ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ, ಸಂವಿಧಾನ ಪೀಠಿಕೆ ಓದಿ ನಮನ ಸಲ್ಲಿಕೆ

ಕೊಟ್ಟೂರು: ಪಟ್ಟಣದ ಪೊಲೀಸ್ ಠಾಣೆಯಲ್ಲಿ ನವಂಬರ್ 26 ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹಾಗೂ ಸಂವಿಧಾನ ಪೀಠಿಕೆಯನ್ನು ಓದುವುದರ ಮೂಲಕ ನಮನವನ್ನು ಸಲ್ಲಿಸಲಾಯಿತು.

ಸಂವಿಧಾನ ರಚಿಸುವ ಪೂರಕವಾಗಿ 13 ಸಮಿತಿಗಳನ್ನು ರಚಿಸಲಾಯಿತು ಇದರಲ್ಲಿ 7 ಸದಸ್ಯರುಗಳನ್ನು ನೇಮಕ ಮಾಡಲಾಯಿತು ಅದರಲ್ಲಿ ಸಂವಿಧಾನದ ಮೂಲ ಕರುಡು ರಚನ ಸಮಿತಿ ಅಧ್ಯಕ್ಷರನ್ನಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಆಯ್ಕೆಮಾಡಲಾಯಿತು ದಿನದಲ್ಲಿ 18 ಗಂಟೆಗಳ ಕಠಿಣ ಶ್ರಮ ದಿಂದ ನೊಂದವರ ಪಾಲಿಗೆ ಬೆಳಕಾಗುವಂತೆ 2 ವರ್ಷ 11ತಿಂಗಳು 18 ದಿನಗಳ ಕಾಲ ಸಂವಿಧಾನ ಎನ್ನುವ ಅದ್ಭುತ ವಾದ ಶಿಲ್ಪವನ್ನು ನಿರ್ಮಿಸಿ ಭಾರತದ ಸಂವಿಧಾನ ಶಿಲ್ಪಿಯಾಗಿ ಡಾ. ಬಿ. ಆರ್ ಅಂಬೇಡ್ಕರ್ ರವರು ಹೊರಹೊಮ್ಮಿದರು ಎಂದು ಎಎಸ್‌ಐ ಚಂದ್ರಪ್ಪ ನವರು ಮಾತನಾಡಿದರು.

ಭಾರತದ ಸಂವಿಧಾನ ಸರ್ವ ಜನರಿಗೂ ಸರಿಸಮನವಾದ ಹಕ್ಕು ನೀಡಿರುವ ಜಗತ್ತಿನ ಅತೀ ದೊಡ್ಡ ಲಿಖಿತ ಸಂವಿಧಾನ ಇದನ್ನು ಪ್ರತಿ ಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆಯಬೇಕು ಎಂದು ಪೊಲೀಸ್ ಕಾನ್ಸೆಬಲ್ ವಿಷ್ಣುರವರು ಮಾತನಾಡಿದರು.

ಪೊಲೀಸ್ ಪೇದೆಗಳಾದ ಚಂದ್ರಮೌಳಿ ನಾಗರಾಜ್, ರಾಜೇಂದ್ರ, ಬಸವನಗೌಡ, ನೂರು ಅಹಮದ್, ಮಂಜಮ್ಮ, ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ