ನಕಲಿ ವೈದ್ಯ ಜಗದೀಶ್ ನನ್ನು ಜೈಲಿಗೆ ಕಳುಹಿಸಿದ:ತಾಲೂಕು ವೈದ್ಯಾಧಿಕಾರಿ ಪ್ರದೀಪ್ ಕುಮಾರ್
"ನಕಲಿ ವೈದ್ಯ ಜಗದೀಶ್ ವಿರುದ್ಧ ಪ್ರಕರಣ ದಾಖಲು"
ಕೊಟ್ಟೂರು: ಪಟ್ಟಣದ ಮಯೂರ್ ಹೋಟೆಲ್ ಮುಂಬಾಗದಲ್ಲಿರುವ ಅಪೂರ್ವ ಕ್ಲಿನಿಕ್ ನ ವೈದ್ಯ ವೃತ್ತಿ ನಡೆಸುತ್ತಿದ್ದ ಜಗದೀಶ್ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.
ಡಿಎಚ್ಓ ಅವರ ಆದೇಶದ ಮೇರೆಗೆ ಕೂಡ್ಲಿಗಿಯ ಪ್ರಭಾರಿ ತಾಲೂಕು ವೈದ್ಯಾಧಿಕಾರಿಯಾದ ಪ್ರದೀಪ್ ಕುಮಾರ್ ಹಾಗೂ ಬಸವೇಶ್ವರ ಹಿರೇಮಠ ವೈದ್ಯಾಧಿಕಾರಿಗಳು,ನೇತೃತ್ವದಲ್ಲಿ ದಾಳಿ ನಡೆಸಿ ನಕಲಿ ವೈದ್ಯ ವೃತ್ತಿ ಮಾಡುತ್ತಿದ್ದ ಆರೋಪಿಯಾದ ಜಗದೀಶ್ ನನ್ನು ಹಿಡಿದು ಪೋಲಿಸರ ವಸಕ್ಕೆ ಒಪ್ಪಿಸಿ. ಕ್ಲಿನಿಕ್ ನಲ್ಲಿದ್ದ ಸ್ಟೆಥೋ ಸ್ಕೋಪ್, ಸಿರೆಂಜ್, ಸಿರಪ್, ಮಾತ್ರೆಗಳು ಇತ್ಯಾದಿ ಔಷಧಿಗಳನ್ನು ಕ್ರಮಬದ್ಧ ಪಂಚನಾಮೆಯ ಮೂಲಕ ಜಪ್ತಿ ಪಡೆದುಕೊಂಡು.
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ ಅಧಿನಿಯಮಗಳ ಕಾಯ್ದೆ ಮತ್ತು ನಿಯಮ 2007 ಮತ್ತು 2009ರ ಅನ್ವಯ ನೋಂದಣಿಯಾಗದೇ, ಪದವಿ ಪಡೆಯದೇ ರೋಗಿಗಳಿಗೆ ಮಾತ್ರೆ ಮತ್ತು ಇಂಜೆಕ್ಷನ್ ನೀಡಿದರೆ ಜೀವಕ್ಕೆ ಅಪಾಯವಾಗುವ ಸಂಭವವಿದೆ ಎಂದು ತಿಳಿದು ಸಾರ್ವಜನಿಕರಿಗೆ ತಾನು ವೈದ್ಯ ಎಂದು ನಂಬಿಸಿ ಚಿಕಿತ್ಸೆ ನೀಡುತ್ತಿದ್ದ ಜಗದೀಶನ ವಿರುದ್ಧ ಕಲಂ 420, 328 ಐಪಿಸಿ ಮತ್ತು ಕಲಂ 19(1) ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮಗಳ ಕಾಯ್ದೆ 2009ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ . ನೀಡಿದ ದೂರಿನ ಮೇರೆಗೆ ಪ್ರಕರ ಣವನ್ನು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ