ಎಂದೆಂದಿಗೂ ನೀ ಕನ್ನಡಿಗನಾಗಿರು: ಕವಿತಾ ಕುಮಾರಸ್ವಾಮಿ

ಕನ್ನಡ ರಾಜ್ಯೋತ್ಸವ ಆಚರಣೆಗೆ ಮಾತ್ರ ಸೀಮಿತವಾಗಬಾರದು 

ಕೊಟ್ಟೂರು: ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು ಕನ್ನಡ ಉಳಿಸಿ ಬೆಳೆಸಲು ಕನ್ನಡ ಮನಸುಗಳ ಅವಶ್ಯಕತೆ ಇದೆ. ಕನ್ನಡ ರಾಜ್ಯೋತ್ಸವಕ್ಕೆ ಮಾತ್ರ ಸೀಮಿತವಾಗದ ಕನ್ನಡ ಭಾಷೆ ಸದಾ ನಮ್ಮ ಜೀವನದುದ್ದಕ್ಕೂ ಬಳಿಸಿ ಬಳಸುವ ಭಾಷೆ ಆಗಬೇಕು ನಮ್ಮ ಭಾಷೆಯ ಬಗ್ಗೆ ನಮಗೆ ಹೆಮ್ಮೆ ಯಿರಲಿ. ಕನ್ನಡ ನಾಡು ,ನುಡಿ, ಜಲ, ಪರಂಪರೆ ಸಂಸ್ಕೃತಿಯನ್ನು ಎಂದೆಂದಿಗೂ ಮರೆಯರೋಣ ಎಂದು ಕರುನಾಡು ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಕವಿತಾ ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಶ್ರೀ ಗುರು ಕೊಟ್ಟೂರೇಶ್ವರ ಆಟೋ ಚಾಲಕರ ಹಾಗೂ ಮಾಲೀಕರ ಸಂಘ (ರಿ) ವತಿಯಿಂದ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಕರುನಾಡ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಕವಿತಾ ಕುಮಾರಸ್ವಾಮಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ನಂತರ ಮಾತನಾಡಿದರು ಕನ್ನಡ ಕೇವಲ ನವೆಂಬರ್ ಒಂದಕ್ಕೆ ಸೀಮಿತವಾಗದೆ ಜೀವನ ಉದ್ದಕ್ಕೂ ಕನ್ನಡ ಭಾಷೆವಾಗಬೇಕು. ಕನ್ನಡಕ್ಕೆ ಇರುವ ಇತಿಹಾಸ ಪ್ರತಿಯೊಬ್ಬ ಕನ್ನಡಿಗನು ತಿಳಿಯಬೇಕು ಸಂಸ್ಕೃತ ಭಾಷೆ ಹೊರತುಪಡಿಸಿದರೆ ಪ್ರಾಚೀನ ಕಾಲದ ಅತಿ ಶ್ರೀಮಂತಿಕೆ ಭಾಷೆ ಎಂದರೆ ಅದು ಕನ್ನಡ ಭಾಷೆ ಇತರ ಭಾಷೆಗಳಿಗೆ ಗೌರವ ನೀಡುವ ಕನ್ನಡ ಭಾಷೆ ಅಭಿಮಾನ ವ್ಯಕ್ತಪಡಿಸೋಣ ಎಂದು ಹೇಳಿದರು

ಇದಕ್ಕೂ ಮುನ್ನ ಆಟೋ ನಿಲ್ದಾಣದಿಂದ ಆರಂಭಗೊಂಡ ಪುಟ್ಟ ಮೆರವಣಿಗೆಯು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ತೆರಳಿ ಸ್ವಾಮಿಗೆ ಪೂಜೆ ಸಲ್ಲಿಸಿ ಆನಂತರ ಉಜ್ಜಿನಿ ಸರ್ಕಲ್ ರೇಣುಕಾ ಟಾಕೀಸ್ ರಸ್ತೆ ಮಾರ್ಗವಾಗಿ ಸಂಚರಿಸಿ ಪುನಃ ಆಟೋ ನಿಲ್ದಾಣಕ್ಕೆ ಬಂದು ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಶಿವಯ್ಯ, ಬಂಡಿ ಕೊಟ್ರೇಶ್, ದೊಡ್ಡ ವೀರಪ್ಪ, ಬಹುದ್ದೂರ್ ರಮೇಶ್, ಬೇವೂರು ಅಜ್ಜಯ್ಯ, ಜೊಳ್ಳಿ ಪರಶುರಾಮ್, ಕನ್ನಕಟ್ಟಿ ಪರಶುರಾಮ್, ಮಹೇಶ್, ಹಳ್ಳಿ ನಾಗರಾಜ್, ಮುರಳಿಧರ, ಚಿಗಟೇರಿ ಗಣೇಶ್ , ಬಣಕಾರ್ ಕೊಟ್ರೇಶ್ , ವಿ.ಸಿದ್ದೇಶ್ ಹಾಗೂ ಸಂಘದ ಪದಾಧಿಕಾರಿಗಳು ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ