"ಬಾಲ್ಯದಲ್ಲಿಯೇ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ:ಭಾರಿ ಮಾಂತೇಶ್"
ಪುಸ್ತಕ ಪ್ರದರ್ಶನ ,ಶಾಲಾ ಮಕ್ಕಳಿಗೆ ,ಫ್ಯಾಶನ್ ಶೋ, ಚಿತ್ರಕಲೆ, ಗಾಯನ ಸ್ಪರ್ಧೆ ಕಾರ್ಯಕ್ರಮ
ಕೊಟ್ಟೂರು: ಸಾರ್ವಜನಿಕ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾದ ಅಂಗವಾಗಿ ಪುಸ್ತಕ ಪ್ರದರ್ಶನ ಬುಧವಾರ ರಂದು ಏರ್ಪಡಿಸಲಾಗಿತ್ತು.
ಭಾರತೀಯ ಗ್ರಂಥಾಲಯ ಪಿತಾಮಹರಾದ ಪದ್ಮಶ್ರೀ ಡಾಕ್ಟರ್ ಎಸ್ ಆರ್ ರಂಗನಾಥನ್ ಮತ್ತು ಸರಸ್ವತಿ ಭಾವಚಿತ್ರಕ್ಕೆ ಪೂಜೆ ಮಾಡಿ ಪುಷ್ಪಾರ್ಚನೆ ಮಾಡಲಾಯಿತು.
*ಭಾರಿ ಮಾಂತೇಶ್* ನಿವೃತ್ತ ಶಿಕ್ಷಕರು ( ಜ್ಯೋತಿ ) ದೀಪ ಹಚ್ಚುವ ಮೂಲಕ ಉದ್ಘಾಟಿಸಿದರು ಬಾಲ್ಯದಲ್ಲಿಯೇ ಓದು ಹವ್ಯಾಸವನ್ನು ರೂಡಿಸಿಕೊಳ್ಳಬೇಕೆಂದು ಉದ್ಘಾಟಿತರು ಮಾತನಾಡಿದರು.
ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಜೊತೆಗೆ ನಿರಂತರ ಓದುತ್ತಿದ್ದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು *ಟಿ ಅನ್ನಪೂರ್ಣ* ಅಂಗನವಾಡಿ ಮೇಲ್ವಿಚಾರಕ್ಕೆ ( ಸೂಪ್ರ ವೈಸರ್) ಶಿಶು ಅಭಿವೃದ್ಧಿ ಇಲಾಖೆ ಕೂಡ್ಲಿಗಿ ಇವರು ಮಾತನಾಡಿದರು.
ಟಿವಿ ಮೊಬೈಲ್ ನೋಡುವುದನ್ನು ಬಿಟ್ಟು ಪುಸ್ತಕ ಪತ್ರಿಕೆಗಳನ್ನು ಓದುವುದನ್ನು ಹವ್ಯಾಸ ಮಾಡಿಕೊಳ್ಳಬೇಕು ಎಂದು *ನಿಂಗಪ್ಪ ಶಿಕ್ಷಣ ಸಂಯೋಜಕರು* ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕೂಡ್ಲಿಗಿ ಇವರು ಮಾತನಾಡಿದರು.
ಪುಸ್ತಕ ಪ್ರದರ್ಶನ ಏರ್ಪಡಿಸುವ ಉದ್ದೇಶ ರಾಷ್ಟ್ರೀಯ ಗ್ರಂಥಾಲಯ ಆಚರಿಸುವ ಉದ್ದೇಶವನ್ನು ಹೇಳಿದರು ಎಲ್ಲರೂ ಸದಸ್ಯತ್ವವನ್ನು ಪಡೆದು ಓದಬೇಕು ಡಿಜಿಟಲ್ ಗ್ರಂಥಾಲಯವನ್ನು ಬಳಕೆ ಮಾಡಿಕೊಳ್ಳಬೇಕು ಎಂದು *ಮಲ್ಲಪ್ಪ ಗುಡ್ಲಾನೂರ್ ಶಾಖಾ ಗ್ರಂಥಾಲಯ ಅಧಿಕಾರಿ* ಮಾತನಾಡಿದರು.
ಮುರುಗೇಶ್ ಮೇಲ್ವಿಚಾರಕರು, ಬಚೇನಹಳ್ಳಿ ಈಶಪ್ಪ, ಉಪಸ್ಥಿತರಿದ್ದರು.*ನಾರಾಯಣ ಹೆಬ್ಬಾರೆ* ಮುಖ್ಯ ಗುರುಗಳು ನಿರೂಪಿಸಿದರು *ಶ್ರೀನಿವಾಸ್ ಪತ್ತಾರ್* ಸ್ವಾಗತಿಸಿದರು *ಎಚ್ ಮಮತಾ* ವಂದಿಸಿದರು .ಚಿಟ್ಟೆ ಶಾಲಾ ಮಕ್ಕಳು ಪ್ರಾರ್ಥಿಸಿದರು.
ಬನಶಂಕರಿ ಸಮುದಾಯ ಭವನದಲ್ಲಿ ಶಾಲಾ ಮಕ್ಕಳಿಗೆ ಫ್ಯಾಶನ್ ಶೋ, ಚಿತ್ರಕಲೆ, ಗಾಯನ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ