ಓದುವ ಹವ್ಯಾಸದಿಂದ ನಿಮ್ಮ ವ್ಯಕ್ತಿತ್ವದ ಬದಲಿಸಬಹುದು :*ಶ್ರೀ ಅಮರೇಶ್ ಜಿ ಕೆ ತಹಸೀಲ್ದಾರ್
*ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ*
ಕೊಟ್ಟೂರು ಸಾರ್ವಜನಿಕ ಗ್ರಂಥಾಲಯದಿಂದ *ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ* ಸಮಾರೋಪ ಸಮಾರಂಭವನ್ನು *ಭಾಗೀರಥಿ ಮರುಳ ಸಿದ್ದನಗೌಡ ಕಾಲೇಜಿನಲ್ಲಿ* ಹಮ್ಮಿಕೊಳ್ಳಲಾಗಿತ್ತು.
ಸ್ವತಹ ಪುಸ್ತಕಗಳನ್ನು ಕೈಯಲ್ಲಿ ಹಿಡಿದು ಓದುವುದಕ್ಕೂ ಮೊಬೈಲ್ನಲ್ಲಿ ಓದುವುದಕ್ಕೂ ಬಹಳ ವ್ಯತ್ಯಾಸವಿದೆ, ಪತ್ರಿಕೆಗಳನ್ನು ಸತತ ಓದಿ ನಿಂದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಯಿತು ಹಾಗೂ ನಿಮ್ಮ ವ್ಯಕ್ತಿತ್ವದ ಗುರುತಿಗೆ ಪುಸ್ತಕಗಳು ಸದಾ ಕೈಯಲ್ಲಿ ಹಿಡಿದು ಓದಬೇಕು ಎಂದು *ಶ್ರೀ ಅಮರೇಶ್ ಜಿ ಕೆ* *ತಹಸೀಲ್ದಾರರು* ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಚೆನ್ನಾಗಿ ಓದಿದವರಿಗೆ ಇಡೀ ಜಗತ್ತು ಕೈಯಲ್ಲಿ ಇರುತ್ತದೆ , ನಮ್ಮ ಭವಿಷ್ಯವನ್ನು ಓದಿನಿಂದಲೇ ರೂಪಿಸಿಕೊಳ್ಳಬೇಕೆಂದು *ಶ್ರೀಮತಿ ನಿರ್ಮಲಾ ಶಿವನಗುತ್ತಿ* ಪ್ರಾಚಾರ್ಯರು ಇವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಯ ಬಹಳ ಅಮೂಲ್ಯವಾದದ್ದು, ಈ ಸಮಯವನ್ನು ಓದಿನಲ್ಲಿಯೇ ಕಳೆಯಬೇಕು, ಸಂಸ್ಕಾರ ಬೆಳೆಸಿಕೊಳ್ಳಿ ನೀವೆಲ್ಲರೂ ಹೆಚ್ಚು ಹೆಚ್ಚು ಓದಿ ಓದುವ ಸ್ವಾರ್ಥತೆ ನಿಮ್ಮಲ್ಲಿರಬೇಕು ಎಂದು *ಶ್ರೀದೇವರ ಕೊಳದ ಆನಂದ* ಶಿಕ್ಷಣ ಸಂಯೋಜಕರು ಮಾತನಾಡಿದರು.
ಎಲ್ಲಾ ವಿದ್ಯಾರ್ಥಿಗಳು ಕೊಟ್ಟೂರು ಸಾರ್ವಜನಿಕ ಸಾರ್ವಜನಿಕ ಗ್ರಂಥಾಲಯಕ್ಕೆ ಬಂದು ಡಿಜಿಟಲ್ ಗ್ರಂಥಾಲಯ ಸದಸ್ಯತ್ವವನ್ನು ಪಡೆದು ಸದಾ ಓದುತ್ತಿರಬೇಕು ಎಂದು *ಮಲ್ಲಪ್ಪ ಗುಡ್ಲಾನೂರ್* ಶಾಖಾ ಗ್ರಂಥಾಲಯ ಅಧಿಕಾರಿ ಮಾತನಾಡಿದರು.
೧ . *ಪಿ ಬಸವನಗೌಡ* ಪರಿಸರ ಪ್ರೇಮಿಗಳು ಹಾಗೂ ೨. *ಅಂಬಿಕಾ ಕೆ* ಶುಶ್ರುಶಕ ಅಧಿಕಾರಿ ಸಮುದಾಯ ಆರೋಗ್ಯ ಕೇಂದ್ರ ಕೊಟ್ಟೂರು ಇವರಿಗೆ . 2023 2024ನೇ ಸಾಲಿನ *ಉತ್ತಮ ಓದುಗ ಪ್ರಶಸ್ತಿ* ಪ್ರದಾನ ಮಾಡಲಾಯಿತು.
*ಮುರುಗೇಶ್ ಗೌಡ* ತಾಲೂಕು ಅಧ್ಯಕ್ಷರು ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಸಂಘ ಕೊಟ್ಟೂರು.*ಬಾಚೇನಹಳ್ಳಿ ಈಶಪ್ಪ* ನಿವೃತ್ತ ಹಿರಿಯ ಫಾರ್ಮಸಿ ಅಧಿಕಾರಿ. *ಶ್ರೀನಿವಾಸ್ ಪತ್ತಾರ, ಮರುಳಪ್ಪ* ಉಪನ್ಯಾಸಕರು ಉಪಸ್ಥಿತರಿದ್ದರು.
*ಕೆ ತೇಜಾ* ಪ್ರಾರ್ಥಿಸಿದರು *ಅಶ್ವಿನಿ ಡಿ* ಸ್ವಾಗತಿಸಿದರು *ಐಶ್ವರ್ಯ ಎಚ್* ನಿರೂಪಿಸಿದರು *ಬಿ ಕಾವ್ಯ* ವಂದಿಸಿದರು .ಸ್ಪರ್ಧಾ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನಗಳನ್ನು ವಿತರಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ