ಹೊಸಹಳ್ಳಿ ನಾಡಕಚೇರಿಗೆ ನೂತನ ತಹಶಿಲ್ದಾರ್ ಎಂ.ರೇಣುಕಾ ಭೇಟಿ

ಕಾನ ಹೊಸಹಳ್ಳಿ: ಇಲ್ಲಿನ ನಾಡಕಚೇರಿಗೆ ನೂತನ ತಹಶೀಲ್ದಾರ್ ತಾಲೂಕ ದಂಡಾಧಿಕಾರಿ ಎಂ.ರೇಣುಕಾ ಅವರು ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ನೂತನ ತಹಶೀಲ್ದಾರರಿಗೆ ನಾಡಕಚೇರಿಯಿಂದ ಗೌರವ ಸನ್ಮಾನಿಸಿದರು. ದಂಡಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಕಾನ ಹೊಸಹಳ್ಳಿ ನಾಡ ಕಚೇರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ವೇಳೆ ಅಧಿಕಾರಿಗಳಿಗೆ ಈ ಕಿವಿ ಮಾತು ಹೇಳಿದರು. ಅಧಿಕಾರಿಗಳು ಒಂದು ತಂಡವಾಗಿ ಒಗ್ಗಟ್ಟಾಗಿ ಕೆಲಸ‌ ನಿರ್ವಹಿಸಿ ಜನರ ಸಮಸ್ಯೆಗೆ ಸ್ಪಂದಿಸಬೇಕು. ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯಿಂದ ಕೆಲಸ ನಿರ್ವಹಿಸಬೇಕು, ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಕಚೇರಿಗೆ ಬಂದಾಗ ಅವರನ್ನು ಕಾಯಿಸಬೇಡಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಂದಾಯಪರೀಕ್ಷಕರಾದ ಮುರಳಿ ಕೃಷ್ಣ, ಗ್ರಾಮ ಆಡಳಿತ ಅಧಿಕಾರಿಗಳಾದ ಚನ್ನಬಸಯ್ಯ, ಸಂಪ್ರೀತ, ಚೈತ್ರ, ಅನಿತಾ, ಜ್ಯೋತಿ ಹಾಗೂ ಗ್ರಾಮ ಸಹಾಯಕರಾದ ಶಾಂತರಾಜ್, ಬೋರಪ್ಪ, ತಿಪ್ಪೇಸ್ವಾಮಿ ಸೇರಿದಂತೆ ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*