ಹಿರೇನಗನೂರು ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ.ಹಾಗೂ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಮಕ್ಕಳಿಗೆ ಸನ್ಮಾನ.

ಹಟ್ಟಿ ಚಿನ್ನದ ಗಣಿ-ಹಟ್ಟಿ ಪಟ್ಟಣ ಸಮೀಪದ ಸರಕಾರಿ ಪ್ರೌಢಶಾಲೆ(ಆರ್ ಎಮ್ಎಸ್ಎ) ಹಿರೇನಗನೂರಿನಲ್ಲಿ ಇಂದು ಮಕ್ಕಳ ದಿನಾಚರಣೆ ಮತ್ತು ಜವಾಹರಲಾಲ ನೆಹರು ರವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು ಶಿಕ್ಷಣ ಪ್ರೇಮಿಗಳಾದ ಬಸವರಾಜಪ್ಪ ಕುರುಗೋಡು.ಹಾಗೂ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಂತ ಸಮಾಜ ಸೇವಕ.ಶಿಕ್ಷಣ ಪ್ರೇಮಿ.ಮೌನುದ್ದೀನ್ ಬೂದಿನಾಳ ಇವರನ್ನು ಕಾರ್ಯಕ್ರಮದ ಅತಿಥಿ ಸ್ಥಾನವನ್ನು ಅಲಂಕರಿಸಿದ್ದರು. ಕಾರ್ಯಕ್ರಮದ ಪ್ರಥಮವಾಗಿ ಜವಾಹರ್ ಲಾಲ್

ನೆಹರು ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಕಾರ್ಯಕ್ರಮದ ಪ್ರಾರ್ಥನಾ ಗೀತೆಯನ್ನು ಸಹಶಿಕ್ಷಕರಾದ ರಾಘವೇಂದ್ರ ಸರ್ ಹಾಡಿದರು. 

ನಂತರ ಶಶಿಕಲಾ.ಸುಸನ್ನ.ಹುಲಿಗೆಮ್ಮ.ಹುಚ್ಚರೆಡ್ಡಿ.ವಿದ್ಯಾರ್ಥಿಗಳು ಕಾರ್ಯಕ್ರಮದ ಕುರಿತು ಮಾತನಾಡಿದರು.ಶ್ರೀಮತಿ ಸುರೇಖಾ ಸ ಶಿ ಯವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸ್ವತಃ ತಾವೇ ಮಾಡಿದ ಇಂಗ್ಲೀಷ್ ವಿಷಯದ ಮಾದರಿಗಳು ಗಮನ ಸೆಳೆದವು.

ಒಂದು ವಾರದಿಂದ ದಿನವೂ ಒಂದೊಂದು ಚಟುವಟಿಕೆ ಹಾಗೂ ಆಟಗಳನ್ನು ಹಮ್ಮಿಕೊಳ್ಳಲಾಗಿತ್ತು.ಮತ್ತು ಎಲ್ಲಾ ವಿಷಯಗಳಲ್ಲಿ ರಸಪ್ರಶ್ನೆ ಚಿತ್ರಬಿಡಿಸುವುದು ಪ್ರಮೇಯ.ಗ್ರಾಫ್ ರಚನೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಇದೇ ಸಂದರ್ಭದಲ್ಲಿ ಸರಳ ಜೀವಿ.ಸಮಾಜ ಸೇವಕ. ಶಿಕ್ಷಣ ಪ್ರೇಮಿ.ಮೌನುದ್ದೀನ್ ಬೂದಿನಾಳ ಇವರ ವತಿಯಿಂದ ಹಿರೇನಗನೂರು ಸರಕಾರಿ ಪ್ರೌಢಶಾಲೆಯಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾದ ತಿಮ್ಮಮ್ಮ. ಹಾಗೂ ಗಂಗಮ್ಮ. ಇಬ್ಬರು ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು.ಹಾಗೂ ಪ್ರತಿಭಾ ಕಾರಂಜಿಯಲ್ಲಿ ಜಾನಪದ ನೃತ್ಯದಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಬಹುಮಾನ ನೀಡಲಾಯಿತು.

ನಂತರದಲ್ಲಿ ಸಹ ಶಿಕ್ಷಕರಾದ ರವೀಂದ್ರಸ್ವಾಮ ಇವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ನಂತರ ಗ್ರಾಮದ ಹಿರಿಯರಾದ ಬಸವರಾಜಪ್ಪ ಕುರುಗೋಡ ಇವರು ಮಕ್ಕಳ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡುತ್ತಾ.ನಮ್ಮ ಗ್ರಾಮದ ಪ್ರೌಢಶಾಲೆ ಉತ್ತಮವಾದ ಸಾಧನೆಯನ್ನೂ ಮಾಡುತ್ತಿದೆ.ಮುಂದೆಯೂ ಇದೆ ರೀತಿ ಸಾಧನೆ ಮಾಡಲಿ ಎಂದು ಶುಭಹಾರೈಸಿದರು.ಮುಖ್ಯಗುರುಗಳು ಅಧ್ಯಕ್ಷಿಯ ನುಡಿಗಳನ್ಮಾಡಿದರು. 

ಇದೇ ಸಂದರ್ಭದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿ ಪ್ರದೀಪ್ ತಂದೆ ಬಸವರಾಜ ತಾನೇ ತಯಾರಿಸಿದ ಶಾಲೆಯ ಮಾದರಿಯು ಎಲ್ಲರ ಗಮನ ಸೆಳೆಯಿತು.ದೈಹಿಕ ಶಿಕ್ಷಕರಾದ ಮುಸ್ತಾಖ್ ಅಹ್ಮದ್ ಇವರು ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನಿರೂಪಿಸಿದರು.ಸಹ ಶಿಕ್ಷಕರಾದ ಗೋಪಿಚಂದ್ ವಂದನಾರ್ಪಣೆ ಮಾಡಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ