ಉತ್ತಮ ಹಾಗೂ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ವೀರ ವನಿತೆ ಓಬವ್ವ ಅವರ ಸಾಧನೆ ಮಹತ್ವ : ಮಲ್ಲಪ್ಪ ಎಸ್.ಗೋನಾಳ್ಕರ್
ಮಸ್ಕಿ : ಉತ್ತಮ ಹಾಗೂ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ವೀರ ವನಿತೆ ಓಬವ್ವ ಅವರ ಸಾಧನೆ ಮಹತ್ವದ್ದು ಯುದ್ಧದ ಬಗ್ಗೆ ಯಾವುದೇ ಪರಿವೇ ಇಲ್ಲದಿದ್ದರೂ ಸಮಯಪ್ರಜ್ಞೆ ಹಾಗೂ ಧೈರ್ಯದಿಂದ ಬ್ರಿಟಿಷ ಸೈನಿಕರವಿರುದ್ಧ ಹೋರಾಡಿದ ಓಬವ್ವ ಅವರ ಆದರ್ಶಗಳು ನಮ್ಮೆಲ್ಲರಿಗೂ ಬೆಳಕಾಗಬೇಕು ಎಂದು ರಾಯಚೂರು
ದಲಿತ ಸಂಘರ್ಷ ಸಮಿತಿ ಸಂಯೋಜಕ ಬಣದ ಜಿಲ್ಲಾ ಅಧ್ಯಕ್ಷರಾದ ಮಲ್ಲಪ್ಪ ಎಸ್.ಗೋನಾಳ್ಕರ್,ರವರು ಹೇಳಿದರು.
ನಾಡಿನ ನೆಲ ಸಂಸ್ಕೃತಿಯ ವಸ್ತು ನಿಷ್ಠತೆಯನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕು. ಭಾವನಾತ್ಮಕ ಚರಿತ್ರೆ ಬೇಡ. ಅಜ್ಞಾನವನ್ನು ಹೋಗಲಾಡಿಸಲು ಉನ್ನತ ಶಿಕ್ಷಣದಿಂದ ಸಾಧ್ಯವಾಗಿದ್ದು, ಪ್ರತಿಯೊಬ್ಬರೂ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಸಂವಿಧಾನದ ಆಶಯಗಳನ್ನು ಪಾಲಿಸಬೇಕು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಸೇರಿದಂತೆ ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು ಎಂದು ಹೇಳಿದರು.
ವೆಂಕಟೇಶ ಮುರಾರಿ,ರಾಜು ಛಲವಾದಿ ,ಶಿವರಾಜ್ ಕಟ್ಟಿಮನಿ, ಮಲ್ಲಣ್ಣ ನಾಯಕ,ಗೂಗ್ಲಿ ಬಸು,ರಮೇಶ್, ಹಾಗೂ ದಲಿತ ಪರ ರೈತ ಪರ ಪ್ರಗತಿಪರ ಸಂಘಟನೆಯ ಪದಾಧಿಕಾರಿಗಳು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ