ಮಸ್ಕಿ ತಹಸೀಲ್ದಾರ್ ಕಾರ್ಯಾಲಯದ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯ

ಮಸ್ಕಿ: ಪಟ್ಟಣದ ತಹಸಿಲ್ದಾರ್ ಕಾರ್ಯಾಲಯವು ಸುಮಾರು 5 ವರ್ಷಗಳಿಂದ ತಾಲೂಕ ಕಾರ್ಯಾಲವಾಗಿದ್ದು, ಇಂದಿನವರೆಗೂ ಕಾರ್ಯಾಲದಲ್ಲಿ ವಿದ್ಯುತ್ ಬ್ಯಾಟರಿ (ಯು.ಪಿ.ಎಸ್), ಮಹಿಳೆಯರಿಗೆ ಶೌಚಾಲಯ, ಕುಡಿಯುವ ನೀರಿನ ಸಮಸ್ಯೆ ಸಾರ್ವಜನಿಕರಿಗೆ, ಕುಳಿತುಕೊಳ್ಳಲು ಹಾಸನಗಳು ಇಲ್ಲದಂತಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ತಹಶಿಲ್ದಾರರು ಮಸ್ಕಿ ಇವರ ಮುಖಾಂತರ ಮನವಿ ಪತ್ರ ಸಲ್ಲಿಸಿದರು.

ಇನ್ನೂ ಬ್ರೋಕರ್ ಗಳ ಹಾವಳಿಯಂತೂ ಹೆಚ್ಚಾಗಿದ್ದು ಇದರಿಂದ ಜನಸಾಮಾನ್ಯರಿಗೆ ತುಂಬ ತೊಂದರೆಯಾಗತ್ತಿದೆ. ಹೊಸ ತಾಲೂಕು ಆದ್ದರಿಂದ ದೂರದಿಂದ ಸಾರ್ವಜನಿಕರು ಬರುತ್ತಿದ್ದು, ವಿದ್ಯುತ್‌ ವ್ಯತಯದಿಂದ ಕೆಲಸ ಆಗದೆ ಮರಳಿ ಊರಿಗೆ ಹೋಗಿ ಬರಲು ಆಗುತ್ತಿಲ್ಲ. ಸದರಿ ತಾಲೂಕು ಕಛೇರಿಯು ಬಸ್‌ ನಿಲ್ದಾಣದಿಂದ ಸುಮಾರು 1.5 ಕಿ.ಮೀ ದೂರವಿದ್ದು ಅಲ್ಲಿಂದ ನಡೆದುಕೊಂಡು ಬಂದರೆ ಕಛೇರಿಗೆ ಬಂದ ಸಾರ್ವಜನಿಕರಿಗೆ ಸರ್ಕಾರಿ ಸಂಬಳ ತಗೊಳ್ಳುವ ನೌಕರರು ಸರಿಯಾದ ಸ್ಪಂಧನೆ ನೀಡುವುದಿಲ್ಲ ಹಾಗೂ ಮಹಿಳೆರಿಗೆ ಮತ್ತು ಮಕ್ಕಳಿಗೆ ಶೌಚಾಲಯದ ಅನುಕೂಲ ಇರುವುದಿಲ್ಲ. ಇದರಿಂದ ಮಹಿಳೆರಿಗೆ ತೊಂದರೆಯಾಗುತ್ತಿದ್ದು, ಮಹಿಳೆಯರು ಶೌಚಕ್ಕೆ ಸುಮಾರು ಅರ್ಧ ಕಿ.ಮೀ ದೂರ ಹೋಗಬೇಕಾಗುತ್ತದೆ.

ಈ ಕಛೇರಿಯಲ್ಲಿ ಬ್ರೋಕರ್ ಗಳ ಹಾವಳಿಯಿಂದ ನೌಕರರು ಜನಸಾಮಾನ್ಯರ ಕೆಲಸಗಳನ್ನು ವಿಳಂಬ ಮಾಡಿ ಬ್ರೋಕರ್ ಗಳ ಕೈಗಳಿಂದ ಹಣವನ್ನು ತೆಗೆದುಕೊಂಡು ಕೆಲಸ ಬೇಗನೆ ಮಾಡಿಕೊಡುತ್ತಿದ್ದಾರೆ ಇಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಸ್ಕಿ ತಾಲೂಕಿನಲ್ಲಿ ಬರುವ ಎಲ್ಲಾ ಹೋಬಳಿಗಳಲ್ಲಿ ಈ ಸಮಸ್ಯೆಗಳು ಇರುತ್ತವೆ. 

ಈ ಎಲ್ಲಾ ಸಮಸ್ಯೆಗಳು ಗೊತ್ತಿದ್ದರು ಗೊತ್ತಿಲ್ಲದ ಹಾಗೆ ಮೂಕ ಪ್ರೇಕ್ಷಕರ ತರ ಅಧಿಕಾರಿಗಳು ಹಾಗೂ ಕಾರ್ಯಾಲಯದ ನೌಕರರು ಇರುವುದೂ ಜಾಣ ಕುರುಡುತನ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ.

ಆದ್ದರಿಂದ ದಯಾಳುಗಳಾದ ತಾವುಗಳು ಈ ಮೇಲಿ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು. ಈ ಸಮಸ್ಯೆಗಳಿಗೆ ಬೇಗನೆ ಪರಿಹರಿಸದಿದ್ದರೆ, ನಾವು ಮುಂದಿನ ದಿನ ಮಾನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆಂದು ಕರ್ನಾಟಕ ಅಂಬೇಡ್ಕರ್ ಯುವ ಸೇನೆಯಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಅಮರೇಶ ಆರ್ ಬೆಳಗಲ್, ಬಸವರಾಜ ಮಸ್ಕಿ, ಮಲ್ಲಿಕ್ ಮುರಾರಿ, ಅಜಯ್ ಗುಡದೂರು,ಪ್ರೇಮಕುಮಾರ ಮಸ್ಕಿ,ಅಣ್ಣಯ್ಯ ತೀರ್ಥಭಾವಿ ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ