ಶಿಕ್ಷಣ ಸಂಸ್ಥೆಗಳು ದೇಶ ಕಟ್ಟುವ ವ್ಯಕ್ತಿತ್ವವನ್ನು ರೂಪಿಸಬೇಕು. ಶಾಸಕ- ಡಾ. ಶ್ರೀನಿವಾಸ್ ಎನ್. ಟಿ.
ಕೊಟ್ಟೂರು ತಾಲೂಕು ನಾಗರಕಟ್ಟೆ ಗ್ರಾಮದಲ್ಲಿ ಕನ್ನಡದ ತೇರ ಎಳೆಯೋಣ ಬಾರಾ ಪ್ರತಿ ವರ್ಷದಂತೆ ಈ ವರ್ಷವೂ ಸಹ ಅದ್ದೂರಿಯಾಗಿ ಶಾಲಾ ಮಕ್ಕಳಿಂದ ತಾಯಿ ಭುವನೇಶ್ವರಿಯ ಭಾವಚಿತ್ರದೊಂದಿಗೆ ಮೆರವಣಿಗೆ ಮಾಡಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು.
ಕೂಡ್ಲಿಗಿ ಮತ ಕ್ಷೇತ್ರದ ನಾಗರಕಟ್ಟೆಯ ಶ್ರೀ ಸಾವಜ್ಜಿ ಗುರುಸಿದ್ದನ ಗೌಡ್ರು ಸುಮಂಗಲಮ್ಮನವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಶ್ರೀ ಎಸ್ . ವಿ. ಎಸ್. ಬಿ. ಪ್ರೌಢಶಾಲೆ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಾನ್ಯಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಅವರು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರು,ವೈದ್ಯರು , ವಿಜ್ಞಾನಿಗಳು,ವಕೀಲರು ಸಮಾಜದಲ್ಲಿ ಯುವ ಸಮುದಾಯಕ್ಕೆ ಸ್ಪೂರ್ತಿ. ಎಲ್ಲರೂ ಒಂದೇ ವೇದಿಕೆಯಲ್ಲಿ ಒಟ್ಟಿಗೆ ಪಾಲ್ಗೊಂಡಿರುವುದು ಹೆಮ್ಮೆಯ ವಿಚಾರ.ಈ ಭಾಗದ ಹಿರಿಯ ರಾಜಕೀಯ ಮುಖಂಡರಾದ ನಾಗರಕಟ್ಟೆ ರಾಜಣ್ಣನವರು ಇಂತಹ ಮಹತ್ವದ ಕಾರ್ಯಕ್ರಮವನ್ನು ರೂಪಿಸಿದಕ್ಕೆ ಅವರನ್ನು ಈ ವೇದಿಕೆ ಮೂಲಕ ಅಭಿನಂಧಿಸುತ್ತೇನೆ ಎಂದರು.
ಪ್ರಾಥಮಿಕ ಮತ್ತು ಪ್ರೌಢಶಾಲೆ ಹಂತದಲ್ಲಿ ಶಿಕ್ಷಣ ಸಂಸ್ಥೆಗಳು ದೇಶ ಕಟ್ಟುವಂತಹ ವ್ಯಕ್ತಿತ್ವವನ್ನು ರೂಪಿಸುವ ಮುಖ್ಯ ಪಾತ್ರ ವಹಿಸಬೇಕು. ಸಮಾಜದಲ್ಲಿ ಸುಳ್ಳು ಹೇಳದೆ ಸತ್ಯ, ನ್ಯಾಯ ಮತ್ತು ನಿಷ್ಠೆಯಿಂದ ನಡೆಯುವ ವ್ಯಕ್ತಿತ್ವ ಸೃಷ್ಟಿಯಾಗಬೇಕು. ಅವರವರ ಸಾಧನೆಗಳು ಮಾತನಾಡುವಂತೆ ಇರಬೇಕು. ಕನ್ನಡ - ಕರ್ನಾಟಕವನ್ನು ಕಟ್ಟುವ ಮುಖೇನ ಭವ್ಯ ಭಾರತವನ್ನು ನಿರ್ಮಾಣ ಕಡೆ ಶ್ರಮಿಸೋಣ ಎಂದರು. ಈ ಭಾಗದ ಕುಗ್ರಾಮಗಳಿಂದ ಬಂದ ಬಹುಮುಖ ಪ್ರತಿಭಾವಂತ ಸಾಧಕರು ಒಂದು ಘನತೆಯನ್ನು ತಂದುಕೊಟ್ಟಿದ್ದಾರೆ.ಕೂಡ್ಲಿಗಿ ಮತ ಕ್ಷೇತ್ರಕ್ಕೆ ಬಂದಿರುವ ಅನುಧಾನದಲ್ಲಿ 70%ರಷ್ಟು ಪಾಲು ಹಣವನ್ನು ನಾಗರಕಟ್ಟೆ, ತೂಲಹಳ್ಳಿ ಹಾಗೂ ಉಜ್ಜಿನಿ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗಾಗಿ ಮೀಸಲು ಇಟ್ಟಿರುವೆ ಎಂದೂ ತಿಳಿಸಿದರು. ಗುತ್ತಲ್ ಬಸರಾಜ್ ಮುಖ್ಯ ಗುರುಗಳು ಸ್ವಾಗತ ಕೋರಿದರು ಸೋಮಶೇಖರ್ ಪ್ರಾಸ್ತಾವಿಕ ನುಡಿಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ ರಾಜೆಂದ್ರ ಪ್ರಸಾದ್ ಕಾರ್ಯದರ್ಶಿಗಳು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಮತ್ತು ನಿರ್ದೇಶಕರು ರಾಜ್ಯ ಬೀಜ ನಿಗಮ ಗೋವಿಂದ ಶ್ರೇಷ್ಠಿ ಇಸ್ರೋ ವಿಜ್ಞಾನಿಗಳು ಹನುಮನ ಗೌಡ್ರು ತುಲಹಳ್ಳಿ ಮಾಜಿ ಸೈನಿಕರು ಮಂಜುನಾಥ್ ಗೌಡ್ರು ಅಧ್ಯಕ್ಷರು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಕೆಎಂ ಶಶಿಧರ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಎಂ ಗುರುಸಿದ್ದನಗೌಡ್ರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕೂಡ್ಲಿಗಿ ವಿಶಾಲಾಕ್ಷಿ ಪರಶುರಾಮ್ ಅಧ್ಯಕ್ಷರು ಗ್ರಾಮ ಪಂಚಾಯತಿ ನಾಗರಕಟ್ಟೆ ಮಂಜುನಾಥ್ ಶ್ರೇಷ್ಠಿ ಭೂದಾನಿಗಳು ಸೇರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ