ಶಾಹಿದ್ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ.

ಹಟ್ಟಿ ಚಿನ್ನದ ಗಣಿ--ಸ್ವಾತಂತ್ರ್ಯ ಹೋರಾಟಗಾರ ಅಪ್ಪಟ ದೇಶಪ್ರೇಮಿ ದೇಶಕ್ಕಾಗಿ ತನ್ನ ಸ್ವಂತ ಮಕ್ಕಳನ್ನೇ ಒತ್ತೆಹಾಳನ್ನಾಗಿ ಮಾಡಿದ ಕರ್ನಾಟಕದ ಹುಲಿ. ಟಿಪ್ಪು ಸುಲ್ತಾನ್ ರವರ ಜನ್ಮದಿನಾಚರಣೆಯನ್ನು ಚುಕ್ಕನಟ್ಟಿ ಹಾಗೂ ಹಿರೇನಗನೂರು ಗ್ರಾಮದ ಹಿಂದೂ ಮುಸಲ್ಮಾನ ಬಾಂಧವರಿಂದ ಹಜರತ್ ಟಿಪ್ಪು ಸುಲ್ತಾನ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಸಲ್ಲಿಸುವ ಮೂಲಕ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಣೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಸಮಾಜದ ಯುವ ಮಿತ್ರ ಸಮಾಜ ಸೇವಕ ಹಾಗೂ ಶಿಕ್ಷಣ ಪ್ರೇಮಿಯಾದ ಮೌನದ್ದೀನ್ ಬೂದಿನಾಳ ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಬ್ರಿಟಿಷರ ವಿರುದ್ಧ ಹೋರಾಟ ಮಾಡುವಾಗ ಕ್ಷಿಪಣಿಗಳನ್ನುಬಳಸಿ ಹೊಸ ತಂತ್ರಜ್ಞಾನವನ್ನು ಬಳಸಲು ನಾಂದಿ ಹಾಡಿದ ವೀರ ಹೋರಾಟಗಾರ ಟಿಪ್ಪು ನಮಗೆಲ್ಲರಿಗೂ ಆದರ್ಶಪ್ರಾಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ದಾದಾಪೀರ್.ಅಮರಪ್ಪ ಬೆಂಚಮಟ್ಟಿ. ಅಬ್ರಹಾಮ್.ಚಿನ್ನಪ್ಪ ಕೋಟ್ರಿಕಿ.ಮೌನದ್ದೀನ್ ಬೂದಿನಾಳ.ರವಿ ಚುಕ್ಕನಟ್ಟಿ.ಮೋದಿನ್ ಸಾಬ್ ಚುಕ್ಕನಟ್ಟಿ. ಕನಕಪ್ಪ ಬಿ. ನಿಂಗಪ್ಪ ಬಿ. ಕರೀಂ ಹೊರಪೇಟಿ. ಬಂದೆ ಸಾಬ್.ಮೌನಿ ಹೋಟೆಲ್.ರಾಜಸಾಬ್. ಗ್ರಾಮದ ಅನೇಕರು ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ