"ರಾಜಕೀಯದಲ್ಲಿ ನಾನು ವಿದ್ಯಾರ್ಥಿ ನಾನು ಅನುಭವಿ ರಾಜಕಾರಣಿಯಲ್ಲ "

 

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ತೂಲಹಳ್ಳಿ ಗ್ರಾಮ ಪಂಚಾಯಿತಿಗೆ ಶಾಸಕರಾದ ಎನ್‌ ಟಿ ಶ್ರೀನಿವಾಸ್ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಅವಲೋಕನ ನಡೆಸಿದರು

"ರಾಜಕೀಯದಲ್ಲಿ ನಾನು ವಿದ್ಯಾರ್ಥಿ ನಾನು ಅನುಭವಿ ರಾಜಕಾರಣಿಯಲ್ಲ "

ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಉಜ್ಜಿನಿ ಜಿಲ್ಲಾ ಪಂಚಾಯಿತಿಗೆ ಶೇಕಡ 70ರಷ್ಟು ಅನುದಾನ ಮೀಸಲಿಟ್ಟಿದ್ದೇವೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯಲ್ಲಿ ರಸ್ತೆ ಶಿಕ್ಷಣ ಆರೋಗ್ಯಕ್ಕೆ ಹೆಚ್ಚು ಹೊತ್ತು ನೀಡಲಿದ್ದೇವೆ ಯಾವುದೇ ಪಕ್ಷ ಜಾತಿ ಪ್ರದೇಶ ನೋಡದೆ ಸರ್ವರ ಅಭಿವೃದ್ಧಿಗೆ ಕೈಜೋಡಿಸುವುದು ನನ್ನ ಗುರಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಕೊನೆ ಗಡಿಭಾಗದಲ್ಲಿ ಇರುವ ಗ್ರಾಮಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತೇನೆ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಭೇದ ಭಾವ ತಾರತಮ್ಯ ಮಾಡುವುದಿಲ್ಲ ತಮ್ಮ ಪರವಾಗಿ ಸದಾಕಾಲ ಕಾರ್ಯನಿರ್ವಹಿಸುತ್ತೇನೆ.

ಅಭಿವೃದ್ಧಿಯ ದೃಷ್ಟಿಯಿಂದ ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ವಾಟ್ಸಪ್ ಗ್ರೂಪ್ ಮಾಡಲಾಗಿದೆ ಅದರಲ್ಲಿ ತಮ್ಮ ಕಷ್ಟಗಳನ್ನು ಹಂಚಿಕೊಳ್ಳಿ ಅದಕ್ಕೆ ನಾನು ನ್ಯಾಯ ದೊರಕಿಸಿ ಕೊಡುತ್ತೇನೆ ಉಜ್ಜಿನಿ ಮತ್ತು ತೂಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಮಾಡುತ್ತೇನೆ ಸರ್ಕಾರಿ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಅದಕ್ಕೆ ತಕ್ಕಂತೆ ಪರಿಹಾರ ಕಂಡುಕೊಳ್ಳುವ ಅದರ ಮೂಲಕ ಜನರ ಕಷ್ಟಗಳಿಗೆ ಶ್ರಮಿಸುತ್ತೇನೆ ಎಂದು ಸಾರ್ವಜನಿಕರಲ್ಲಿ ಹಂಚಿಕೊಂಡರು.

ತೂಲಹಳ್ಳಿ ಮತ್ತು ನಾಗರಕಟ್ಟೆ ಗ್ರಾಮ ಪಂಚಾಯಿತಿಗೆ ಸೇರಿದ ಜಲಜೀವನ್ ಮಿಷಿನ್ ಯೋಜನೆ ಕಾಮಗಾರಿಯನ್ನು ಭೂಮಿ ಪೂಜೆ ಮಾಡುವುದರ ಮೂಲಕ ಈ ಕಾಮಗಾರಿಗೆ ಯಾವುದೇ ಕಳಪೆ ಕಾಮಗಾರಿ ಆಗಬಾರದು ಉತ್ತಮವಾದ ಗುಣಮಟ್ಟದ ಕೆಲಸ ನಡೆಯಬೇಕು ಎಂದು ಅಲ್ಲಿನ ಅಧಿಕಾರಿಗಳಿಗೆ ತಿಳಿಸಲಾಯಿತು.

ಹನುಮನಹಳ್ಳಿ ಗ್ರಾಮದಲ್ಲಿ ಸುಮಾರು ದಿನಗಳಿಂದ ಕಾಡುತ್ತಿರುವ ಸಮಸ್ಯೆ ಬಸ್ ನಿಲ್ದಾಣದಲ್ಲಿ ಕಬ್ಬಿಣದ ವಿದ್ಯುತ್ ಕಂಬಗಳ ಟ್ರಾನ್ಸ್ಫರಂ ಪರಿಶೀಲಿಸಿ ಒಂದು ವಾರದಲ್ಲಿ ಈ ಕೆಲಸ ಮುಗಿಸಬೇಕೆಂದು ಸ್ಥಳದಲ್ಲಿ ಅಲ್ಲಿನ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಯಿತು ಮತ್ತು ಹನುಮನಹಳ್ಳಿ ಸುತ್ತಮುತ್ತಲಿನ ರಸ್ತೆಗಳು ತುಂಬಾ ಅದಿಗೆಟ್ಟು ಹೋಗಿವೆ ಎಂದು ಸಾರ್ವಜನಿಕರು ಮನವಿಯಾಗಿತ್ತು ಅದಕ್ಕೆ ಶೀಘ್ರದಲ್ಲಿ ರಸ್ತೆ ನಿರ್ಮಾಣ ಮಾಡಿಸಿ ಕೊಡುವೆ ಎಂದು ತಿಳಿಸಿದರು. 

 ಹನುಮನಹಳ್ಳಿಯ ಕೆಲವು ಗುಡಿಸಲಾಗಳಿಗೆ ಒಳಗೆ ಹೋಗಿ ಜನರ ಕಷ್ಟವನ್ನು ಆಲಿಸಿ ಶೀಘ್ರದಲ್ಲಿ ಮನೆ ಮುಂಜೂರು ಮಾಡಬೇಕು ಎಂದು ಪಿಡಿಒ ಮತ್ತು ಅಧ್ಯಕ್ಷರಿಗೆ ಸಲಹೆ ನೀಡಿದರು ಆನಂತರ ಕೆಲ ಮಹಿಳೆಯರು ಗೃಹಲಕ್ಷ್ಮಿಭಾಗ್ಯ ಯೋಜನೆ ನಮಗೆ ಬಂದಿಲ್ಲ ಎಂದು ಕೇಳಿದಾಗ ಹಂತ ಹಂತವಾಗಿ ಬರುತ್ತವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜೇಂದ್ರ ಪ್ರಸಾದ್ ಗುತ್ತಿಗೆದಾರರು ಡಿ ಭರಮನಗೌಡ ಅಧ್ಯಕ್ಷರು ಷಕಿರಾಬಿ ಉಪಾಧ್ಯಕ್ಷರು ಹಾಗೂ ಸದಸ್ಯರು ಗ್ರಾಮ ಪಂಚಾಯಿತಿ ತೂಲಹಳ್ಳಿ ಪ್ರಶಾಂತ್ ಕುಮಾರ್ ಪಿಡಿಒ ಸಿದ್ದೇಶ್ ಲೆಕ್ಕಾಧಿಕಾರಿಗಳು ಅಜ್ಜಪ್ಪ ಅಧ್ಯಕ್ಷರು ಚಲವಾದಿ ಮಹಾಸಭಾ ಕೊಟ್ಟೂರು ತಾಲೂಕು ಎಂ ಸುನಿಲ್ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಮತ್ತಿತರರು ಸೇರಿದ್ದರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ