*ರಾಷ್ಟ್ರೀಯ ಸಮಾವೇಶ ದೆಹಲಿಯಲ್ಲಿ ನಡೆದ ಹಲವು ಬೇಡಿಕೆಗಳು ಗ್ರಾಕೋಸ್ ಹೋರಾಟ*
ವಿಜಯ ನಗರ ಜಿಲ್ಲಾ ಹಗರಿಬೊಮ್ಮನಹಳ್ಳಿ ತಾಲೂಕಿನ ನರೇಗಾ ಸಂಘರ್ಷ ಮೋರ್ಚಾ ೩ ದಿನದ ರಾಷ್ಟ್ರೀಯ ಸಮಾವೇಶ ದೆಹಲಿಯ ರಾಜಾರಾಮ್ ಮೋಹನ್ ರಾಯ್ ಮೆಮೊರಿಯಲ್ ಹಾಲ್ ನಲ್ಲಿ ನಡೆಯಿತು. ಎಂಬುವುದಾಗಿ ಗ್ರಾಕೋಸ್ ತಾಲೂಕು ಅಧ್ಯಕ್ಷರು ಕೊಟ್ರಮ್ಮ ಇವರು ತಿಳಿಸಿದ್ದಾರೆ,ಈ ರಾಷ್ಟ್ರೀಯ ಸಮಾವೇಶದಲ್ಲಿ ೧೫ ರಾಜ್ಯಗಳ ಸಂಘಟನೆ ಸಾವಿರಾರು ಪ್ರತಿನಿದಿಗಳು ಹಾಗೂ ಮುಖಂಡರುಗಳು ಭಾಗವಹಿಸಿದ್ದರು. ಹಾಗೆ ಕರ್ನಾಟಕದಿಂದ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ, ಜಾಗೃತಿ ಮಹಿಳಾ ಸಂಘಟನೆ , ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದವು. ಹಾಗೆ ಹಗರಿಬೊಮ್ಮನಹಳ್ಳಿ ತಾಲೂಕಿನ ಗ್ರಾಕೋಸ್ ಸದಸ್ಯರು ಅಲವು ೧೫ಕ್ಕೂ ಹೆಚ್ಚು ರಾಜ್ಯದ ನೂರಾರು ಗ್ರಾಕೋಸ್ ಅಧ್ಯಕ್ಷರುಗಳು ಹಾಗೂ ಗ್ರಾಮಸ್ಥರು ತಮ್ಮ ತಮ್ಮ ಹನಿಸಿಕೆಗಳನ್ನು ತಿಳಿಸಿದ್ದಾರೆ, ಹಾಗೆ ಅನೇಕ ಗ್ರಾಮದ ಗ್ರಾಕೋಸ್ ಸದಸ್ಯರುಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರಿಗೆ ಗ್ರಾಕೋಸ್ ಸಂಘಟನೆಯಿಂದ ಪತ್ರ ಚಲುವಳಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಗ್ರಾಮೀಣ ಕೂಲಿ ಕಾರ್ಮಿಕ ಪತ್ರ ಚಳುವಳಿಯನ್ನು ಹರಿತು ಕೊಂಡು ಈ ಕಾರ್ಮಿಕರ ಬೇಡಿಕೆಯನ್ನು ಹಿಡೇರಿಸುವರೋವೋ ಕಾದು ನೋಡಬೇಕು
ಮುಖ್ಯ ಬೇಡಿಕೆಗಳು ಇವುಗಳಾಗಿವೆ,
೧ ಕುಟುಂಬಕ್ಕೆ ೨೦೦ ದಿನಗಳ ಕೆಲಸ ಕೊಡಬೇಕು
ದಿನಕ್ಕೆ ೬೦೦ ರಿಂದ ೮೦೦ ಕೂಲಿ ಹಣ ಕೊಡಬೇಕು
ಭ್ರಷ್ಟಾಚಾರ ನಿಲ್ಲಿಸಲು ಸಾಮಾಜಿಕ ಲೆಕ್ಕಪರಿಶೋಧನೆ ಬಲಪಡಿಸುವುದು
ನರೇಗಾ ಸಂಬಂಧ ಪ್ರತಿ ತಿಂಗಳು ಗ್ರಾಮ ಸಭೆ ಆಗಬೇಕು..
ನರೇಗಾ ಕಾರ್ಮಿಕರನ್ನು ಕಟ್ಟಡ ಕಾರ್ಮಿಕರ ಜೊತೆ ಸೇರಿಸಬೇಕು..
ನರೇಗಾ ಕೂಲಿ ಕಾರ್ಮಿಕರ ಹಣ ಕೂಡಲೇ ಬಿಡುಗಡೆ ಮಾಡಬೇಕು
ಈ ಸಂರ್ಭದಲ್ಲಿ ಭಾಗವಹಿಸಿದ ಕಾರ್ಮಿಕರಾದ ಅಕ್ಕಮ್ಮ, ಬಸವರಾಜ,ಗುಂಡಪ್ಪ
,ಬಸವರಾಜ್ ಆಶಾಪುರ, ಕೊಟ್ರಮ್ಮ
,ಸ್ವಪ್ನದೀಪ,ಹುಚ್ಚಪ್ಪ
ಮಹಾಲಕ್ಷ್ಮಿ
*ವರದಿ ರಾಘವೇಂದ್ರ ಸಾಲುಮನೆ*
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ