ಹೊಕ್ರಾಣಿ ಗ್ರಾಮದಲ್ಲಿ ಆದಿಕವಿ ವಾಲ್ಮೀಕಿ ಜಯಂತಿ ಆಚರಣೆ
ಮಸ್ಕಿ : ತಾಲೂಕಿನ ಹೊಕ್ರಾಣಿ ಗ್ರಾಮ ದಲ್ಲಿ ವಿಶ್ವ ಗುರು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಅದ್ಧೂರಿ ಮೆರವಣಿಗೆ ಕಾರ್ಯಕ್ರಮ ಜರಗಿತು.
ಆದಿಕವಿ ವಾಲ್ಮೀಕಿ ಶ್ರೀಗಳ ಫೋಟೋ ಮೆರವಣಿಗೆಯು ಮಹಿಳೆಯರು ಕಳಸ ಕುಂಭ ದೊಂದಿಗೆ ಹಾಗೂ ಡಿಜೆ ಸೌಂಡ್ ನೊಂದಿಗೆ ಗ್ರಾಮದ ವಿವಿಧ ಬೀದಿ ಬೀದಿ ಗಳಿಂದ ವೇದಿಕೆ ವರೆಗೆ ಶಾಂತಿಯುತವಾಗಿ ಮೆರವಣಿಗೆ ಮಾಡಲಾಯಿತು. ನಂತರ ಕಾರ್ಯಕ್ರಮದ ಕುರಿತು ಆರ್. ಕೆ ನಾಯಕ ಹಾಗೂ ಇನ್ನುಳಿದ ಗಣ್ಯ ವ್ಯಕ್ತಿಗಳು ವಾಲ್ಮೀಕಿ ಜಯಂತಿ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯಾ ಸಾನಿಧ್ಯವನ್ನು ಶ್ರೀಶ್ರೀ ಶ್ರೀ ಆತ್ಮಾನಂದ ಮಹಾ ಸ್ವಾಮಿಗಳುಮಹರ್ಷಿ ವಾಲ್ಮೀಕಿ ಗುರುಪೀಠ ಉಸ್ಕಿಹಾಳ,ಪವನಕುಮಾರ ಗುರುಗಳು ಹಿರೇಮನ್ನಾಪುರ, ಕಾರ್ಯಕ್ರಮದ ಅಧ್ಯಕ್ಷತೆ ಮಸ್ಕಿ ಶಾಸಕರಾದ ಆರ್. ಬಸನಗೌಡ ತುರುವಿಹಾಳ ವೇದಿಕೆಯನ್ನು ಅಲಂಕರಿಸಿದ್ದರು. ಅಧಿತಿಗಳಾಗಿ ಹನುಮೇಶ ಗುಜ್ಜಲ್ ಬಳಗಾನೂರ ರಾಜ್ಯ ಗೌರವ ಅಧ್ಯಕ್ಷರು ನೈಜ ನಾಯಕರ ಬೇಡರ ಪಡೆ( ರಿ ) ಬೆಂಗಳೂರು, ಆರ್ ಕೆ ನಾಯಕ ಅ.ಕ.ವಾಲ್ಮೀಕಿ ಸಂಘದ ತಾಲೂಕ ಅಧ್ಯಕ್ಷರು,ಶೇಖರಗೌಡ ಬಳಗಾನೂರ, ಶಿವನಗೌಡ ಹೊಕ್ರಾಣಿ, ಜಕ್ಕಪ್ಪ ಗ್ರಾ.ಪಂ ಸದ್ಯಸರು ಗುಂಡ, ಹನುಮನಗೌಡ ಬೋಮ್ಮನಾಳ, ಬಸವರಾಜ್ ಮಟ್ಟೂರು, ಅಯ್ಯಪ್ಪ ಹಳ್ಳಿಗೌಡ ಹೊಕ್ರಾಣಿ, ಕನಕರಾಯ ಉಪನ್ಯಾಸಕರು,ಮಂಜುನಾಥ ಶಿಕ್ಷಕರು ತಲೆಖಾನ್, ಗಂಗಪ್ಪಯ್ಯ ಮಹಾಂಪುರ, ತಿರುಪತೆಪ್ಪ ನಾಯಕ ತುರಿವಿಹಾಳ, ಬಸವರಾಜ್ ಶ್ರೀಪುರo ಜಂಕ್ಷನ, ಮೌನೇಶ್ ನಾಯಕ ಹೊಕ್ರಾಣಿ, ಸರ್ವ ಧರ್ಮದವರು ಊರಿನ ಗುರು ಹಿರಿಯರು,ಯುವಕ ಯುವತಿಯರು ಸೇರಿದಂತೆ ಇನ್ನಿತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ