ಕನ್ನಡವನ್ನು ಕಟ್ಟುವ ಕಾರ್ಯ ಪ್ರತಿ ಕನ್ನಡಿಗನಿಂದ ಆಗಬೇಕು : ಸಿದ್ದರಾಮ ಕಲ್ಮಠ

"ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸ ವಿದೆ"

*ಇತಿಹಾಸದಲ್ಲಿ ಸಾಂಸ್ಕೃತಿಕ ಚರಿತ್ರೆಯನ್ನು ಹೊಂದಿರುವ ಕನ್ನಡ ಭಾಷೆಗೆ ತನ್ನದೇ ಆದಂತಹ ವಿಶಿಷ್ಟ ಸ್ಥಾನವಿದೆ *

ಕೊಟ್ಟೂರು :ಕನ್ನಡ ನಾಡು, ಭಾಷೆ, ಸಂಸ್ಕೃತಿ ಗತ ಇತಿಹಾಸವನ್ನು ಹೊಂದಿದ್ದು, ಇದರ ಪರಂಪರ ಉಳಿಸುವುದು ಹಾಗೂ ಕಟ್ಟುವ ಕಾರ್ಯ ಪ್ರತಿಯೊಬ್ಬ ಕನ್ನಡಿಗನಿಂದ ಆಗಬೇಕು. ಅಲ್ಲದೇ ಕನ್ನಡ ಇತಿಹಾಸವನ್ನು ಮುನ್ನೆಡೆಸುವ ನಿಟ್ಟಿನಲ್ಲಿ ದೀರ್ಘಕಾಲಿಕ ಯೋಜನೆ ಯಾರೋಬ್ಬರು ಮಾಡಿಲ್ಲದರಿವುದು ವಿಷಾದನೀಯ ಎಂದು ಕ.ಸಾ.ಪ ಜಿಲ್ಲಾ ನಿಕಟ ಪೂರ್ವ ಅಧ್ಯಕ್ಷ ಸಿದ್ದರಾಮ ಕಲ್ಮಠ ಹೇಳಿದರು.

ಇಲ್ಲಿನ ಡಾ.ಹೆಚ್.ಜಿ.ರಾಜ್ ಸಭಾಂಗಣದಲ್ಲಿ ಕೊಟ್ಟೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಶನಿವಾರ ಅಯೋಜಿಸಿದ್ದ ೬೮ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇವಲ ಭಾಷೆಗಷ್ಟೇ ಸೀಮಿತವಾಗದೇ ಶಿಲ್ಪ ಕಲೆ ಇತರೆ ಸಂಸ್ಕೃತಿಯ ಇತಿಹಾಸ ವನ್ನು ಹೊಂದಿದೆ ಅನೇಕ ರಾಜರ ಪೂರ್ವಿಕರ ಕಾಲದಲ್ಲಿಯೇ ಮಹತ್ವ ಹೊಂದಿದ್ದ ಕನ್ನಡ ಭಾಷೆ ಅಂದಿನಿAದಲೇ ಅದನ್ನು ಉಳಿಸಿಕೊಂಡು ಬಂದಿದೆ .ಕನ್ನಡ ನಾಡಿನ ಇತಿಹಾಸ ಬೇರೆ ಭಾಷೆಯೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಕನ್ನಡ ನಾಡಿನ ಸಾಂಸ್ಕೃತಿಕ ಚರಿತ್ರೆಯನ್ನು ಎಲ್ಲರೂ ಅರಿತಿರಬೇಕು. ಅದರೊಂದಿಗೆ ಕನ್ನಡ ನಾಡಿನ ಮಹತ್ವನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಬೇಕು ಎಂದರು. 

ಕನ್ನಡ ನಾಡು ನುಡಿ ಮತ್ತು ಕರ್ನಾಟಕ ನಾಮಕರಣ ಮಹತ್ವ ಕುರಿತು ಮಾತನಾಡಿದ ಉಪನ್ಯಾಸಕ ಅಕ್ಕಿ ಬಸವೇಶ,  ಕನ್ನಡ ಭಾಷೆಯ ಪದ ಬಳಕೆ ಕ್ರಿ.ಶ.ಪೂರ್ವದಲ್ಲಿ ಇರುವುದಕ್ಕೆ ಇತಿಹಾಸವಿದೆ.  ಇದಕ್ಕಾಗಿ ಗ್ರೀಕ್ ಮತ್ತು ರೋಮನ್ನರು ಕನ್ನಡ ಭಾಷೆಯೊಂದಿಗೆ ಅನ್ಯೋತ್ಯತೆ ಹೊಂದಿದ್ದರು. ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಅಧ್ಯಕ್ಷ ದೇವರಮನಿ ಕೊಟ್ರೇಶ್ ಮಾತನಾಡಿ, ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಕೊಟ್ಟೂರಿನಲ್ಲಿ ಮಾಜಿ ಸಚಿವ ದಿ.ಎಂಎAಜೆ ಸದ್ಯೋಜಾತಪ್ಪ ಅವರು ದೊಡ್ಡ ಸಂಘಟನೆ ಮಾಡಿಕೊಂಡು ಹೋರಾಟ ನಡಸಿದ್ದು ಸ್ಮರಣೀಯವಾದುದು. ಕೊಟ್ಟೂರು ಎಲ್ಲ ಕ್ಷೇತ್ರದ ಸಾಂಸ್ಕೃತಿಕ ನೆಲೆಯನ್ನು ಹೊಂದಿದೆ ಎಂದರು. ಜಿಲ್ಲಾ ಸಹಾಯಕ ಖಜಾನಾಧಿಕಾರಿ ಅಂಜಿನಪ್ಪ ,ನಿವೃತ್ತ ಪ್ರಾಚಾರ್ಯ ಡಾ.ಕೆ.ರೇವಣಸಿದ್ದಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರಣಂ ಮಾತನಾಡಿದರು.

ಕಸಾಪ ತಾಲೂಕು ಘಟಕದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಂಗ ನಿರ್ದೇಶಕ ಎನ್.ವಿ.ಶ್ರೀಕಾಂತ, ರಾಜೇಶ್ ಕರ್ವಾ, ಕನ್ನಹಳ್ಳಿ ರೇಣುಕ ವಾಮದೇವ, ಸುಟ್ಟಕೋಡಿಹಳ್ಳಿ ಚೌಡಪ್ಪ, ಉತ್ತಂಗಿ ಕೊಟ್ರೇಶ್, ಈಶ್ವರಪ್ಪ ತುರುಕಾಣಿ, ಹರ್ಷ , ವೀರಭದ್ರಪ್ಪರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪಿ ಶ್ರೀಧರ ಶೆಟ್ಟಿ , ಡಾ.ರವಿಕುಮಾರ್, ಪ್ರಶಾಂತ್ ಕುಮಾರ್, ಎಸ್,ಎಂ.ಗುರುಪ್ರಸಾದ್,ಕೋರಿ ಬಸವರಾಜ್, ಜಗದೀಶ್ ನಾಯ್ಕ, ಬಂಜಾರ್ ನಾಗರಾಜ, ಬಿಎಂ. ಗಿರೀಶ್ ಮತ್ತಿತರ ಪ್ರಮುಖರು ವೇದಿಕೆಯಲ್ಲಿ ಇದ್ದರು. ಉಪನ್ಯಾಸಕ ಅರವಿಂದ ಬಸಾಪುರ ಸ್ವಗತಿಸಿದರು. ಶಿಕ್ಷಕ ಅಜ್ಜಪ್ಪ ವಂದಿಸಿದರು. ಈಶ್ವರಪ್ಪ ತುರುಕಾಣಿ ನಿರೂಪಿಸಿದರು. ಇದಕ್ಕೂ ಮೊದಲು ರಾಜ್ಯೋತ್ಸವ ನಿಮಿತ್ತ ಭುವನೇಶ್ವರಿ ದೇವಿಯ ಭಾವಚಿತ್ರ ಮೆರವಣಿಗೆ ವಿವಿದ ಕಲಾ ತಂಡಗಳೊAದಿಗೆ ಶಾಲಾ ವಿದ್ಯಾರ್ಥಿಗಳು ಮತ್ತಿತರ ಪಾಲ್ಗೊಳ್ಳುವಿಕೆಯಲ್ಲಿ ಪಟ್ಟಣ ಪ್ರಮುಖ ಬೀದಿಗಳಲ್ಲಿ ವಿಜೃಂಭಣಿಯಿAದ ನಡೆಯಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ