ಹೂವಿನ ಹಡಗಲಿ ರೈತರಿಂದ ಪೈಪ್ ಲೈನ್ ಗಾಗಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಯಶಸ್ವಿಯಾದ ಶಾಸಕ- ಡಾ. ಶ್ರೀನಿವಾಸ್ ಎನ್. ಟಿ.
ಕೂಡ್ಲಿಗಿ 74 ಕೆರೆಗಳಿಗೆ ನೀರು ತುಂಬಿಸಲು ದಿ. 30-10-23 ರಂದು ಮಾನ್ಯಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಅವರು ಗಣ್ಯಮಾನ್ಯರೊಂದಿಗೆ ತೆರಳಿ ಹೂವಿನ ಹಡಗಲಿ ಸಿಂಗಟಲೂರು ಏತಾ ನೀರಾವರಿ ಮತ್ತು ರಾಜವಾಳ ಗ್ರಾಮದ " ಕೂಡ್ಲಿಗಿ ಜಾಕ್ ವಾಲ್ " ( ಕೂಡ್ಲಿಗಿ 74 ಕೆರೆಗಳಿಗೆ ನೀರು ತುಂಬಿಸುವ ಪಂಪ್ ಸೆಟ್ ) ಗೆ ಭೇಟಿ ನೀಡಿ ವಿಸ್ತೃತವಾದ ವರದಿ ಗಮನಿಸಿ ಇಂಜಿನಿಯರ್ ಗಳಾದ ಐಗಳ ಪ್ರಕಾಶ ಇಇ , ಶಿವಮೂರ್ತಿ ಇಇ, ರಾಘವೇಂದ್ರ ಎ ಇಇ , ರಾಜ ಡಿ.ಎನ್ ಗಳೊಂದಿಗೆ ಪರಿಶೀಲಿಸಿದರು.
ಒಂಬತ್ತು ಕಿ. ಮೀ. ಪೈಪ್ ಲೈನ್ ಸಮಸ್ಯೆಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುಂಠಿತವಾಗಿತ್ತು. ನ್ಯಾಯಯುತ ಪರಿಹಾರಕ್ಕಾಗಿ ಆಗ್ರಹಿಸಿ ಹೂವಿನ ಹಡಗಲಿ ಹಳ್ಳಿಗಳ ರೈತರು ತಡೆ ಇಡಿದಿದ್ದರು. ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಕೂಡ್ಲಿಗಿ ಭಾಗದ ಜನರ ಒಳಿತಿಗಾಗಿ ಕೆರೆಗಳಿಗೆ ನೀರು ತುಂಬಿಸಲು ಅವಕಾಶ ಮಾಡಿಕೊಡಬೇಕು ಎಂದೂ ಶಾಸಕರು ಒತ್ತಾಯಿಸಿದರು.
ಶಾಸಕರು ಮಾತನಾಡಿ, ಕೂಡ್ಲಿಗಿ ರೈತರು ಸುಖವಾಗಿಲ್ಲ. ಪ್ಲೋರೈಡ್ ನೀರಿನಿಂದ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಬರಗಾಲದಿಂದ ಜನ ತತ್ತರಿಸಿ ನಿತ್ಯ ಗುಳೇ ಹೋಗುತ್ತಿದ್ದಾರೆ. ನಮ್ಮ ಒಳಿತಿಗಾಗಿ ಒಂದು ಹೆಜ್ಜೆ ಮುಂದೆ ಇಡುತ್ತಿದ್ದೇವೆ. ನೀವು ಒಂದು ಹೆಜ್ಜೆ ನಮಗಾಗಿ ಮುಂದೆ ಇಡಬೇಕು. ಶಕ್ತಿ ಮೀರಿ ನಿಮ್ಮ ಪರ ನಿಲ್ಲುತ್ತೇವೆ ಎಂದರು. ಶಾಸಕರ ಮನದಾಳದ ಮಾತಿನಿಂದ ಅನಕನಹಳ್ಳಿ - ರಾಜ ವಾಳಗ್ರಾಮದ ರೈತರು ಮನಃಪೂರ್ವಕವಾಗಿ ಭೂಮಿ ಕೊಡಲು ಒಪ್ಪಿದರು. ರೈತ ಬಾಂದವರ ಸ್ಪಂದನೆಗೆ ಮಾನ್ಯಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಪರವಾಗಿ ತುಂಬು ಹೃದಯ ಅಭಿನಂಧನೆಗಳನ್ನು ತಿಳಿಸುತ್ತೇವೆ. ರೈತರ ಪರ ಧ್ವನಿ ಎತ್ತಿದ ಶಾಸಕರು ಮಾತಿನ ಜಾಣ್ಮೆ ಮತ್ತು ಬುದ್ಧಿವಂತಿಕೆಯಿಂದ ಹೂವಿನ ಹಡಗಲಿ ರೈತರ ಮನಸ್ಸನ್ನು ಗೆದ್ದಿರುವುದು ಇದೆ.
ಹೂವಿನ ಹಡಗಲಿ ತಾಲೂಕಿನ ರಾಜವಾಳದ - ಶ್ರೀನಿವಾಸ್ ರೆಡ್ಡಿ , ಅನಕನಹಳ್ಳಿ ಗ್ರಾಮದವರಾದ ದೇವರಾಜ ರೆಡ್ಡಿ , ಹೆಚ್, ಎಮ್, ಮಳೇಸ್ವಾಮಿ, ಕೆ. ಎಲ್, ರೆಡ್ಡಿ, ಹಾಲೇಶ, ದೇವೆಂದ್ರಪ್ಪ ರೆಡ್ಡಿ, ಶಿವಾರೆಡ್ಡಿ, ಹನುಮರೆಡ್ಡಿ, ರಾಜರೆಡ್ಡಿ, ಕೆ.ದೇವರಾಜ, ಕೆ. ನಾಗರಾಜ, ಶೇಖರ ರೆಡ್ಡಿ, ಜೆ. ಮಲ್ಲೇಶ, ಸಚಿನ್ ರೆಡ್ಡಿ, ಮೌನೀಶ್ ರೆಡ್ಡಿ, ಸುರೇಶ್ ಮಲಿಕಿ ಒಡಿಯರ್ , ತಾಲೂಕು ಭೂ ನ್ಯಾಯ ಮಂಡಳಿಯ ಸದಸ್ಯರಾದ ಬಸವರಾಜ ಮತ್ತು ಐಗಳ ಚಿದಾನಂದಪ್ಪನವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ