ರಾಂಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ: ಶಾಸಕ ಕೆ. ನೇಮರಾಜನಾಯ್ಕ
ಗ್ರಾಮಾಭಿವೃದ್ಧಿಗೆ ಎನ್ನೆಸ್ಸೆಸ್ ಸಹಕಾರಿ
ಸರ್ಕಾರಿ ಪಿಯು ಕಾಲೇಜಿನ ಎನ್ ಎನ್ ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಶಾಸಕ ಕೆ. ನೇಮರಾಜನಾಯ್ಕ
ಕೊಟ್ಟೂರು: ಗ್ರಾಮಗಳಲ್ಲಿ ಅಭಿವೃದ್ಧಿ, ಸ್ವಚ್ಛತೆ ಸೇರಿ ನಾನಾ ಉಪಯುಕ್ತ ಜಾಗೃತಿ ಕಾರ್ಯಗಳನ್ನು ನಡೆಸುವ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಮಹತ್ತರವಾದುದಾಗಿದೆ ಎಂದು ಶಾಸಕ ಕೆ. ನೇಮರಾಜನಾಯ್ಕ ಹೇಳಿದರು. ಪಟ್ಟಣದ ಸರಕಾರಿ ಪಿಯು ಕಾಲೇಜಿನ ಎನ್‌ಎಸ್‌ಎಸ್ ಘಟಕ ತಾಲೂಕಿನ ರಾಂಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಶುಕ್ರವಾರ ಮಾತನಾಡಿದರು. ಶಿಬಿರದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ರೈತಪರ ಕಾಳಜಿ ವಹಿಸಿ, ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ ಜನತೆಯಲ್ಲಿ ಜಾಗೃತಿ ಮೂಡಿಸಬೇಕು. ಶಿಬಿರವನ್ನು ಪ್ರತಿಯೊಬ್ಬರೂ ಗಂಭೀರವಾಗಿ ಪರಿಗಣಿಸಬೇಕು. ಇದರ ಮೂಲಕ ನಿಮ್ಮಲ್ಲಿ ಗ್ರಾಮದ ಅಭಿವೃದ್ಧಿ ಕಲ್ಪನೆ ಮೂಡಿ ಭವಿಷ್ಯದಲ್ಲಿ ಉಪಯುಕ್ತವಾಗುತ್ತದೆ. ಶಿಬಿರದ ಪ್ರತಿ ಕಾರ್ಯವೂ ಮಹತ್ತರವಾಗಿದೆ. ಗ್ರಾಮದ ಜನರು ಶಿಬಿರಕ್ಕೆ ಸಹಕಾರ ನೀಡುವುದಲ್ಲದೆ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು. ಜ್ಞಾನಗುರು ವಿದ್ಯಾಪೀಠ ಕಾರ್ಯದರ್ಶಿ ಎಂಎಂಜೆ ಹರ್ಷವರ್ಧನ ಮಾತನಾಡಿ, ಎನ್‌ಎನ್ ಎಸ್ ಶಿಬಿರ ವಿದ್ಯಾರ್ಥಿಗಳಿಗೆ ಅತ್ಯಂತ ಮಹತ್ವದ ಘಟ್ಟವಾಗಿದೆ. ಶಿಬಿರದ ಕಾರ್ಯಕ್ರಮಗಳನ್ನು ಸಮರ್ಥವಾಗಿ ಅರಿತು ಸಕ್ರಿಯವಾಗಿ ಪಾಲ್ಗೊಂಡಾಗ ಮಾತ್ರ ಇದರ ಉದ್ದೇಶ ಈಡೇರಿದಂತಾಗುತ್ತದೆ ಎಂದರು. ಶಿಬಿರಾರ್ಥಿಗಳಿಗೆ ಪ್ರತಿಜ್ಞೆ ಬೋಧಿಸಿದ ತಹಶೀಲ್ದಾರ್ ಜಿಕೆ ಅಮರೇಶ ಮಾತನಾಡಿ, ಸಮಾಜ ಸೇವೆಗಳನ್ನು ಮುಖ್ಯವಾಗಿರಿಸಿಕೊಂಡಿರುವ ಎನ್ ಎನ್‌ಎಸ್ ಶಿಬಿರ, ಸಮಾಜ ಶಾಸ್ತ್ರ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಸಹಕಾರಿಯಾಗುತ್ತದೆ ಎಂದರು. ಅದ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ| ಜಿ. ಸೋಮಶೇಖರ, ಡಾ| ಆರ್. ಜಗದೀಶಚಂದ್ರ ಬೋಸ್ ಮಾತನಾಡಿದರು. ಶಿಬಿರಾಧಿಕಾರಿ ಡಿ. ಅಂಜಿನಪ್ಪ ನಿರ್ಹಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ