"ಕರುನಾಡು ರತ್ನ ಪ್ರಶಸ್ತಿಗೆ ಕೆ ಎಸ್ ನಾಗರಾಜ್ ಗೌಡ ಆಯ್ಕೆ"

ಕೊಟ್ಟೂರು:ಸಮಾಜಮುಖಿ ಸೇವಾ ಸಂಘ (ರಿ) ಕರ್ನಾಟಕ ಹಾಗೂ ಶ್ರೀನಿಧಿ ಫೌಂಡೇಶನ್ (ರಿ) ಕರ್ನಾಟಕ ಇವರ ಸಹಯೋಗದಲ್ಲಿ  ಕನ್ನಡ ರಾಜ್ಯೋತ್ಸವದ ಅಂಗವಾಗಿ

ಧಾರವಾಡ ರಂಗಾಯಣದಲ್ಲಿ ಭಾನುವಾರ ಬೆಳಿಗ್ಗೆ ನಡೆದಿರುವ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಕೊಟ್ಟೂರಿನ ದಿ. ಕೆ ಎಸ್ ಕೊಟ್ರು ಗೌಡರ ಮಗನಾದ

ಕೆ ಎಸ್ ನಾಗರಾಜ್ ಗೌಡ  ಇವರಿಗೆ ಕರುನಾಡು ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಎಂದು ಶ್ರೀನಿಧಿ ಫೌಂಡೇಶನ್ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಶಿವಕನವರು ತಿಳಿಸಿದ್ದಾರೆ.


ಕೆ ಎಸ್ ನಾಗರಾಜ್ ಗೌಡ ಇವರು ಪಟ್ಟಣ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ನಡಿಯುವ

ಧಾರ್ಮಿಕ  ಕೈಂಕರ್ಯ ಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ ,ಶಿವರಾಜ್ ಕುಮಾರ್ ಹಾಗೂ ರಮೇಶ್ ನಟಿಸಿರುವ ಭೂಮಿ ತಾಯಿ ಚುಚ್ಛಲ ಮಗ ಚಲನಚಿತ್ರದಲ್ಲಿ  ನಟಿಸಿದ್ದಾರೆ.


ಸ್ವಾತಂತ್ರ್ಯ ಹೋರಾಟಗಾರರ ಮೊಮ್ಮಗ ಹಾಗೂ  ರಾಜ್ಯ ರಸ್ತೆ ಬದಿ ವ್ಯಾಪಾರ ಮಹಾ ಮಂಡಳ ವಿಜಯ ನಗರ ಜಿಲ್ಲೆಯ ಸದಸ್ಯರು ಮತ್ತು ಸ್ಥಳೀಯ ತಲ್ಲೂಕು ಉಪಾಧ್ಯಕ್ಷರಾಗಿ ಸೇವಿ ಸಲ್ಲಿಸುತ್ತಿರುವ ಇವರು 

ಕನ್ನಡ ನಾಡಿನ ನೆಲ, ಜಲ, ಭಾಷೆಯ ಹಿತಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಧಾರ್ಮಿಕ ಕ್ಷೇತ್ರದಲ್ಲಿ ಸಲ್ಲಿಸಿದ ಇವರ ನಿಸ್ವಾರ್ಥ 

ಸೇವೆಯನ್ನು ಗುರುತಿಸಿ ಇವರಿಗೆ “ಕರುನಾಡು ರತ್ನ ಪ್ರಶಸ್ತಿ” ಯನ್ನು ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಲಾಗುವುದು ಎಂದು 

ಗೌರವಾಧ್ಯಕ್ಷರು ಡಾ.ಮಂಜುನಾಥ ಎನ್. ಶಿವಕ್ಕನವರ ತಿಳಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ