ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಲು ತಹಶೀಲ್ದಾರ್ ಮೂಲಕ ಮನವಿ

ಮಸ್ಕಿ :  ಅಕ್ರಮ ಗಣಿಗಾರಿಕೆ ಚಟುವಟಿಕೆ ಹಾಗೂ ಪರ ವಾನಗಿಯನ್ನು ರದ್ದುಗೊಳಿಸಿ, ಅಂಥವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ( ದಾದಾ ಸಾಹೇಬ್ ಡಾ. ಎನ್ ಮೂರ್ತಿ ಸ್ಥಾಪಿತ ಮಸ್ಕಿ ತಾಲೂಕು ಘಟಕವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ಸರಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಅಕ್ರಮ ಗಣಿಗಾರಿಕೆ ಸಮಾಜಘಾತುಕ ಚಟುವಟಿಕೆಯಿಂದ ರೈತರಿಗೆ ಹಾಗೂ ಪರಿ ಸರಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಗಣಿಗಾರಿಕೆ ಮತ್ತು ಮರಮ್ ಸಾಗಾಣಿಕೆಯನ್ನು ನಿಷೇಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ತಾಲೂಕಿನ ಮೆದಿಕಿನಾಳ, ಉಸ್ಕಿಹಾಳ, ಬೆಲ್ಲದಮರಡಿ, ವೆಂಕಟಾಪುರ್, ಸಂತೆಕೆಲ್ಲೂರು, ಗುಡದೂರು, ಹಂಪನಾಳ ಇನ್ನಿತರ ಗ್ರಾಮಗಳಲ್ಲಿ ನೂರಾರು ಎಕರೆ ಭೂಮಿಯನ್ನುರಸ್ತೆ, ಲೇಔಟ್ ಗಾಗಿ ಗುತ್ತಿಗೆದಾರರಾದ

 ಅಮ್ಮಾಪುರ್ಇಂಪ್ರಾಸ್ಟ್ರಕ್ಚರಸ್ಸ್ ಅಂಡ್ ಕಂಪನಿ, ಅಮರಗುಂಡಪ್ಪ ಮೇಟಿ, ಗೋಪಾಲ್ ರೆಡ್ಡಿ ಬಳ್ಳಾರಿ ಇನ್ನಿತರರು ಗುತ್ತಿಗೆದಾರರು ಸೇರಿ ಆಕ್ರಮ ಕೂಟ ಮಾಡಿಕೊಂಡು ತಮ್ಮ ತಮ್ಮ ಕಾಮಗಾರಿಗೆ ಭಾರಿ ಪ್ರಮಾಣದ ಮರಮ್ ಮತ್ತು ಮರಳನ್ನು ಆಕ್ರಮವಾಗಿ ಹಾಗೂ ಕಾನೂನು ಬಾಹಿರವಾಗಿ ಸುಮಾರು 10-12 ವರ್ಷದಿಂದ ಅಕ್ರಮ ಕಲ್ಲುಗಣಿ ಗಾರಿಕೆ ನಡೆಯುತ್ತಿದೆ. ಇದರಿಂದ ಸುತ್ತಮುತ್ತಲ ಗ್ರಾಮದ ಜನರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಕಲ್ಲು ಗಣಿಗಾರಿಕೆಯಿಂದ ಹೊರ ಬರುವ ಧೂಳು, ತ್ಯಾಜ್ಯ ಪರಿಸರಕ್ಕೆ ಹಾನಿಯುಂಟು ಮಾಡುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಇವತ್ತಿನವರೆಗೂ ಗಣಿಗಾರಿಕೆಯ ಅಬ್ಬರದಿಂದ ಕುಡಿ ಯುವ ನೀರಿಗೆ ಕಂಟಕ ಎದುರಾಗಿದೆ. ರೈತರು ಬೆಳೆದ ಬೆಳೆಗೂ ಕುತ್ತು ಬಂದಿದೆ. ಸರ್ಕಾರಿ ಶಾಲೆ, ಸಾರ್ವಜನಿಕ ಆಸ್ಪತ್ರೆ, ದೇವಸ್ಥಾನಗಳು ಭಾರಿ ವಾಹನಗಳ ಸಂಚಾರದ ಶಬ್ದಕ್ಕೆ ಬಿರುಕು ಮೂಡುತ್ತಿವೆ. ಅಲ್ಲದೆ ಗಣಿಗಾರಿಕೆಯಿಂದ ಉಂಟಾದ ಆಳವಾದ ಕಂದಕಗಳಿಂದ ಸಾವು ಸಂಭವಿಸುತ್ತಿದೆ ಎಂದು ಆರೋಪಿಸಿದರು.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಈ ಗಣಿಗಾರಿಕೆಯಿಂದ ರೈತರ ಬೆಳೆ ಗಳಿಗೆ ಹಾನಿಯಾಗಿದೆ. ಅಲ್ಲದೆ ಸುತ್ತ ಮುತ್ತಲ ಗ್ರಾಮಗಳ ಜನರು ವಾಸ ಮಾಡಲು ಸಾಧ್ಯವಾಗುತ್ತಿಲ್ಲ. ಅಂತಹ ಜನತೆಗೆ ಸರ್ಕಾರ ಇವರಿಗೆ ಸೂಕ್ತ ನಿವೇಶನ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.ಪಟ್ಟಣದ ಅಂಬೇಡ್ಕರ್ ಪ್ರತಿಮೆ ಮುಂಭಾಗ ಸೇರಿದ ಧರಣಿ ನಡೆಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ( ದಾದಾ ಸಾಹೇಬ್ ಡಾ. ಎನ್ ಮೂರ್ತಿ ಸ್ಥಾಪಿತ ಮಸ್ಕಿ ತಾಲೂಕು ಘಟಕದ ಅಧ್ಯಕ್ಷ ಜಮದಗ್ನಿ ಗೋನಾಳ ರವರ ನೇತೃತ್ವದಲ್ಲಿ ತಹಶೀಲ್ದಾರ್ ಸುಧಾ ಅರಮನೆ ರವರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಅಶೋಕ್ ನಂಜಲದಿನ್ನಿ, ಅನಿಲ್ ಕುಮಾರ್ ಮುದಬಾಳ,ಅಶೋಕ್ ನಾಗರಬೆಂಚಿ, ಸುಭಾಷ್ ಹಿರೇ ಕಡಬೂರು, ಹುಲ್ಲೇಶ ಹೊಕ್ರಾಣಿ, ಮರಿಸ್ವಾಮಿ ಮುದಬಾಳ, ಮಲ್ಲಿಕ್ ಮುರಾರಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ