*ಕನ್ನಡ ಜ್ಯೋತಿ ರಥ ಯಾತ್ರೆಯನ್ನು ಕೂಡ್ಲಿಗಿ ಪಟ್ಟಣಕ್ಕೆ ಸ್ವಾಗತಿಸಿಕೊಂಡ ಕನ್ನಡ ಪ್ರೇಮಿಗಳು*

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಡೇ ಲಡಕು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಈಚಲ ಬೊಮ್ಮನಹಳ್ಳಿ ಗ್ರಾಮದಿಂದ ಬಡೇಲಡಕು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಯು. ಮಂಜುಳಾ ಸತೀಶ, ಉಪಾಧ್ಯಕ್ಷರಾದ ಶಿಲ್ಪಾ ಹನುಮಂತಪ್ಪ ಹಾಗೂ ಸದಸ್ಯರುಗಳು ಅಂಜಿನಪ್ಪ, ಕರಿಯಪ್ಪ, ರಾಮಜ್ಜ, ವೀರೇಶ, ಕುಪ್ಪಿನ ಕೇರಿ ಗಂಗಮ್ಮ ಅಂಜಿನಪ್ಪ ಕಾಟ್ರಳ್ಳಿ, ಬಸವರಾಜ, ಬಿ.ಕೆ ಗಂಗಾಧರ ,ಗ್ರಾಮಸ್ಥರುಹಾಗೂ ಕೂಡ್ಲಿಗಿ ತಾಲೂಕಿನ ಕನ್ನಡ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಅಂಗಡಿ ವೀರೇಶ್, ತಹಶೀಲ್ದಾರಾದ ಶ್ರೀಮತಿ ರೇಣುಕಾ,ನೌಕರರ ಸಂಘದ ಅಧ್ಯಕ್ಷರಾದ ಪಿ. ಶಿವರಾಜ್, ತಾಲೂಕ್ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ರವಿಕುಮಾರ್,ಕನ್ನಡ ರಥಯಾತ್ರೆಗೆ ಗ್ರಾಮದ ನೂರಾರು ಮಹಿಳೆಯರು ಎಲ್ಲಾ ಜನತೆಯು ಅದ್ದೂರಿಯಾಗಿ ಹತ್ತಾರು ಮಹಿಳೆಯರು ದೀಪದ ಕಳಸ ಬೆಳಗುವುದರೊಂದಿಗೆ ಯು ಮಂಜುಳಾ ಸತೀಶ್ ಇವರು ಸ್ವಾಗತಿಸಿಕೊಂಡರು.

ನಂತರ ಕೂಡ್ಲಿಗಿ ಪಟ್ಟಣಕ್ಕೆ ಕಲಿಸಿಕೊಟ್ಟರು ಹಾಗೆ ದಾರಿಯಲ್ಲಿ ನೂರಾರು ವಿದ್ಯಾರ್ಥಿಗಳು ಕನ್ನಡ ಜ್ಯೋತಿ ರಥಯಾತ್ರೆಯನ್ನು ಪಟ್ಟಣ ಪಂಚಾಯಿತಿ ಅಧಿಕಾರಿಯಾದ ಫಿರೋಜ್ ಖಾನ್ ಹಾಗೂ ಸಿಬ್ಬಂದಿ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರು ಕಾಟೇರ ಹಾಲೇಶ್, ಕಾಂಗ್ರೆಸ್ ಬ್ಲಾಕ್ ಪ್ರಧಾನ ಕಾರ್ಯದರ್ಶಿಯಾದ ತಳವಾರ ಪ್ರದೀಪ್, ಸಿ ರಾಘವೇಂದ್ರ, ಕನ್ನಡ ಬಾವುಟವನ್ನು ಹಿಡಿದು ಕೂಡ್ಲಿಗಿ ಪಟ್ಟಣದಲ್ಲಿ ಪ್ರಮುಖ ರಸ್ತೆ ಗಲ್ಲಿ ವಿವಿಧ ವಾದ್ಯಗಳೋದಿಗೆ ಅದ್ದೂರಿಯಾಗಿ ಕನ್ನಡ ಜ್ಯೋತಿ ರಥವನ್ನು ಮೆರವಣಿಗೆ ಮೂಲಕ ಪಟ್ಟಣದ ಗಾಂಧೀಜಿ ಚಿತಾಭಸ್ಮದ ಹತ್ತಿರ ಮೆರವಣಿಗೆ ಸಾಗಿ ಬಂದಿತ್ತು. ಹಾಗೆ ಕನ್ನಡ ಪರಿಷತ್ತಿನ ಅಧ್ಯಕ್ಷರಾದ ಅಂಗಡಿ ವೀರೇಶ್ ಇವರು ಮಾತನಾಡತ್ತ ಗ್ರಾಮೀಣ ಭಾಗದಲ್ಲಿ ಕನ್ನಡ ಭಾಷೆ ಶ್ರೀಮಂತವಾಗಿದೆ ಎಂದು ತಿಳಿಸುತ್ತಾ ದಾರಿಯುದ್ಧಕ್ಕೂ ಕನ್ನಡ ಪ್ರೇಮವನ್ನು ಮೆರೆದ ಗ್ರಾಮೀಣ ಭಾಗದ ಜನರ ಮನಸ್ಸು ಕನ್ನಡ ಅಭಿಮಾನದ ಮೆರಗು ಎದ್ದು ಕಾಣುತ್ತಿತ್ತು ಎಂದು ತಿಳಿಸಿದರು, ಹಾಗೆ ಮದಕರಿ ವೃತದಲ್ಲಿ ಕನ್ನಡ ಅಭಿಮಾನದ ಗೀತೆಗಳಿಗೆ ನೃತ್ಯ ಕುಣಿದ ಯುವಕರುಗಳು ಹಾಗೂ ರಾಮ್ ಡೋರ್ ಡ್ರಮ್ ಸೆಟ್ಟಿಗೆ ಕುಣಿತ ಹಾಕಿದ ಪಟ್ಟಣ ಪಂಚಾಯತಿ ಸದಸ್ಯರುಗಳು ಹಾಗೂ ಪ್ರಮುಖ ಮುಖಂಡರುಗಳು ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಇನ್ನು ಇತರರು ಭಾಗವಹಿಸಿದ್ದರು

 *ವರದಿ ರಾಘವೇಂದ್ರ ಸಾಲುಮನಿ ಕಿಷ್ಕಿಂದ ಟಿವಿ ಕೂಡ್ಲಿಗಿ*

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ