ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಅಭಿವೃದ್ಧಿ ಯೋಜನೆಯ ವಾತ್ಸಲ್ಯ ಹಾಗೂ ಜನ ಮಂಗಳ ಕಾರ್ಯಕ್ರಮ ಅಡಿಯಲ್ಲಿ ಗುದ್ದಲಿ ಪೂಜೆ,ವೀಲ್ ಚೇರ್ ವಿತರಣೆ
ಲಿಂಗಸುಗೂರು : ತಾಲೂಕಿನ ಹಟ್ಟಿ ವಲಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಅಡಿಯಲ್ಲಿ. ಮಹಿಳಾ ಜ್ಞಾನ ವಿಕಾಸದ ವಾತ್ಸಲ್ಯಕಾರ್ಯಕ್ರಮದ ಅಡಿಯಲ್ಲಿ ಹೊಸ ಮನೆ ನಿರ್ಮಾಣ ಹಾಗೂ ಜನ ಮಂಗಳ ಕಾರ್ಯಕ್ರಮ ಅಡಿಯಲ್ಲಿ. ಅಂಗವಿಕಲರಿಗೆ ವೀಲ್ ಚೇರ್ ಹಾಗೂ ಹ್ಯಾಂಡಿಂಗ್ ಸ್ಟಿಕ್ ವಿತರಣಾ ಕಾರ್ಯಕ್ರಮವನ್ನು.ಉದ್ಘಾಟಿಸಿ ಮಾತನಾಡಿದ
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಮೋಹನ್ ನಾಯಕ್ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಹಲವಾರು ಕಾರ್ಯಕ್ರಮಗಳು ಅನುಷ್ಠಾನ ಮಾಡುತ್ತಿದ್ದು.ಅದರ ಸದುಪಯೋಗ ಪಡೆದುಕೊಳ್ಳಲು ಹಾಗೂ ಮಹಿಳಾ ಆರೋಗ್ಯ.ಶಿಕ್ಷಣ.ಸ್ವ ಉದ್ಯಮಿ ತರಬೇತಿ ನೀಡುತ್ತಿದ್ದು.ಪ್ರಸ್ತುತ ಲಿಂಗಸ್ಗೂರು ತಾಲೂಕಿನಲ್ಲಿ ಪ್ರತಿ ಒಬ್ಬ ಮಾಶಾಸನ ಫಲಾನು ಬಾವಿಗೆ ಪ್ರತಿ ತಿಂಗಳು ಸಾವಿರ ರೂಪಾಯಿ ನೀಡುತ್ತಿದ್ದು ಸ್ವಉದ್ಯೋಗ ಕಾರ್ಯಕ್ರಮದ ಮುಖಾಂತರ ಮಹಿಳಾ ಸಬಲೀಕರಣ. ನಿರ್ಗತಿಕರಿಗೆ ವಾತ್ಸಲ್ಯ ಯೋಜನೆಯ ಅಡಿಯಲ್ಲಿ ರಮೇಶ್ ತಂದೆ ಲಕ್ಷ್ಮಣ ಇವರಿಗೆ ಮನೆ ಕಟ್ಟಲು ಗುದ್ದಲಿ ಪೂಜೆ ಮಾಡಲಾಯಿತು.
ಶ್ರೀ ಮಂಜುನಾಥ ಸ್ವಾಮಿ ಆಶೀರ್ವಾದ ಹಾಗೂ ಅಮ್ಮನವರ ಆಶಯದಂತೆ ಪ್ರಸ್ತುತ ಈ ಕಾಮಗಾರಿಗೆ ಒಂದು ಲಕ್ಷ ರೂಪಾಯಿ ಮೊತ್ತ ಮಂಜುರತಿ ಆಗಿದೆ ಎಂದು ಹೇಳಿದರು.
ನಂತರ ಮಾತನಾಡಿದ ಲಿಂಗಸೂರು ತಾಲೂಕಿನ ಯೋಜನಾಧಿಕಾರಿಯಾದ ಅಡಿವಯ್ಯ ಅವರು ಜ್ಞಾನ ವಿಕಾಸ ಕೇಂದ್ರಗಳ ಉದ್ದೇಶಗಳ ಬಗ್ಗೆ ವಾಸ್ತಲ್ಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಅದೇ ರೀತಿ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಬಸಮ್ಮ ಯಾದವ್ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯಿಂದ ಅನೇಕ ಕಾರ್ಯಕ್ರಮ ನಡೆಯುತ್ತಿದ್ದು ಒಂದು ಹೆಣ್ಣು ಆಬಲೆ ಅಲ್ಲ ಸಬಲೇ. ತನ್ನನ್ನು ತಾನೇ ರೂಪಿಸಿಕೊಳ್ಳಲು ಒಂದು ಯೋಜನೆ ಕೈಹಿಡಿದಿದೆ. ಎಂದು ಹೇಳಿದರು.
ಜನ ಮಂಗಳ ಕಾರ್ಯಕ್ರಮದ ಅಡಿಯಲ್ಲಿ ಪ್ರಜ್ವಲ್ ತಂದೆ ವೆಂಕಟೇಶ್ ಹಾಗೂ ಬೇಬಿ ಫಾತಿಮಾ ತಂದೆ ಪೀರ್ ಸಾಬ್ ಇವರಿಗೆ ವೀಲ್ ಚೇರ್ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಹೊಸ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಪಿಎಸ್ಐ ಧರ್ಮಪ್ಪ ಆರ್ ಕೆ.ಹಾಗೂ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕರು ಮೋಹನ್ ನಾಯಕ್.ತಾಲೂಕಿನ ಯೋಜನಾಧಿಕಾರಿ ಅಡಿವೆಯ ಸರ್.
ತಾ ಪಂ ಮಾಜಿ ಸದಸ್ಯರು ಬಸಮ್ಮ ಯಾದವ್. ಜಿಲ್ಲಾ ಜನ ಜಾಗೃತಿ ಸದಸ್ಯರು ಬಲ ಭೀಮರಾವ್ ಕುಲಕರ್ಣಿ. ಒಕ್ಕೂಟದ ಅಧ್ಯಕ್ಷರು ನಿರ್ಮಲ.ವಲಯ ಮೇಲ್ಚರಕರು ಶಿವುಗೇನಿ ನಾಯಕ್.ಕೃಷಿ ಅಧಿಕಾರಿ ಮಮ್ಮದ್ ಅಲಿ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಪ್ರೀತಿ.ಹಾಗೂ ತಾಂತ್ರಿಕ ವರ್ಗದ ಸಿಬ್ಬಂದಿಗಳು.ಸೇವಾ ಪ್ರತಿನಿಧಿಗಳು.ಹಾಗೂ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ