ಕನ್ನಡಿಗರ ಹಣ ಉತ್ತರ ಪ್ರದೇಶಕ್ಕೆ! ಜಿ ಎಸ್ ಟಿ ದೊಡ್ಡ ಪಾಲು ಉತ್ತರ ಪ್ರದೇಶಕ್ಕೆ

ಬ್ಯುರೋ:ಕಾಯಕವೇ ಕೈಲಾಸ ಎಂದು ನಂಬಿ ಬದುಕುವ ಕನ್ನಡಿಗರು ತೆರಿಗೆ ಸಂದಾಯ ಮಾಡುವುದರಲ್ಲಿ ಇಡೀ ದೇಶಕ್ಕೆ ನಂ.2ನಲ್ಲಿ ಇರುವುದು ಎಲ್ಲರಿಗೂ ತಿಳಿದಿದೆ. ಆದರೆ, ಜಿ ಎಸ್ ಟಿ ಹಂಚಿಕೆ ವಿಷಯದಲ್ಲಿ ಕೇಂದ್ರ ಸರ್ಕಾರ ಮಾತ್ರ ಉತ್ತರ ಪ್ರದೇಶಕ್ಕೆ ಆದ್ಯತೆ ನೀಡಿರುವುದು ನಮ್ಮ ಕನ್ನಡ ರಾಜ್ಯದ ಬಗ್ಗೆ ಕೇಂದ್ರಕ್ಕೆ ಇರುವ ತಾತ್ಸಾರ ಮನೋಭಾವ ತಿಳಿಯುತ್ತದೆ.


ಮೇ ಅಂತ್ಯಕ್ಕೆ ಜಿ ಎಸ್ ಟಿ ಸಂಗ್ರಹ ಲೆಕ್ಕಾಚಾರ ನೋಡಿದರೆ ದೇಶದ ವಾಣಿಜ್ಯ ರಾಜಧಾನಿ ಮುಂಬೈ ನಗರಿ ಇರುವ ಮಹಾರಾಷ್ಟ್ರ 23,536 ಕೋಟಿ ಜಿ ಎಸ್ ಟಿ ಸಂಗ್ರಹ ಆಗಿದ್ದು, ಇದು ದೇಶದಲ್ಲಿಯೇ ಗರಿಷ್ಠ ಆಗಿದೆ. ಅದಾದ ಬಳಿಕ 10,317 ಕೋಟಿ ಜಿ ಎಸ್ ಟಿ ಸಂಗ್ರಹ ಮಾಡಿ 2ನೆಯ ಸ್ಥಾನವನ್ನು ನಮ್ಮ ರಾಜ್ಯ ಅಲಂಕರಿಸಿದೆ. ಉತ್ತರ ಪ್ರದೇಶ


ಆದರೆ ಹಂಚಿಕೆ ವಿಷಯದಲ್ಲಿ ಕೇಂದ್ರ ಸರ್ಕಾರ ಉತ್ತರ ಪ್ರದೇಶ ಬರೀ 7468 ಕೋಟಿ ತೆರಿಗೆ ಸಂಗ್ರಹ ಮಾಡಿದೆ. ಆದರೆ, ಕೇಂದ್ರದ ಪಾಲು ಹಂಚಿಕೆ ಮಾಡುವಾಗ ಕೇಂದ್ರದ ಬಿಜೆಪಿ ಸರ್ಕಾರ ತಮ್ಮದೇ ಪಕ್ಷ ಆಡಳಿತದಲ್ಲಿ ಇರುವ ಉತ್ತರ ಪ್ರದೇಶಕ್ಕೆ ಬರೋಬ್ಬರಿ 13 ಸಾವಿರದ 88 ಕೋಟಿ ರೂ. ಅನುದಾನ ನೀಡಿದೆ. ಮಹಾರಾಷ್ಟ್ರಕ್ಕೆ 4608 ಕೋಟಿ ರೂ. ಹಂಚಿಕೆ ಮಾಡಿದೆ.

ಇನ್ನು ತೀವ್ರ ಬರಕ್ಕೆ ತುತ್ತಾಗಿರುವ ಕರ್ನಾಟಕಕ್ಕೆ ಸಹ ಅನ್ಯಾಯ ಮಾಡಿದೆ. ನಮ್ಮ ರಾಜ್ಯಕ್ಕೆ ಬರೀ 2600.88 ಕೋಟಿ ರೂ. ಮಾತ್ರ ಹಂಚಿಕೆ ಮಾಡಿದೆ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ