ರೈತ ಬಾಂಧವರಿಗೆ ತಾಡಪಲ್ ಹಂಚಿಕೆ

ಮಸ್ಕಿ : ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಪ್ರಭಾರಿ ಕೃಷಿ ಅಧಿಕಾರಿ ಶಿವಶರಣ ಭೋವಿ ಇವರು ತಾಂಡಾ ಸೇರಿ 58 ಹಳ್ಳಿಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದ ರೈತ ಬಾಂಧವರಿಗೆ ಲಾಟರಿ ಆಯ್ಕೆ ಮೂಲಕ ತಾಡಪಲ್ ಅನ್ನು ಹಂಚಿಕೆ ಮಾಡಲಾಯಿತು.

ಮಸ್ಕಿ ರೈತ ಸಂಪರ್ಕ ಕೇಂದ್ರದ ಪ್ರಭಾರಿ ಕೃಷಿ ಅಧಿಕಾರಿ ಶಿವಶರಣ ಭೋವಿ ಇವರು ತಾಲೂಕಿನ ಮಸ್ಕಿ ಪುರಸಭೆ, ಗ್ರಾಮ ಪಂಚಾಯತಿಗಳಾದ ಅಂಕುಶ ದೊಡ್ಡಿ, ಮಟ್ಟೂರು, ಅಡವಿಭಾವಿ, ಕನ್ನಾಳ, ತಲೇಖಾನ್, ಮೆದಿಕಿನಾಳ, ಸಂತೆ ಕಲ್ಲೂರು, ಮಾರಲದಿನ್ನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತಾಂಡಾ ಸೇರಿ 58 ಹಳ್ಳಿಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದ ರೈತ ಬಾಂಧವರಿಗೆ ಲಾಟರಿ ಆಯ್ಕೆ ಮೂಲಕ ತಾಡಪಲ್ ಅನ್ನು ಹಂಚಿಕೆ ಮಾಡಲಾಯಿತು.

ವಿಭಿನ್ನ ಎಂಬಂತೆ ರಾಯಚೂರು ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳ ಹಂಚಿಕೆಯ ಮುಂಚಿತವಾಗಿಯೇ ಮಸ್ಕಿ ಕೇಂದ್ರದಲ್ಲಿ ತಾಡಪಲ್ ಅನ್ನು ಹಂಚಿಕೆ ಮಾಡಿದ್ದು ವಿಶೇಷ.

ಇದೇ ಸಂದರ್ಭದಲ್ಲಿ ಪರಶುರಾಮ್ ಅಂಕುಶ ದೊಡ್ಡಿ, ಪರಶುರಾಮ್ ಉಸ್ಕಿಹಾಳ, ಬೆಂಜಮಿನ್ ,ಭೀಮಣ್ಣ ಕುಣೆ ಕೆಲ್ಲೂರು,

ರಿಯಾಜ್ ಎಟಿಎಂ,ರಮೇಶ್ ಉಸ್ಕಿಹಾಳ, ಪ್ರಸಾದ್ ಮಸ್ಕಿ ಸಿಬ್ಬಂದಿ ವರ್ಗ ಸೇರಿದಂತೆ ವಿವಿಧ ಗ್ರಾಮಗಳ ರೈತರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ