121 ನೇ ಸಂಡೇ ಫಾರ್ ಸೋಷಿಯಲ್ ವರ್ಕ್ ಕಾರ್ಯ
ಲಿಂಗಸೂಗೂರು : ಸಮೀಪದ ಕಸಬಾ ಲಿಂಗಸೂಗೂರು ಗ್ರಾಮದ ಸಾರ್ವಜನಿಕ ಬಸ್ ನಿಲ್ದಾಣದವನ್ನು ಮಸ್ಕಿಯ ಅಭಿನಂದನ್ ಸಂಸ್ಧೆ ವತಿಯಿಂದ ಆರಂಭಿಸಿದ ಸಂಡೇ ಫಾರ್ ಸೋಷಿಯಲ್ ವರ್ಕ್ 121ನೇ ಸೇವಾ ಕಾರ್ಯದಲ್ಲಿ ಸ್ವಚ್ಛತೆ ಗೊಳಿಸಿ ಬಣ್ಣವನ್ನು ಹಚ್ಚಲಾಯಿತು.
ಈ ಬಸ್ ನಿಲ್ದಾಣ ಕಳೆದ 70 ವರ್ಷಗಳಿಂದ ಸುಣ್ಣ ಬಣ್ಣವನ್ನು ಕಂಡಿರಲಿಲ್ಲ ಎಂದು ಗ್ರಾಮದ ಯುವಕರಾದ ಕಾರ್ತಿಕ ಹೇಳಿದರು.
ನಂತರ ಮಾತನಾಡಿದ ಅಭಿನಂದನ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ ಅವರು ನಮ್ಮ ಅಭಿನಂದನ್ ಶಿಕ್ಷಣ ಸಂಸ್ಥೆ ಮಸ್ಕಿಯಲ್ಲಿ ಪ್ರಾರಂಭ ಮಾಡಿದ್ದೇವೆ ಪ್ರತಿ ರವಿವಾರ ಸಂಡೇ ಪಾರ್ ಸೋಷಿಯಲ್ ವರ್ಕ್ ಮಾಡುವ ಮೂಲಕ ನಮ್ಮ ಸಂಸ್ಥೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಯುವಕರನ್ನು ಸೇರಿಸಿಕೊಂಡು ಅವರ ಸಹಕಾರದ ಮೂಲಕ ಸರಕಾರಿ ಶಾಲೆಗಳನ್ನ,ದೇವಸ್ಥಾನಗಳನ್ನು, ಬಸ್ ನಿಲ್ದಾಣಗಳಲ್ಲಿ ಸ್ವಚ್ಚತೆ ಮಾಡಿ,ಸುಣ್ಣಬಣ್ಣ ಹಚ್ಚುವ ಮೂಲಕ ಸುಂದರವಾಗಿ ಕಾಣುವಂತೆ ಮಾಡಿ ಸಾರ್ವಜನಿಕರಿಗೆ ಸಾರ್ವಜನಿಕ ಸ್ಥಳಗಳ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ ಎಂಬುದನ್ನು ಮನವರಿಕೆ ಮಾಡಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಸದ್ಯ ಈ 121ನೇ ಆವೃತ್ತಿಯ ಕಾರ್ಯಕ್ರಮವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಅಭಿನಂದನ್ ಸಂಸ್ಥೆಯ ಸಂಸ್ಥಾಪಕ ರಾಮಣ್ಣ ಹಂಪರಗುಂದಿ,ಮಹೇಶ ಖೇಣೆದ, ಜಾಫರ್ ಮಿಯಾ, ಅಮರೇಶ ಕಿಲ್ಲಾರಹಟ್ಟಿ, ಅಮಿತ್ ಕುಮಾರ್ ಪುಟ್ಟಿ, ಪ್ರಜ್ವಲ,ಕಿಶೋರ,ಕಾರ್ತಿಕ, ಬಂಡೆಪ್ಪ,ಗ್ರಾಮದ ಯುವಕರು, ಹಿರಿಯರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ