ಹಿರೇನಗನೂರು ಹಾಗೂ ಚುಕ್ಕನಹಟ್ಟಿ.ಗ್ರಾಮದ ಸಮಾನಮನಸ್ಕರಾ ವೇದಿಕೆಯಿಂದ ವಿನೂತನ ಪ್ರಯತ್ನ.

ಲಿಂಗಸಗೂರು-20:ಹಟ್ಟಿ ಚಿನ್ನದ ಗಣಿ. ಸಮೀಪದ ಹಿರೇನಗನೂರು ಗ್ರಾಮದಲ್ಲಿ ರಾಷ್ಟ್ರಕವಿ ಕುವೆಂಪು ಗ್ರಂಥಾಲಯವನ್ನು ಗ್ರಾಮದ ಸಮಾನ ಮನಸ್ಕರು ವೇದಿಕೆ ವತಿಯಿಂದ ಇಂದು ಆನ್ವರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ  

ಶ್ರೀ ಮುದಿಯಪ್ಪ ಕೋಟ ಮತ್ತು ಉಪಾಧ್ಯಕ್ಷ ಚೆಂದಮ್ಮ ಸಿದ್ದಪ್ಪ ಹುಬ್ಬಳ್ಳಿ ರವರ ಅಮೃತಸ್ಥದಿಂದ ಇಂದು ಉದ್ಘಾಟನೆ ಮಾಡಲಾಯಿತು.

ಈ ವೇಳೆ ಗ್ರಂಥಾಲಯವನ್ನು ಹುಟ್ಟು ಹಾಕುವ ಮನಸ್ಸು ಗ್ರಾಮದ ಸಮಾನ ಮನಸ್ಕರ ವೇದಿಕೆ ಮೂಲಕ ಮಾಡಿದ್ದು ಉತ್ತಮ ಕಾರ್ಯ ಹಾಗಾಗಿ ಆಧುನಿಕ ದಿನಮಾನಗಳಲ್ಲಿ ಪತ್ರಿಕೆ ಮತ್ತು ಪುಸ್ತಕ ಓದುವಂತಹ ಹವ್ಯಾಸ ಬಹಳಷ್ಟು ಕಡಿಮೆಯಾಗುತ್ತಿದೆ. ಇದನ್ನ ಹರಿತ ಗ್ರಾಮದ ಬುದ್ದಿಜೀವಿಗಳು ಚಿಂತಕರು ಒಟ್ಟಾಗಿ ಯುವಕರನ್ನು ಸರಿದಾರಿ ತರುವ ಸಣ್ಣ ಪ್ರಯತ್ನವನ್ನು ಗ್ರಂಥಾಲಯ ತೆರೆಯುವ ಮೂಲಕ ಮಾಡಲಾಯಿತು. ಎನ್ನುವುದು ಅತ್ಯಂತ ವಿಶೇಷವಾಗಿದೆ.

ಈ ಗ್ರಂಥಾಲಯ ಮಾಡುವ ಮನಸ್ಸು ಮಾಡಿದ್ದು ಗ್ರಾಮದ ಹಿರೇನಗನೂರು ಗ್ರಾಮದ ಹಿರಿಯರು ಆದಂತಹ ಶ್ರೀ ಬಸವರಾಜಪ್ಪ ಗೌಡ ಕುರುಗೋಡು.ಮತ್ತು ಚಿನ್ನಪ್ಪ ಕೊಟ್ರಿಕಿ. ಮೌನದ್ದೀನ್ ಬೂದಿನಾಳ. ಅಬ್ರಹಾಮ್ ಸಲಬೂರು.ಸೇರಿ ಅನೇಕರ ಆಶಯವಾಗಿದ್ದು. ಗ್ರಾಮದಲ್ಲಿ ಗ್ರಂಥಾಲಯ ವ್ಯವಸ್ಥೆ ಸ್ವಯಂ ಪ್ರೇರಣೆಯಿಂದ ಮಾಡಿ ಸಹಿತಾಸಕ್ತರನ್ನು ಹುಟ್ಟುಹಾಕುವ ಕೆಲಸ ಮಾಡಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವವಾಗಿದೆ.ಎಂದು ಹೇಳುತ್ತಾ ಕಾರ್ಯಕ್ರಮ ಉದ್ಘಾಟನೆ ವೇಳೆ ಗ್ರಾಮದ ಪಂಚಾಯಿತಿ ಸದಸ್ಯರು. ಎಸ್ ಡಿ ಎಂ ಸಿ ಅಧ್ಯಕ್ಷರು.ಶಾಲೆಯ ಮುಖ್ಯ ಉಪಾಧ್ಯಾಯರು. ಊರಿನ ಗುರುಹಿರಿಯರು.ಮತ್ತು ಪತ್ರಿಕಾ ಮಾಧ್ಯಮದ ಸ್ನೇಹಿತರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ