ಪ್ರಾಚ್ಯವಸ್ತು ಇಲಾಖೆ ಜಾಗ ಒತ್ತುವರಿ.ಭೂಮಾಪನ ಹಾಗೂ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಜಂಟಿ ಸರ್ವೇ
ಮಸ್ಕಿ : ಪ್ರಾಚ್ಯವಸ್ತು ಇಲಾಖೆ ವ್ಯಾಪ್ತಿಯ ಪಟ್ಟಣದ ಹೆದ್ದಾರಿ ಪಕ್ಕದ ಪರಡಿ ಸಂಖ್ಯೆ 17ರಲ್ಲಿ 15 ಗುಂಟೆ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿದ್ದಾರೆ ಎಂಬ ದೂರಿನ ಮೇಲೆ ಭೂಮಾಪನ ಅಧಿಕಾರಿಗಳು ಹಾಗೂ ಹಂಪಿಯ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಜಂಟಿ ಸರ್ವೇ ಆರಂಭಿಸಿದರು.
ಬೆಳಿಗ್ಗೆಯಿಂದಲೇ ಪುರಸಭೆಯ ಸಿಬ್ಬಂದಿ ಸಹಯೋಗದೊಂದಿಗೆ ಪ್ರಾಚ್ಯವಸ್ತು ಇಲಾಖೆಯ ಕಿರಣ ಬಾಬು ತಂಡದ ಸಿಬ್ಬಂದಿ ಹಾಗೂ ಸರ್ವೇ ಅಧಿಕಾರಿಗಳು ಹೆದ್ದಾರಿ ಪ್ರಾಚ್ಯವಸ್ತು ಇಲಾಖೆಗೆ ಸೇರಿದ ಜಾಗದ ಸರ್ವೇ ನಡೆಸಿದರು.
ಜಾಗ ಒತ್ತುವರಿ ಮಾಡಿದ್ದನ್ನು ವಿರೋಧಿಸಿ ಸಾರ್ವಜನಿಕ ಆಸ್ತಿ ಸಂರಕ್ಷಣ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಈಚೆಗೆ ಧರಣಿ ನಡೆಸಿ ಸ್ವಾಧೀನಕ್ಕೆ ತೆಗೆದುಕೊಳ್ಳುವಂತೆ ಹೋರಾಟ ಮಾಡಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.
*ಹೇಳಿಕೆ* ..
15 ಗುಂಟೆ ಜಾಗ
ಒತ್ತುವರಿಯಾಗಿದ್ದ
ಸರ್ವೇ ವೇಳೆ ಪತ್ತೆಯಾಗಿದೆ. ಈ ಬಗ್ಗೆ ತಹಶೀಲ್ದಾರ್, ಪ್ರಾಚ್ಯವಸ್ತು ಇಲಾಖೆಗೆ ವರದಿ ನೀಡಲಾಗುವುದು.
ಹಜರತ್, ಸರ್ಕಾರಿ ಭೂಮಾಪಕ.
*ಹೇಳಿಕೆ.*
ಹೋರಾಟ ಹಾಗೂ ದೂರಿನ ಮೇರೆಗೆ ಸರ್ವೇ ಆರಂಭವಾಗಿದ್ದು ಒಂದೇರಡು | ದಿನಗಳಲ್ಲಿ ವರದಿ ನೀಡುವುದಾಗಿ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹೋರಾಟ ಸಮಿತಿಯ ಮುಖಂಡ ಬಸವರಾಜ ನಾಯಿಕೋಡೆ.
ಈ ವೇಳೆ,ಪುರಸಭೆ ಮಾಜಿ ಸದಸ್ಯ ಎಂ.ಅಮರೇಶ, ನಾಗಭೂಷಣ, ಅಮರಪ್ಪ ಗುಡದೂರು, ಮಲ್ಲಯ್ಯ ಮುರಾರಿ, ರವಿ ಮಡಿವಾಳ, ಪುರಸಭೆ ಕಂದಾಯ ನಿರೀಕ್ಷಕ ಜಗದೀಶ ಸೇರಿದಂತೆ ಮತ್ತು ಸಿಬ್ಬಂದಿ ಇತರರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ