿವಾಚಾರ್ಯರು, ನಂದಿಪುರ ಶ್ರೀ ಮಹೇಶ್ವರ ಸ್ವಾಮಿಗಳು, ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀ, ಕಲ್ಯಾಣ ಸ್ವಾಮೀಜಿಗಳು ಮಾತನಾಡಿದರು. ಯಡಿಯೂರು, ಬಿಜಾಪುರ, ಕಡಗಂಚಿ, ಬೆಣ್ಣಿಹಳ್ಳಿ, ಹರಪನಹಳ್ಳಿ, ಬುಕ್ಕಸಾಗರ, ಸಂಡೂರು, ಕಾನಮಡುಗು, ತಾವರಕೆರೆ, ಹ.ಬೊ.ಹಳ್ಳಿ, ಅಡವಿಹಳ್ಳಿ ಸೇರಿ ರಾಜ್ಯದ ಹಾಗೂ ಮಹಾರಾಷ್ಟದಿಂದ ಅನೇಕ ಶಿವಾಚಾರ್ಯ ಸ್ವಾಮಿಗಳು ಭಾಗವಹಿಸಿದ್ದರು. ಶ್ರೀ ಪೀಠದ ಜ್ಞಾನಗುರು ವಿದ್ಯಾಪೀಠ ಕಾರ್ಯದರ್ಶಿ ಎಂ ಎಂ ಜೆ ಹರ್ಷವರ್ಧನ, ಗ್ರಾಪಂ ಅಧ್ಯಕ್ಷೆ, ಉಪಾಧ್ಯಕ್ಷ, ಸದಸ್ಯರು, ಮುಖಂಡರು ಇದ್ದರು. ಮಲ್ಲಿಕಾರ್ಜುನಯ್ಯ ಮಠದ ಕಾರ್ಯಕ್ರಮ ನಿರೂಪಿಸದರು. ಹಾಗೂ ಕೂಡ್ಲಗಿ ಪ್ರಶಾಂತ ಸಾಗರ ಸ್ವಾಮಿಗಳು ಸ್ವಾಗತಿಸಿದರು.

ಜಗದ್ಗುರುಗಳ ಪೀಠಾರೋಹಣದ ದ್ವಾದಶಿ ಪಟ್ಟಾದೀಕಾರದ ಪ್ರಯುಕ್ತ ಶುಕ್ರವಾರ ಬೆಳಗಿನ ಜಾವದಲ್ಲಿ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳಿಗೆ, ೫೦ಕ್ಕೂ ಹೆಚ್ಚು ಶಿವಾಚಾರ್ಯರು ಸೇರಿಕೊಂಡು ಮಂಗಳ ಸ್ನಾನ, ವಿಶೇಷ ಮರುಳಸಿದೇಶ್ವರ ಸ್ವಾಮಿ ಪೂಜೆ, ರುದ್ರಹೋಮ, ಸಿಂಹಾಸನಾರೋಹಣ, ಕಿರೀಟಧಾರಣೆ ಸೇರಿ ಎಲ್ಲ ರೀತಿಯ ಸಂಪ್ರದಾಯಗಳನ್ನು ನಡೆಸಲಾಯಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ