ನಿವೇಶನ ಮಂಜೂರಾತಿ ಪತ್ರ ನೀಡಲು ಕರವೇ ಮನವಿ
ಮಸ್ಕಿ : 2021-22ನೇ ಸಾಲಿನಲ್ಲಿ ಡಾ.ಅಂಬೇಡ್ಕರ್ ವಸತಿ ಯೋಜನೆಯಡಿ ನಿವೇಶನ ಪಡೆದ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಹಾಗೂ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ಕರವೇ ಕಾರ್ಯಕರ್ತರು ಸೋಮವಾರ ತಲೇಖಾನ್ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ತಾಲೂಕಿನ ತಲೇಖಾನ ಗ್ರಾಮ ಪಂಚಾಯಿತಿ ಮುಂಭಾಗ ಫಲಾನುಭವಿಗಳು ಕರವೇ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಗ್ರಾಮ ಪಂಚಾಯಿತಿಗೆ ಹೆಚ್ಚುವರಿ ಮನೆಗಳನ್ನು ಆಯ್ಕೆ ಮಾಡಲಾಯಿತು. ಆದರೆ, ಇದುವರೆಗೂ ಅನುಮೋದನೆ ಪತ್ರ ನೀಡಿಲ್ಲ. ಕರವೇ ತಾಲೂಕು ಘಟಕದ ಅಧ್ಯಕ್ಷ ಮಾತನಾಡಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆಯ್ಕೆಯಾದ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು ಅನುಮತಿ ನೀಡುತ್ತಿಲ್ಲ ಎಂದು ಕರವೇ ತಾಲೂಕ ಅಧ್ಯಕ್ಷ ದುರ್ಗರಾಜ ವಟಗಲ್ ಆರೋಪಿಸಿದರು. ಕೆಲವು ಫಲಾನುಭವಿಗಳು ಮನೆ ನಿರ್ಮಿಸಿಕೊಂಡಿದ್ದಾರೆ.
ಅಭಿವೃದ್ಧಿ ಅಧಿಕಾರಿಗಳು ಅದರ ಜಿಪಿಎಸ್ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಿಲ್ಲ. ಫಲಾನುಭವಿಗೆ ಮನೆ ಕಟ್ಟಿಕೊಳ್ಳಲು ಅವಕಾಶ ನೀಡದಿದ್ದರೆ ಕೂಡಲೇ ಆದೇಶ ಪ್ರತಿ, ಜಿಪಿಎಸ್, ಫೋಟೋ ಅಪ್ಲೋಡ್ ಮಾಡಿ ಮನೆ ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡಿ ಇಲ್ಲವೇ ನಮ್ಮ ಸಂಘಟನೆಯ ವತಿಯಿಂದ
ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಬಾಕ್ಸ್ ಸುದ್ದಿ
ಫಲಾನುಭವಿಗಳಿಗೆ ನಿವೇಶನ ಮಂಜೂರಾತಿ ಪತ್ರ ವಿತರಣೆ.ತಲೇಖಾನ್ ಗ್ರಾ.ಪಂ ಕಾರ್ಯದರ್ಶಿ ತಾಮಸ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ಸ್ಥಳದಲ್ಲಿ ವಸತಿ ಯೋಜನೆಯ 5 ಫಲಾನುಭವಿಗಳಿಗೆ ನಿವೇಶನ ಮಂಜೂರು ಮಾಡಲು ಆದೇಶ ಪತ್ರ ನೀಡಿದರು. ಉಳಿದ 20 ಫಲಾನುಭವಿಗಳಿಗೆ ವಾರದೊಳಗೆ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ಭರವಸೆ ನೀಡಿದರು. ತದ ನಂತರ ಕರವೇ ಕಾರ್ಯಕರ್ತರು ಹೋರಾಟವನ್ನು ಹಿಂಪಡೆದರು.
ಈ ಸಂದರ್ಭದಲ್ಲಿ ಕರವೇ ಮುಖಂಡ ಆರ್.ಕೆ.ನಾಯಕ್ ಕರವೇ ಕಾರ್ಯಕರ್ತರು ಸೇರಿದಂತೆ ವಸತಿ ಯೋಜನೆಯ ಫಲಾನುಭವಿಗಳಾದ ಶಾಂತಮ್ಮ, ಶಾರದ, ಸರೋಜಾ, ಗಂಗಮ್ಮ, ಹನುಮಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ