"ಗ್ರಾಮ ಮಟ್ಟದ ಕೆಪಾಸಿಟಿ ಬಿಲ್ಡಿಂಗ್ ಕಾರ್ಯಕ್ರಮ"
ಕೊಟ್ಟೂರು: ಉಜ್ಜಿನಿ ಸಮೀಪದ ನಿಂಬಳಗೇರೆ ಗ್ರಾಮ ಪಂಚಾಯತಿ ಆವರಣದಲ್ಲಿ ನಡೆದ ಗ್ರಾಮಮಟ್ಟದ ಕೆಪಾಸಿಟಿ ಬಿಲ್ಡಿಂಗ್ ಕಾರ್ಯಕ್ರಮ ಆರ್ಥಿಕ ಸೇವೆ ನಬಾರ್ಡ್ ಸಂಕಲ್ಪ ಅಭಿವೃದ್ಧಿ ಸಂಸ್ಥೆಯ ಕೆ ಸೋಮಶೇಖರ್ ಅವರ ಮಾರ್ಗದರ್ಶನದಲ್ಲಿ.. ಆಯೋಜನೆ ಸ್ನೇಹ ಸಂಕಲ್ಪ ಸೇವಾ ಶ್ರಮ ಟ್ರಸ್ಟ್ ವತಿಯಿಂದ ನಿಂಬಳಗೇರೆ ಗ್ರಾಮದಲ್ಲಿ ಕೆಪ್ಯಾಸಿಟಿ ಬಿಲ್ಡಿಂಗ್ ಗ್ರಾಮಮಟ್ಟದ ಕಾರ್ಯಗಾರ ನಡೆಯಿತು ಪ್ರಾಸ್ತಾವಿಕ ಭಾಷಣವನ್ನು ಸಚಿನ್ ಕುಮಾರ್ ಮಾತನಾಡಿ ಸರ್ಕಾರದ ಇಲಾಖೆಗಳಲ್ಲಿ ಡಿಜಿಟಲೀಕರಣ ಮಾಡಲಾಗಿದ್ದು ಅದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಸರ್ಕಾರ ನೀಡುವ ಯೋಜನೆಗಳು ಬ್ಯಾಂಕ್ ಸೌಲಭ್ಯಗಳು ಕುರಿತಾಗಿ ಮಾಹಿತಿ ದೊರಕಲಿದ್ದು ಎಲ್ಲ ರೈತರು ಡಿಜಿಟಲ್ ಮಾಧ್ಯಮವನ್ನು ಸರಿಯಾಗಿ ಬಳಸಿಕೊಳ್ಳಬೇಕೆಂದು ಹೇಳಿದರು ಟ್ರಸ್ಟ್ ನ ನಾಗರಾಜ್ ಮಾತನಾಡಿ ಮಾತನಾಡಿ ರೈತರಿಗೆ ಹಲವು ಯೋಜನೆಗಳು ಸರ್ಕಾರ ನೀಡುತ್ತದೆ ರೈತರು ಸರಿಯಾಗಿ ಬಳಸಿಕೊಂಡು ಪ್ರಗತಿಯತ್ತ ಸಾಗಬೇಕು ಅಂದರು ಈ ಸಮಯದಲ್ಲಿ ಟ್ರಸ್ಟಿನ ಸದಸ್ಯರಾದ ನವೀನ್ ಕುಮಾರ್ ಹಾಗೂ ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರಾದ ಎಸ್ ಶ್ರೀಕಾಂತ , ಬಿ ಉಮೇಶ ರಮೇಶ ,ಪರುಶರಾಮ್ ಗಾದ್ರೆಪ್ಪ ಸೇರಿದಂತೆ ರೈತ ಮುಖಂಡರು ಇದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ