ವಂದಲಿ ಗ್ರಾಮದಲ್ಲಿ 8 ಲಕ್ಷ ರೂಪಾಯಿ ವೆಚ್ಚದಲ್ಲಿ.ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಎಂಟು ಅಡಿ 3 ಇಂಚು ಕಂಚಿನ ಮೂರ್ತಿ ಪ್ರತಿಷ್ಠಾಪನೆ.
ಹಟ್ಟಿ ಚಿನ್ನದ ಗಣಿ- ಸಮೀಪದ
ವಂದಲಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸುಮಾರು ಎಂಟು ಅಡಿ ಮೂರು ಇಂಚಿನ ಕಂಚಿನ ಮೂರ್ತಿಯನ್ನು ರಾಯಚೂರು ಜಿಲ್ಲೆಯ ದೇವದುರ್ಗ. ಲಿಂಗಸೂರು.ಹಾಗೂ ಮಾನ್ವಿ ತಾಲೂಕುಗಳ. ಗಡಿ ರೇಖೆಗೆ ಹೊಂದಿಕೊಂಡಿರುವ ವಂದಲಿ ಗ್ರಾಮದ ಹಟ್ಟಿ ರಾಯಚೂರು ಮುಖ್ಯ ರಸ್ತೆಯಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿ. ಎಂಟು ಅಡಿ ಮೂರು ಇಂಚು ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಯಿತು.
ಇದಕ್ಕೂ ಮುನ್ನ 2011 ರಿಂದ 2016ರ ಒಳಗೆ ಗ್ರಾಮದಲ್ಲಿ ರಾಯಣ್ಣನ ಪ್ರತಿಮೆ ಸ್ಥಾಪನೆ ಆಗಬೇಕು ಆನ್ನುವಂತ ಕನಸು ಗ್ರಾಮದ ಹಾಲುಮತ ಸಮಾಜದ ಎಲ್ಲಾ ಜನರಿಗೂ ಇತ್ತು.
ಅ ಕನಸನ್ನು ನನಸು ಮಾಡಿದ ದೇವದುರ್ಗ ತಾಲೂಕಿನ ಮಾಜಿ ಶಾಸಕರಾದ
ಕೆ ಶಿವನಗೌಡ ನಾಯಕ. ಹಾಗೂ ನಮ್ಮ ನಿಮ್ಮೆಲ್ಲರ ದೈವ ಸ್ವರೂಪಿಯಾದ ಶ್ರೀ ಮುಂಡರಗಿ ಮಲ್ಲಣ್ಣ ತಾತ.
ಇವರಿಂದ ಭಾರತ ಮಾತೆಯ ಹೆಮ್ಮೆಯ ಪುತ್ರನಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅಪ್ಪಟ ಕಂಚಿನ ಮೂರ್ತಿ ಸುಮಾರು 8 ಲಕ್ಷ ರೂಪಾಯಿ ವೆಚ್ಚದಲ್ಲಿ ತಯಾರಾದ ರಾಯಣ್ಣನ ಮೂರ್ತಿ ಇಂದು ವಂದಲಿ ಗ್ರಾಮಕ್ಕೆ ಆಗಮಿಸಿ.ಗ್ರಾಮದ ಆರಾಧ್ಯ ದೈವರಾದ ವಂದಲಿಯ ಮಾರುತೇಶ್ವರ ದೇವಾಲಯದಲ್ಲಿ ಪೂಜೆ ಮಾಡಿಸಿ.ಬೆಳಗ್ಗೆ 10 ಗಂಟೆಯಿಂದ ಪ್ರಾರಂಭವಾದ ರಾಯಣ್ಣನ ಮೆರವಣಿಗೆ. ಕುಂಭ.ಕಳಸ.ಡೊಳ್ಳು. ಹಾಗೂ ಡಿಜೆ ಹಾಡಿಗೆ ಗ್ರಾಮದ ಮುಖ್ಯರಸ್ತೆಯಲ್ಲಿ ಸಾಗಿ. ಸಾಯಂಕಾಲ 5:00ಗೆ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಸಂಗೊಳ್ಳಿ ರಾಯಣ್ಣನ ವೃತ್ತಕ್ಕೆ ಬಂದು ತಲುಪಿತು.ಅಲ್ಲಿ ಮುಂಡರಗಿ ತಾತನವರಾದ ಶ್ರೀ ಮಲ್ಲಣ್ಣ ತಾತನವರಿಂದ ಸಾಂಪ್ರದಾಯಕ ಪೂಜೆ ಮಾಡಿ.ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ವಂದಲಿ ಗ್ರಾಮದ ಹಾಲುಮತ ಸಮಾಜದ ಜನರ ಸುಮಾರು 14 ವರ್ಷಗಳಿಂದ ಇದ್ದ ನಮ್ಮೆಲ್ಲರ ಕನಸು ನನಸಾಯಿತು.ಎಂದು ಗ್ರಾಮದ ಹಾಲುಮತ ಸಮಾಜದ ರಾಯಚೂರು ಜಿಲ್ಲೆಯ ಉಪಾಧ್ಯಕ್ಷರಾದ ಶರಣು ಬಸವ ವೆಂಕಟಪುರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ.ಇವರು ಮಾತನಾಡಿದರು.
ಈ ಸಂದರ್ಭದಲ್ಲಿ ಮಲ್ಲಣ್ಣ ತಾತ ಮುಂಡರಗಿ ಕೆ ಶಿವನಗೌಡ ನಾಯಕ ಮಾಜಿ ಶಾಸಕರು ದೇವದುರ್ಗ ಇವರ ಅನುಪಸ್ಥಿತಿಯಲ್ಲಿ. ಹಾಗೂ ಸಿದ್ದಪ್ಪ ಚಿಂಚಿ ರಕಿ.ಶಾಂತಪ್ಪ ಚಿಂಚರಕಿ. ಯಲ್ಲಪ್ಪ ಬೋಗಡ್ಡಿ. ಮಲ್ಲಪ್ಪ ಬೆಂಡೋಣಿ. ಮಲ್ಲಿಕಾರ್ಜುನ್ ಗೌಡ. ಶರಣಬಸವ ವೆಂಕಟಪುರ.ರಾಜು ಪೂಜಾರಿ.ಶರಣಬಸವ ಕಡ್ಲಿ.ಜಯಪ್ಪ ಬೋವಿ. ಲಿಂಗಪ್ಪ ವಂದಲಿ ಹೋಸೂರು.ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರು. ರಾಮಣ್ಣ ಬೋಗಾಡಿ.ನಾಗರಾಜ್ ಗೂಳಗಟ್ಟಿ.
ವಂದಲಿ ಹಾಗೂ ಸುತ್ತಮುತ್ತಲಿನ ಗ್ರಾಮದ ಹಾಲುಮತ ಸಮಾಜದ ಜನರು ಭಾಗವಹಿಸಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ