ಮಕ್ಕಳ ದಿನಾಚರಣೆ : ವಿದ್ಯಾರ್ಥಿ ಪ್ರತಿನಿಧಿಗಳಿಂದ ಕಾರ್ಯಕ್ರಮ ಉದ್ಘಾಟನೆ
ದೇವದುರ್ಗ : ದೇಶಕಂಡ ಧೀಮಂತ ನಾಯಕ ಹಾಗೂ ಅಪ್ರತಿಮ ಸಾಧನೆ ಮಾಡಿದ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮ ದಿನಾಚರಣೆಯನ್ನು ಪಟ್ಟಣದ ರೆಹಮಾನಿಯಾ ಪಬ್ಲಿಕ್ ಸ್ಕೂಲ್ ನಲ್ಲಿ ಆಚರಣೆ ಮಾಡಲಾಯಿತು. ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದ ಪಂಡಿತ ಜವಾಹರ್ ಲಾಲ್ ನೆಹರು ಅವರು ಈ ದಿನವನ್ನು ಮಕ್ಕಳ ದಿನಾಚರಣೆ ಎಂದು ರಾಷ್ಟ್ರವ್ಯಾಪಿಯಾಗಿ ಆಚರಿಸುತ್ತಾರೆ. ಶಾಲೆಯ ಮಕ್ಕಳಾದ ಕಶ್ಯಪ್,ಅತಿಫಾ,ಸವಿತಾ,ರಕ್ಷಿತಾ,ನಾಜಿಯಾ,ಶಾಯಿಸ್ತಾ,ಸುಮಯ್ಯಾ,ಆಶಿಫ್,ಮೇಘನಾ,ಫೈಜಾ,ಅಲಿನಾ ರಫತ್,ಅಪ್ರೋಜ್,ಆಫ್ರೀನ್ ಕೌಸರ್,ಮುಮ್ತಾಜ್,ಕೈಕಶಾ,
ಯಾಸ್ಮಿನ್, ಭಾಷಣ ಮಾಡಿ ಕಾರ್ಯಕ್ರಮಕ್ಕೆ ಮೆರಗು ತಂದು ಕೊಟ್ಟರು ಮತ್ತು ಭೋಧಕ ವರ್ಗ ಕು.ವೈಷ್ಣವಿ, ಲಕ್ಷ್ಮೀ, ಭಾಗ್ಯ ಶ್ರೀ ಅವರು ಮಕ್ಕಳಿಗೆ ಸ್ಪೂರ್ತಿದಾಯಕವಾಗಿ ಬದುಕು ಕಟ್ಟಿಕೊಳ್ಳೆಲೆಂದು ಸ್ವಾಗತಿಸಿ,ಕಾಣಿಕೆ ವಿತರಣೆ ಮಾಡಿ ಶುಭ ಹಾರೈಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ವಿದ್ಯಾರ್ಥಿ ಪ್ರತಿನಿಧಿಗಳಿಂದ ಸಸಿಗೆ ನೀರೆರೆಯುವ ಮುಖಾಂತರ ಚಾಲನೆ ನೀಡಲಾಯಿತು.
ಸಂಸ್ಥೆಯ ಮುಖ್ಯಸ್ಥರಾದ ನಬಿಲಾನ್ ಅವರು ಮಕ್ಕಳು ಬೆಳಗುವ ಬೆಳಕು ಸಿಸ್ತು ಸಂಯಮದ ಮೂಲಕ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಅಧ್ಯಕ್ಷಿಯ ನುಡಿಗಳನ್ನಾಡಿದರು. ನಂತರ ಮಕ್ಕಳಿಗೆ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಿಗೆ ಸಂಬಂಧಿಸಿದಂತೆ ಬಹುಮಾನ ನೀಡಲಾಯಿತು, ಆರನೇ ತರಗತಿಯ ಮಕ್ಕಳು ಗಂಧರ್ವ ಸೇನ ಎಂಬ ಕಿರು ನಾಟಕ ಮಾಡುವ ಮೂಲಕ ನೋಡುಗರನ್ನು ಗಮನ ಸೇಳೆದದ್ದು ಗಮನಾರ್ಹವಾಗಿತ್ತು. ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಸಂಸ್ಥೆಯ ಮಕ್ಕಳಿಗೆ ಸಿಹಿ ಹಂಚಿದರು.
ಕಾರ್ಯಕ್ರಮದಲ್ಲಿ ಸಿಮ್ರಾನ್ ಶಿಕ್ಷಕಿಯರು ವಂದಿಸಿದರು.ಈ ಸಂದರ್ಭದಲ್ಲಿ ಶಾಲಾ ಮುದ್ದು ಮಕ್ಕಳು ಹಾಗೂ ಭೋಧಕವರ್ಗದವರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ