ಜವಳಗೇರ ನಾಡಗೌಡ ವಿರುದ್ಧ ಪ್ರತಿಭಟನೆ, ಅಕ್ರಮ ಸಾಗುವಳಿ ನಿಲ್ಲಿಸುವಂತೆ ಆಗ್ರಹ
ಮಸ್ಕಿ : ಸಿಂಧನೂರು ತಾಲೂಕಿನ ಜವಳಗೇರಾ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಹೆಚ್ಚುವರಿ ಭೂ ಪ್ರಕರಣಗಳ ಮರು ವಿಚಾರಣೆ ನಡೆಸಬೇಕು. ಜವಳಗೇರ ನಾಡಗೌಡರ ಅಕ್ರಮ ಭೂ ಸಾಗುವಳಿ ತಡೆಯುವಂತೆ ಆಗ್ರಹಿಸಿ ಇಲ್ಲಿನ ಹಳೆ ಬಸ್ ನಿಲ್ದಾಣದ ಬಳಿ ಡಾ. ಸಿಪಿಐ ಎಂಎಲ್ ರೆಡ್ ಸ್ಟಾರ್, ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಅಂಬೇಡ್ಕರ್ ಪ್ರತಿಮೆ ಬಳಿ ಧರಣಿ ನಡೆಸಿದರು.
ಇದೇ ವೇಳೆ ಸಂಘಟನೆಯ ಅಧ್ಯಕ್ಷ ಸಂತೋಷ ಹಿರೇದಿನ್ನಿ ಮಾತನಾಡಿ, ಜವಳಗೇರಾ ಜಮೀನು ಪ್ರಕರಣದಲ್ಲಿ ಸಿಂಧನೂರು ಪೊಲೀಸ್ ಅಧಿಕಾರಿಗಳು ಬೆದರಿಸಿ 64 ಎಕರೆ 29 ಗುಂಟಾ ಹೆಚ್ಚುವರಿ ಭೂಮಿಯಲ್ಲಿ ಭೂರಹಿತರಿಗೆ ಸಾಗುವಳಿ ಮಾಡದಂತೆ ತಡೆಯುತ್ತಿದ್ದಾರೆ.
ಡಿಸಿ ಮೌನವೇಕೆ?: ಜವಳಗೇರಾ ಜಮೀನು ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿ ಮೌನ ವಹಿಸಿದ್ದಾರೆ. ಇದನ್ನು ಪರಿಶೀಲಿಸಿ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಐಎಂಎಲ್ ರೆಡ್ ಸ್ಟಾರ್ ಕಾರ್ಯಕರ್ತರು ಮಸ್ಕಿ ಹಳೆ ಬಸ್ ನಿಲ್ದಾಣದ ಬಳಿ ಡಾ. ಅಂಬೇಡ್ಕರ್ ಪ್ರತಿಮೆ ಬಳಿ ಸೋಮವಾರ ಧರಣಿ ಆರಂಭಿಸಿ
ಕ್ರಮ ಕೈಗೊಳ್ಳಬೇಕು.ಭೂರಹಿತ ಕೃಷಿ ಕೂಲಿಕಾರರು ಮಾಡಿರುವ ಹೆಚ್ಚುವರಿ ಭೂಮಿ ಸಾಗುವಳಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ
ಶಿರಸ್ತೇದಾರರಾದ ಸೈಯದ್ ಅಖ್ತರ್ ಅಲಿ ರವರ ಮೂಲಕ ತಹಶೀಲ್ದಾರ್ ರಲ್ಲಿ ನಾನಾ ಬೇಡಿಕೆಗಳನ್ನು ಈಡೇರಿಸಲು ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಮಾರುತಿ ಜಿನ್ನಾಪುರ, ತಿರುಪತಿ ಮಸ್ಕಿ, ವೆಂಕಟೇಶ ಚಿಲ್ಕರಾಗಿ, ಶ್ರೀನಿವಾಸ ಪುಲಬಾವಿ, ರಮೇಶ ಹಿರೇದಿನ್ನಿ, ಅಮರೇಶ ಪಾಮನ ಕಲ್ಲೂರು, ಬಾಲ ಸ್ವಾಮಿ, ಮಾಳಪ್ಪ, ಆದಪ್ಪ ಸೇರಿದಂತೆ ಇನ್ನಿತರರು ಮುಖಂಡರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ