*ಮನೆಮನೆಗೂ ಅಂಚೆ ಅಣ್ಣ- ವಿ. ಎಲ್, ಚಿತ್ತಕೋಟಿ*
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಚೌಡಾಪುರ ಗ್ರಾಮದಲ್ಲಿ ಬುಧವಾರ ರಂದು ನಡೆದ ರಾಷ್ಟ್ರ ಮತ್ತು ರಾಜ್ಯ ಸರ್ಕಾರಗಳು ಬಡವರಿಗೆ ಮತ್ತು ಕೂಲಿಕಾರ್ಮಿಕರಿಗೆ ವೃದ್ಯಾಪಿಗಳಿಗೆ, ಕೊಡುವ ಸೌಲಭ್ಯಗಳನ್ನು ಆಯಾ ಊರಿನ ಮನೆ ಮನೆಗೆ ತೆರಳಿ ಫಲಾನುಭವಿಗಳಿಗೆ ಮುಟ್ಟಿಸುವ ಜವಾಬ್ದಾರಿಯನ್ನು ಅಂಚೆ ಇಲಾಖೆಯ ಗ್ರಾಮೀಣ ಅಂಚೆ ನೌಕರರು ಮಾಡುವ ಕೆಲಸವನ್ನು ಜಗತ್ತಿನಲ್ಲಿ ಮತ್ತೆ ಯಾರೂ ಕೂಡ ಮಾಡಲಾರರು, ಹಳ್ಳಿ ಹಳ್ಳಿಗೂ ಸಣ್ಣ ಮಟ್ಟದ ಬ್ಯಾಂಕ್ ಆಗಿ ಸಣ್ಣ ಮಟ್ಟದ ಹೂಡಿಕೆಯಗಾರರ ಭವಿಷ್ಯದ ನಿಧಿಯಾಗಿ ಭಾರತ ದೇಶದ ಅಂಚೆ ಇಲಾಖೆ ಕೆಲಸ ಮಾಡುತ್ತಿದೆ ಎಂದು ಬಳ್ಳಾರಿ ವಿಭಾಗದ ಅಂಚೆ ಅಧ್ಯಕ್ಷರಾದ ವಿ, ಎಲ್, ಚಿತ್ತಕೋಟೆ ಇವರು ಕೂಡ್ಲಿಗಿ ಉಪ ವಿಭಾಗದ ಚೌಡಾಪುರ ಗ್ರಾಮದಲ್ಲಿ ನಡೆದ ಜನ ಸಂಪರ್ಕ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು,
ಆಧಾರ್ ಸೌಲಭ್ಯದಿಂದ ಹಲವಾರು ಸೌಲಭ್ಯಗಳು ದೊರಕುತ್ತವೆ ಮತ್ತು ಎಲ್ಲೇ ಖಾತೆ ತೆರೆದರು ಆಧಾರ್ ಕಾರ್ಡ್ ಕಡ್ಡಾಯವಾಗಿ ಇರುತ್ತದೆ, ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕಿನ ಮೂಲಕ ಬ್ಯಾಂಕ್ ಖಾತೆಗಳಿಂದ ಹಣ ಬಿಡಿಸಿಕೊಳ್ಳುವುದು ಮತ್ತು ಅಂಚೆ ಇಲಾಖೆ ಖಾತೆಗಳಿಂದ ಹಣ ಬಿಡಿಸಿಕೊಳ್ಳುವುದು ಹಾಗೂ ಆ ಹಣವನ್ನು ಪೋಸ್ಟ್ ಆಫೀಸ್ ನ ಇತರೆ ಖಾತೆಗಳಿಗೆ ಕಟ್ಟುವುದು, ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಉದ್ಯೋಗ ಖಾತ್ರಿ ಯೋಜನೆಗೆ ಹಾಕಿದ ಹಣವನ್ನು ಬಿಡಿಸಿಕೊಳ್ಳುವ ವ್ಯವಸ್ಥೆಯನ್ನು ಈಗ ಅಂಚೆ ಇಲಾಖೆಯೂ ಮಾಡುತ್ತಿದೆ, ದೇಶದ ಪ್ರಧಾನ ಮಂತ್ರಿಗಳು ಮೊನ್ನೆ ತಾನೆ ಜಾರಿ ಮಾಡಿದ ಮಹಿಳಾ ಸಮ್ಮಾನ್ ಉಳಿತಾಯ ಪತ್ರವು, ಹೆಣ್ಣು ಮಕ್ಕಳ ಬದುಕಿಗೆ ಆಸರೆಯಾಗಿದೆ, ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯು ಒಬ್ಬ ಗ್ರಾಹಕನನ್ನು 21 ವರ್ಷಗಳ ಕಾಲ ನಮ್ಮ ಇಲಾಖೆಯಲ್ಲಿ ಇರಿಸಿಕೊಳ್ಳುವುದು ಇಲಾಖೆ ಹೆಮ್ಮೆಯ ವಿಷಯ, ಇಲಾಖೆಯ ಒಳಗೆ ಬಂದ ಗ್ರಾಹಕನಿಗೆ ಒಂದಲ್ಲ ಒಂದು ರೀತಿಯ ಸೌಲಭ್ಯವನ್ನು ಕೊಟ್ಟು ಆ ವ್ಯಕ್ತಿಯ ಹಣಕಾಸಿನ ಆಧಾರದ ಮೇಲೆ ಅವನಿಗೆ ಆರ್ಥಿಕ ಸ್ವಾವಲಂಬನೆಯನ್ನು ಒದಗಿಸುವಲ್ಲಿ ಮತ್ತು ಪಿಂಚಿಣಿದಾರರಿಗೆ ಭದ್ರತೆಯನ್ನು ಒದಗಿಸುವಲ್ಲಿ ಇಲಾಖೆಯು ತುಂಬಾ ಕೆಲಸ ಮಾಡುತ್ತಿದೆ ಎಂದರು,
ಚೌಡಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಟಿ ನವೀನ್ ಕುಮಾರ್, ದೇಶದಲ್ಲಿ ಅತಿ ದೊಡ್ಡ ಸಂಪರ್ಕ ಜಾಲವನ್ನು ಹೊಂದಿರುವ ಅಂಚೆ ಇಲಾಖೆ ಗ್ರಾಮ ಪಂಚಾಯಿತಿಯಿಂದ ಒದಗಿಸುವ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಬರುವ ಫಲಾನುಭವಿಗಳಿಗೆ ಹಣ ಒದಗಿಸುವುದು ಮತ್ತು ಮಹಾತ್ಮ ಗಾಂಧಿ ರೋಜಗಾರ್ ಯೋಜನೆ ಹಾಗೂ ನರೇಗಾ ಯೋಜನೆಗಳ ಅಡಿಯಲ್ಲಿ ಬರುವ ಫಲಾನುಭವಿಗಳಿಗೆ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮೂಲಕ ಫಲಾನುಭವಿಗಳ ಮನೆ ಮುಂದೆ ಹಣ ವಹಿಸುವ ರೀತಿಯಲ್ಲಿ ನೋಡಿ ಇಂಥ ಇಲಾಖೆ ಇನ್ನೂ ಸಾವಿರಾರು ವರ್ಷ ಇರಲಿ ಎಂದು ಆಶಿಸುತ್ತೇನೆ, ಮತ್ತು ನಾನು ಸಣ್ಣವನಿದ್ದಾಗಿನಿಂದಲೂ ನನಗೆ ಅಂಚೆ ಇಲಾಖೆ ಚಿರಪರಿಚಿತ, ನಾನು ಓದುವಾಗ ಕಾರ್ಡುಗಳನ್ನು ಬರೆಯುತಿದ್ದೆ,, ನಮ್ಮ ತಾಯಿಯು ನನ್ನ ಹೆಸರಿನಲ್ಲಿ ಧರ್ಮಸ್ಥಳದ ಮಂಜುನಾಥನಿಗೆ ಹತ್ತು ರೂಪಾಯಿ MO ಕಳಿಸಿದ್ದಳು, ನನಗೆ ಮೂವರು ಅಕ್ಕತಂಗಿರಿದ್ದರು, ನನ್ನ ತಾಯಿ ಮಾತ್ರ ನನ್ನ ಹೆಸರಿಗೆ ದೇವರಿಗೆ ಅರ್ಚನೆ ಮಾಡುತ್ತಿದ್ದಳು ಎಂದು ತನ್ನ ಚಿಕ್ಕವಯಸ್ಸಿನ ನೆನಪುಗಳನ್ನು ಬಿಚ್ಚಿಟ್ಟರು,
" ಜನಸಂಪರ್ಕ ಅಭಿಯಾನವು ಜನಗಳ ಹಾಗೂ ಅಂಚೆ ಇಲಾಖೆಯ ಮನಸ್ಸುಗಳನ್ನು ಬೆಸೆಯುವ ಕೊಂಡಿಯಾಗಿದೆ " ನಮ್ಮೆಲ್ಲರ ಅತ್ಯಮೂಲ್ಯ ಸಮಯವನ್ನು ಚೌಡಾಪುರ ಗ್ರಾಮದಲ್ಲಿ ಕಳೆಯುವುದಕ್ಕೆ ಕಾರಣವೇನೆಂದರೆ ಈ ಗ್ರಾಮವು 750 ಮನೆಗಳನ್ನು ಹೊಂದಿದ್ದು ಮೂರು ಸಾವಿರ ಜನಸಂಖ್ಯೆಯನ್ನು ಹೊಂದಿರುವ ಪ್ರದೇಶವಾಗಿದ್ದು ಈ ಎಲ್ಲಾ ಜನಗಳು ಅಂಚೆ ಇಲಾಖೆಯ ಸೇವೆಗಳ ಅಡಿಯಲ್ಲಿ ಬರಬೇಕು, ಹಾಗೂ ಅಂಚೆ ಇಲಾಖೆಯು ಕೊಡ ಮಾಡುವ ಗ್ರಾಮೀಣ ಅಂಚೆ ಜೀವವಿಮೆಯನ್ನು ಹೊಂದಬೇಕು, ವೃದ್ಧರು ಅಂಗವಿಕಲರು ವಿಧವೇ ವೇತನ ಪಡೆಯುವ ಹೆಣ್ಣು ಮಕ್ಕಳು ವೃದ್ಧರಾದ ಮೇಲೆ ಅನಾಥರಾಗಬಾರದು, ಯಾವುದೇ ಕಾರಣಕ್ಕೂ ಅನಾಥಾಶ್ರಮಕ್ಕೂ ಮತ್ತು ವೃದ್ಧಾಶ್ರಮಕ್ಕೂ ಹೋಗಬಾರದು, ಸಾಮಾಜಿಕ ಭದ್ರತೆ ಅಡಿಯಲ್ಲಿ ಬರುವ ಪಿಂಚಣಿಗಳಲ್ಲಿಯೇ ಅಲ್ಪಸ್ವಲ್ಪ ಉಳಿತಾಯ ಮಾಡಿ ಹಣ ಕೂಡಿಟ್ಟುಕೊಳ್ಳುವಲ್ಲಿ ಅಂಚೆ ಇಲಾಖೆಯನ್ನು ಬೆಳೆಸಿಕೊಳ್ಳಬೇಕು, ಇದರ ಮೂಲಕ ಚೌಡಾಪರದಲ್ಲಿ ಅಂಚೆ ಇಲಾಖೆಯನ್ನು ಬೆಳೆಸಬೇಕು ಮತ್ತು ಉನ್ನತಿಗೇರಿಸಬೇಕು, ಗ್ರಾಮೀಣ ಅಂಚೆ ನೌಕರ ಇರುವುದೇ ನಿಮ್ಮ ಸೇವೆಗಾಗಿ ಎಂದು ಕೂಡ್ಲಿಗಿಯ ಅಂಚೆಪಾಲಕರಾದ ಅಂಚೆ ಕೊಟ್ರೇಶ್ ಇವರು ಜನ ಸಂಪರ್ಕ ಅಭಿಯಾನದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು,
ಚೌಡಾಪುರದ ಶಾಲೆಯ ಮಕ್ಕಳಿಗೆ ಅತಿ ತ್ವರಿತಗತಿಯಲ್ಲಿ ಖಾತೆಯನ್ನು ತೆರೆಯಬೇಕು ಮತ್ತು ಈ ಖಾತೆಗೆ ಬಿದ್ದಂತಹ ಸ್ಕಾಲರ್ಶಿಪ್ ಗಳನ್ನು ಬಿಡಿಸಿಕೊಡಬೇಕು, ಇಂಥ ಸಣ್ಣ ಹಳ್ಳಿಗೆ ಬಂದು ದೊಡ್ಡ ಕಾರ್ಯಕ್ರಮವನ್ನು ಆಯೋಜನೆ ಮಾಡಿದಂತಹ ಅಂಚೆ ಇಲಾಖೆಯನ್ನು ನಾವೆಂದು ಮರೆಯಲು ಸಾಧ್ಯವಿಲ್ಲ, ಶಾಲೆಯಲ್ಲಿ ನಮ್ಮ ಮಕ್ಕಳಿಗೆ ಅಂಚೆ ಇಲಾಖೆಯ ಬಗ್ಗೆ ಪಾಠಗಳನ್ನು ಮಾಡುತ್ತೇವೆ ಎಂದು ಸರ್ಕಾರಿ ಪ್ರಾಥಮಿಕ ಶಾಲೆ, ಗೊಲ್ಲರಟ್ಟಿಯ ಮುಖ್ಯ ಗುರುಗಳಾದ ಮಂಜುನಾಥ್ ಇವರು ಮಾತನಾಡಿದರು,
ಕಳೆದ ಆರು ತಿಂಗಳಿಂದ ಪ್ರತಿ ಗ್ರಾಮೀಣ ಅಂಚೆ ಕಚೇರಿಯಲ್ಲಿ ಜನ ಸಂಪರ್ಕ ಅಭಿಯಾನವನ್ನು ಏರ್ಪಡಿಸಿ ಇದರ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಇನ್ನು ಯಾವ ಯಾವ ಸೌಲಭ್ಯಗಳನ್ನು ಇವರಿಗೆ ಕೊಡಬಹುದು ಮತ್ತು, ಇದರ ಮೂಲಕ ಗ್ರಾಮೀಣ ಅಂಚೆ ಪ್ರದೇಶದಲ್ಲಿ ಇರುವ ಅಂಚೆ ಇಲಾಖೆಗಳನ್ನು ಹೇಗೆ ಭದ್ರ ಪಡಿಸಬಹುದು ಎನ್ನುವ ನಿಟ್ಟಿನಲ್ಲಿ ಈ ಜನ ಸಂಪರ್ಕ ಅಭಿಯಾನವನ್ನು ಪ್ರತಿ ಗ್ರಾಮೀಣ ಅಂಚೆ ಕಛೇರಿ ಇರುವ ಊರಲ್ಲಿ ಏರ್ಪಡಿಸಲಾಗುತ್ತದೆ ಎಂದು ಕೂಡ್ಲಿಗಿಯ ಉಪ ವಿಭಾಗದ ಅಂಚೆ ನಿರೀಕ್ಷಕರಾದ ಶಶಿಧರ್ ಹಿರೇಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು,
ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ನ ಡ್ರೈವನ್ನು ಚೌಡಾಪುರದ ಎಲ್ಲಾ ಶಾಲಾ ಮಕ್ಕಳಿಗೂ ಏರ್ಪಡಿಸಿ ಎಲ್ಲ ಮಕ್ಕಳಿಗೂ ಖಾತೆಗಳನ್ನು ತೆರೆದು ಅವರವರ ಖಾತೆಗೆ ಸ್ಕಾಲರ್ಶಿಪ್ ಹಣವನ್ನು ಬೀಳುವಂತೆ ಮಾಡುವ ಸೌಲಭ್ಯವನ್ನು ಅತಿ ಶೀಘ್ರದಲ್ಲಿ ಅಂಚೆ ಇಲಾಖೆ ಚೌಡಾಪುರದಲ್ಲಿ ಮಾಡುತ್ತದೆ ಎಂದು ಕೂಡ್ಲಿಗಿಯ ಅಂಚೆ ಸಹಾಯಕರಾದ ಸುರೇಶ್ ಕುಮಾರ್ ಎಲ್, ಎಸ್ ಕಾರ್ಯಕ್ರಮವನ್ನು ನಿರ್ವಹಿಸಿ ಮಾತನಾಡಿದರು,
ಕೂಡ್ಲಿಗಿ ಅಂಚೆ ಸಹಾಯಕರಾದ ದುರುಗಪ್ಪನವರು ಚೌಡಾಪುರದ ಅನೇಕ ಫಲಾನುಭವಿಗಳಿಗೆ ಆಧಾರ್ ತಿದ್ದುಪಡಿ ಮಾಡಿದರು, ಒಟ್ಟು 12 ಸೇವೆಗಳಿಗಿಂತಲೂ ಹೆಚ್ಚು ಸೌಲಭ್ಯಗಳನ್ನು ಒಂದೇ ಸೂರಿನಡಿಯಲ್ಲಿ ಇಂದು ಚೌಡಾಪುರದ ಜನಗಳಿಗೆ ಕಲ್ಪಿಸಲಾಗಿತ್ತು, ಕೂಡ್ಲಿಗಿ ಉಪ ವಿಭಾಗದ ಅಂಚೆ ಮೇಲ್ವಿಚಾರಕರಾದ ಗಂಗಣ್ಣ ಮತ್ತು ರವಿಕುಮಾರ್, ಇದರ ನೇತೃತ್ವವನ್ನು ವಹಿಸಿಕೊಂಡಿದ್ದರು, ಕೂಡ್ಲಿಗಿಯ ಅಂಚೆಪೇದೆ ಪರಸಪ್ಪ ರನ್ನು ಒಳಗೊಂಡಂತೆ ಎಲ್ಲಾ ಗ್ರಾಮೀಣ ಅಂಚೆ ನೌಕರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಅನುಷಾ ಮತ್ತು ಸಂಗಡಿಗರು ಪ್ರಾರ್ಥನೆ ಮಾಡಿದರು, ಸುರೇಶ್ ಕುಮಾರ್ ಎಲ್, ಎಸ್, ಸ್ವಾಗತಿಸಿ ನಿರೂಪಣೆ ಮಾಡಿದರು, ಎ ,ಕೆ, ಕೊಟ್ರೇಶ್ ವಂದಿಸಿದರು ,
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ