ಪರಿಸರ ಮಾಲಿನ್ಯ ಪಟಾಕಿ ಬಳಕೆ ಸಲ್ಲ
ಮಸ್ಕಿ:ದೀಪಾವಳಿ ಬೆಳಕು ಮತ್ತು ಜ್ಞಾನದ ಹಬ್ಬವಾಗಬೇಕು ಹೊರೆತು ಪರಿಸರ ಮಾಲಿನ್ಯ ಉಂಟು ಮಾಡುವ ಹಬ್ಬವಾಗಬಾರದು ಎಂದು ಪುರಸಭೆ ಮುಖ್ಯಾಧಿಕಾರಿ ನರಸ ರೆಡ್ಡಿ ಹೇಳಿದರು
ಇಲ್ಲಿನ ಪುರಸಭಾಂಗಣದಲ್ಲಿ ಶುಕ್ರವಾರ ಸ್ವಚ್ಛ ದೀಪಾವಳಿ ಶುಭ ದೀಪಾವಳಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ದೀಪಾವಳಿಯನ್ನು ಪರಿಸರಸ್ನೇಹಿ ಹಬ್ಬವನ್ನಾಗಿ ಆಚರಿಸಿ. ಶಬ್ದ, ಬೆಳಕು, ವಾಯು, ಜಲ ಮಾಲಿನ್ಯವಾಗದ ಪಟಾಕಿಗಳನ್ನೇ ಬಳಸಿ.
ಹಾನಿಕಾರಕ ಪಟಾಕಿಗಳ ಬಳಕೆ ಸಲ್ಲದು. ಸರ್ಕಾರ ಸೂಚಿಸಿದ ಹಸಿರು ಪಟಾಕಿಗಳನ್ನೇ ಬಳಸಬೇಕು. ಪಟಾಕಿ ಬಳಸುವಾಗ ಯಾವುದೇ ಜೀವಿಯ ದೇಹಕ್ಕೆ, ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗದಂತೆ ಕಟ್ಟೆಚ್ಚರವಹಿಸುವಂತೆ ಸಲಹೆ ನೀಡಿದರು.
ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗದ್ದೆಪ್ಪ ಮಾತನಾಡಿ, ದೀಪಾವಳಿ ಹಬ್ಬದ ಪಟಾಕಿ ಬಳಕೆ ಸಮಯದಲ್ಲಿ ಕಣ್ಣು ಕಳೆದುಕೊಳ್ಳುವ ಪ್ರಕರಣಗಳು ಜರುಗಿದ್ದು, ಮಕ್ಕಳು ಪಟಾಕಿ ಬಳಸುವಾಗ ಪಾಲಕರು ಜಾಗೃತಿ ತೋರಬೇಕು. ಪಟ್ಟಣ ಸ್ವಚ್ಚತೆಗಾಗಿ ಪುರಸಭೆಯೊಂದಿಗೆ ಕೈಜೋಡಿಸುವಲ್ಲಿ ನಾಗರೀಕರು ಮುಂದಾಗಬೇಕು ಎಂದರು.ಕಚೇರಿ ಆವರಣದಲ್ಲಿ ಸೆಲ್ಫಿ ಬೋರ್ಡ್, ಸಿಗ್ನೇಚರ್ ಕ್ಯಾಂಪೇನ್ ಅಳವಡಿಸಲಾಗಿತ್ತು. ಸಿಬ್ಬಂದಿಗಳು ಸೆಲ್ಫಿ ಬೋರ್ಡ್‌ನಲ್ಲಿ ಪೋಟೋ ತೆಗೆಸಿಕೊಂಡು ಸಂಭ್ರಮಿಸಿದರು. ಪರಿಸರಸ್ನೇಹಿ ದೀಪಾವಳಿ ಆಚರಣೆ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ