ಕೊಟ್ಟೂರಿನಲ್ಲಿ ಎರಡು ಗಂಟೆಗಳ ಕಾಲ| ಟ್ರಾಫಿಕ್ ಜಾಮ್ ನಿಂದ| ಶಾಲಾ ವಿದ್ಯಾರ್ಥಿಗಳಿಗೆ, ವೃದ್ಧರಿಗೆ, ಕಿರಿಕಿರಿ
ಕೊಟ್ಟೂರು :ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಬರಬೋರಿ ಗುರುವಾರ ರಂದು ಎರಡು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಪೊಲೀಸ್ ಇಲಾಖೆ ಪೇದೆ ಇಲ್ಲದೆ ಜನರು ಪರದಾಡುವ ಪರಿಸ್ಥಿತಿ. ಸಂಘಟನೆ ಮುಖಂಡರು ಪೊಲೀಸ ಇಲಾಖೆಗೆ ತಿಳಿಯಪಡಿಸಿದರು.
ಕೊಟ್ಟೂರು ಪಟ್ಟಣ ಅತೀ ವೇಗವಾಗಿ ಬೆಳೆಯುವ ಪಟ್ಟಣಗಳಲ್ಲಿ ಒಂದಾಗಿದೆ .ಕೊಟ್ಟೂರು ಪ್ರಮುಖ ರಸ್ತೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ಜಾಮ್ ಆಗುವುದು. ಪಾದಚಾರಿಗಳಿಗೆ ತೊಂದರೆ ಕಂಡು ಬಂದಿದ್ದು ಸಣ್ಣಪುಟ್ಟ ಆಕ್ಸಿಡೆಂಟ್ ಗಳು ಇತ್ತೀಚೆಗೆ ಕಂಡುಬರುತ್ತದೆ.
ಬೆಳಿಗ್ಗೆ ಹಾಗೂ ಸಂಜೆ ಶಾಲಾ ಕಾಲೇಜುಗಳ ಬಿಡುವ ಸಮಯದಲ್ಲಿ ಅತಿ ಹೆಚ್ಚಾಗಿ ಟ್ರಾಫಿಕ್ ಜಾಮ್ ಆಗುವುದರಿಂದ ವಿದ್ಯಾರ್ಥಿಗಳಿಗೆ, ವೃದ್ಧರಿಗೆ, ತೊಂದರೆ ಉಂಟಾಗುತ್ತದೆ.
ಈ ಹಿಂದೆ ಮುಂದಾಲೋಚನೆಯಿಂದ ಊರಿನ ಹೊರವಲಯದಿಂದ ಹೈವೇ ರಸ್ತೆ ಜೋಡವಣೆ ಇದ್ದಿದ್ದು. ಈಗಲಾದರೂ ಜಾರಿಗೆ ತಂದರೆ ಟ್ರಾಫಿಕ್ ಜಾಮ್ ಪರಿಹಾರ ದೊರಕಿದಂತಾಗುತ್ತದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆಗಳು ,ರೈತ ಮುಖಂಡರು ಚಂದ್ರಶೇಖರ್ , ಮಂಜುನಾಥ್, ಮಧು ನಾಯಕ, ಕೊಟ್ರೇಶ್,ಪ್ರತಿಭಟನೆ ಮಾಡುತ್ತೇವೆ.ಎಂದರು
ಕೊಟ್ -1
ಕೊಟ್ಟೂರಿನ ಬಸ್ಟಾಂಡ್ ಹತ್ತಿರ ಹರಪನಹಳ್ಳಿ ರಸ್ತೆ ಕೂಡ್ಲಿಗಿ ರಸ್ತೆ ಹಾಗು ಇಟಗಿ ರಸ್ತೆ ಸುಮಾರು ಎರಡು ಗಂಟೆ ಟ್ರಾಪಿಕ್ ಜಾಮ್ ಆಗಿದ್ದು ಇಲ್ಲಿ ಪೊಲಿಸರು ಇಲ್ಲದಿರುವುದು. ಇದನ್ನು ಗಮನಿಸಿದ ಸಾರ್ವಜನಿಕರು ಹಾಗೂ ರೈತ ಮುಖಂಡ ಜಯಪ್ರಕಾಶ ನಾಯ್ಕ ಅವರು ಪೊಲಿಸ್ ಸ್ಟೇಷನ್ ಗೆ ಫೋನ್ ಮಾಡಿದಾಗ ಪೋಲಿಸ್ ಪೇದೆ ವಿಷ್ಣು ನಾಗರಾಜ ಎಎಸ್ಐ ನೂಲಿಯಪ್ಪ, ಬಂದರು ಹೀಗೆಯೆ ಆದರೆ ಜಿಲ್ಲಾ ವರಿಷ್ಟ ಧಿಕಾರಿಗಳ ಗಮನಕ್ಕೆ ತರಬೇಕಾಗುತ್ತದೆ. ಎಂದು ಪತ್ರಿಕೆಗೆ ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ