ಜೀವಿಗಳ ಹೊಂದಿದ ಏಕೈಕ ಗ್ರಹ ಭೂಮಿ



ಬಳ್ಳಾರಿ : ಸೌರಮಂಡಲದಲ್ಲಿ ಐದನೇ ದೊಡ್ಡ ಗ್ರಹ,ಸೂರ್ಯನಿಗೆ ಹತ್ತಿರವಿರುವ ಮೂರನೇ ಹಾಗೂ ಜೀವಸಂಕುಲವನ್ನು ಹೊಂದಿರುವ ಏಕೈಕ ಗ್ರಹ ಭೂಮಿ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.

ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿಗಳಿಗೆ  ಭೂಮಿ ಮೇಲ್ಮೈ ಕುರಿತು ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿ ಭೂಮಿ ಸುಮಾರು 460 ಕೋಟಿ ವರ್ಷಗಳ ಹಿಂದೆ ರೂಪುಗೊಂಡಿದೆ.

ಭೂಗರ್ಭದಲ್ಲಿ ಕಬ್ಬಿಣ ಮತ್ತು ನಿಕ್ಕಲ್ಲನ್ನು ಒಳಗೊಂಡಿದೆ.

ಭೂ ಮೇಲ್ಮೈಯಲ್ಲಿ ನದಿ, ಕೆರೆ,ಸರೋವರ,ಜಲಾಶಯ, ಸಮುದ್ರ ಸೇರಿ ಶೇಕಡ 71ರಷ್ಟು  ಭಾಗನೀರಿನಿಂದ ಆವೃತಗೊಂಡಿದ್ದರೆ,ಮಿಕ್ಕ ಶೇಕಡ 29 ಭಾಗ ಮಾತ್ರ ಗುಡ್ಡ, ಬೆಟ್ಟ, ಕಾರ್ಖಾನೆ, ವಸತಿ ಹಾಗೂ ಸಾಗುವಳಿ ಭೂಮಿ ಹೊಂದಿದೆ.

ಇದು ಹೀಗೆ ಮುಂದುವರೆದರೆ ಸಾಗುವಳಿ ಭೂಮಿ ಕಡಿಮೆಯಾಗಿ ಆಹಾರದ ಕೊರತೆ ಉಂಟಾಗಬಹುದು.

ಆದ್ದರಿಂದ ಜಲಾಶಯ ಮಟ್ಟ, ಕೆರೆಗಳ ಮಟ್ಟ ,ಕೃಷಿ ಹೊಂಡಗಳ ಸಂಖ್ಯೆ ಹೆಚ್ಚಿಸಿದರೆ ಮಳೆ ನೀರು ತಡೆದು ಅಂತರ್ಜಲದ ಪ್ರಮಾಣ ಹೆಚ್ಚಾಗುತ್ತದೆ.

ಪ್ರವಾಹಗಳ ತೀವ್ರತೆ ಕಡಿಮೆಯಾಗಿ ಸಮುದ್ರದ ನೀರಿನ ಮಟ್ಟ ಕುಸಿದು ಅದರ ಹತ್ತಿರದ ಭೂಮಿ ಉಳಿದರೆ, ಕೃಷಿಗೆ ಬಳಸಿ ಕೊಂಡು ಆಹಾರ ಧಾನ್ಯಗಳನ್ನು ಬೆಳೆಯಬಹುದು ಎಂದು ಹೇಳಿದರು.

ವಿಜೇತ ಮಕ್ಕಳಾದ ಶ್ರೀಕಾಂತ್, ಇಂದ್ರ ಹಾಗೂ ಮಾಲ ಗೆ ಬಹುಮಾನ ವಿತರಿಸಲಾಯಿತು.

ಇಂಗ್ಲೀಷ್ ಶಿಕ್ಷಕರಾದ ಉಮ್ಮೇಹಾನಿ,ನಲಿಕಲಿ ಶಿಕ್ಷಕರಾದ ಕೆ.ಸುಮತಿ ಹಾಗೂ ರಾಮಾಂಜಿನೇಯ ಮುಂತಾದವರು ಭಾಗವಹಿಸಿದ್ದರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ