ಕನಕ ಜಯಂತಿಗೆ ಹಾಲುಮತ ಸಮಾಜದಿಂದ ಶಾಸಕ ಡಾ. ಶ್ರೀನಿವಾಸ್ ರಿಗೆ ಕಂಬಳಿ ಹೊದಿಸಿ ಆಹ್ವಾನ
ಕೂಡ್ಲಿಗಿ ಕ್ಷೇತ್ರದ ಹಾಲುಮತ ಸಮುದಾಯದ ಮುಖಂಡರು , ತಾಲೂಕು ಕುರುಬ ಸಂಘಟನೆಯ ಪದಾಧಿಕಾರಿಗಳು ಸಂಘ ಬುಧವಾರ ರಂದು ಮಾನ್ಯಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ರವರ ಜನ್ಮಸ್ಥಳವಾದ ನರಸಿಂಹಗಿರಿ ಗ್ರಾಮಕ್ಕೆ ನೂರಾರು ಹಾಲುಮತ ಸಮುದಾಯದ ಮುಖಂಡರುಗಳು ತೆರಳಿ ಮತ್ತು ಸಮಾಜ ಸೇವಕರಾದ ಶಾಸಕರ ಸಹೋದರ ತಮ್ಮಣ್ಣ ಎನ್. ಟಿ. ಅವರನ್ನು ಕಂಬಳಿ ಮೂಲಕ ಸನ್ಮಾನಿಸಿದರು.
ಕೂಡ್ಲಿಗಿ ಪಟ್ಟಣದ ಚಂದ್ರಶೇಖರ ಆಜಾದ್ ರಂಗಮಂದಿರದಲ್ಲಿ ದಿನಾಂಕ 30-11-23 ರಂದು ನಡೆಯಲಿರುವ ದಾಸಶ್ರೇಷ್ಠ ಸಂತ ಶ್ರೀ ಕನಕದಾಸರ ಅದ್ದೂರಿ ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಶಾಸಕರು ಮಾತನಾಡಿ , ಕೂಡ್ಲಿಗಿ ಕ್ಷೇತ್ರದ ಜನರ ಒಳಿತಿಗಾಗಿ ಹೋಬಳಿ ಮಟ್ಟದಲ್ಲಿ ಕಛೇರಿಯನ್ನು ತೆರೆಯುತ್ತೇವೆ. ಹಾಗೆಯೇ ಸರ್ವ ಜನಾಂಗದ ಶಾಂತಿಯ ತೋಟವಾಗಿ ಎಲ್ಲರೂ ಅಭಿವೃದ್ಧಿ ವಿಚಾರದಲ್ಲಿ ಒಟ್ಟಾಗಿ ಹೋಗೋಣ ಎಂದರು. ಈ ಸಂದರ್ಭದಲ್ಲಿ ಕೂಡ್ಲಿಗಿ ಮತ ಕ್ಷೇತ್ರದ ಹಾಲುಮತ ಸಮಾಜದ ಮುಖಂಡರು ಹಾಗೂ ಕುರಬ ಸಂಘದ ಅಧ್ಯಕ್ಷರಾದ ಬೋಪಲಾಪುರದ ಬಸವರಾಜ,ಉಪನ್ಯಾಸಕರು ಟಿ. ದೇವಪ್ಪ, ಕೆ. ರಾಘವೇಂದ್ರ, ಕೆಂಚ ಲಿಂಗಪ್ಪ, ಮಲ್ಲಿಕಾರ್ಜುನ ಉಮೇಶ್,ಕಟ್ರಳ್ಳಿ ಬಸವರಾಜ್, ಶಿವರಾಮಪ್ಪ, ಮದ್ಯಾನಪ್ಪ, ನಾಗೇಶ್ ಮಹದೇವಪ್ಪ, ಕನಮೋಡುಗು ಭುಜಂಗಪ್ಪ ಅಂಜಿನಪ್ಪ,ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ