ಆನ್ವರಿ ಗ್ರಾಮ ಪಂಚಾಯತಿ ಸಾಮಾನ್ಯ ಸಭೆ.ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವೆ. ಮುದಿಯಪ್ಪ.ಕೊಠ.
ಲಿಂಗಸ್ಗೂರು : ತಾಲೂಕಿನ ಆನ್ವರಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ಗ್ರಾಮ ಪಂಚಾಯತಿ ಸಾಮಾನ್ಯ ಸಭೆ ನಡೆಯಿತು.ಈ ಸಾಮಾನ್ಯ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮುದಿಯಪ್ಪ ಕೊಠ ಇವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಸಲಾಯಿತು.
ಈ ಸಾಮಾನ್ಯ ಸಭೆಯಲ್ಲಿ ಕೋರಂ ಇರುವ ಪ್ರಯುಕ್ತ ಸಭೆಯನ್ನು ಮುಂದುವರಿಸಲಾಯಿತು.ಮೊದಲಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಾಮಾನ್ಯ ಸಭೆಗೆ ಹಾಜರಾದ ಸರ್ವ ಸದಸ್ಯರನ್ನು
ಈ ಸಾಮಾನ್ಯ ಸಭೆಗೆ ಆರ್ಥಿಕವಾಗಿ ಸ್ವಾಗತ ಮಾಡಲಾಯಿತು.ಮಾನ್ಯ ಅಧ್ಯಕ್ಷರು ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಸಭೆಯನ್ನು ಯಶಸ್ವಿಗೊಳಿಸಲು ತಿಳಿಸಿದರು.
ಮೊಟ್ಟ ಮೊದಲು ಗ್ರಾಮ ಪಂಚಾಯತ್ ಮಾಸಿಕ ವರದಿಯನ್ನು ಸರಕಾರದಿಂದ ಬಂದ ಕಾಗದ ಪತ್ರಗಳನ್ನು ಓದಿ ಹೇಳಲಾಯಿತು.ಹಾಗೂ ಸಭೆಯು ಅಜೆಂಡ ಪ್ರಕಾರ ಪ್ರಾರಂಭವಾಯಿತು.ಈ ಸಾಮಾನ್ಯ ಸಭೆಯಲ್ಲಿ ಐದು ಅಜೆಂಡಗಳನ್ನು ಇಟ್ಟುಕೊಂಡು ಸಭೆಯನ್ನು ಪ್ರಾರಂಭ ಮಾಡಲಾಯಿತು.
1.ಇಂದಿನ ಸಭೆಯ ನಡವಾಡಿಕೆಗಳನ್ನು ಓದಿ ದೃಢೀಕರಿಸಲಾಯಿತು.
2.ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಕುರಿತು. ಆನ್ವರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ನರೇಗಾ ಕೂಲಿಕಾರರು 4,250 ಜನ ನೊಂದಾಯಿತ ಕೂಲಿಕಾರರಿರುವ ಸಂಖ್ಯೆ ಈಗ ರೂ.4,843ಕ್ಕೆ ಹೆಚ್ಚಳವಾಗಿದೆ.ಇದರಲ್ಲಿ ಎಲ್ಲಾ ಗ್ರಾಮಗಳಿಗೆ ಒಟ್ಟು 2384 ಕುಟುಂಬಗಳ 4535 ಜನರು ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದಾರೆ ಕೆಲಸ ಕೋರಿ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಕೂಲಿ ಕೆಲಸ ಈಗಾಗಲೇ ನೀಡಲಾಗಿದೆ.ಇದರಿಂದ 63494 ಮಾನವ ದಿನಗಳ ಒಟ್ಟು ಮೊತ್ತ 20064104 ರೂಪಾಯಿಗಳು ನರೇಗಾ ಕೂಲಿಮತ್ತ ಖರ್ಚಾಗಿದೆ ಎಂದು ಸಭೆಯಲ್ಲಿ ಓದಿ ಹೇಳಲಾಯಿತು.ಅದೇ ರೀತಿ 2023-24ನೆಯ ಸಾಲಿನ ಕ್ರಿಯಾಯೋಜನೆ ಬಗ್ಗೆ ವಿಸ್ತಾರವಾಗಿ ಈ ವರ್ಷದ ಕಾಮಗಾರಿಗಳನ್ನು ಮಾಡಿ ಮುಗಿಸಬೇಕೆಂದು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
3.ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಚರ್ಚೆ ಆನ್ವರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನಾಲ್ಕು ಗ್ರಾಮಗಳಲ್ಲಿ ಒಟ್ಟು 12 ಕೊಳವೆ ಬಾವಿಗಳು ಇವೆ.3 ಶುದ್ಧ ಕುಡಿಯುವ ನೀರಿನ ಘಟಕಗಳಿವೆ.
6 ಕೊಳವೆಬಾವಿಗಳಿಗೆ ಪಂಪ್ ಗಳಿವೆ.6 ಓವರ್ ಹೆಡ್ ಟ್ಯಾಂಕ್ ಗಳಿವೆ.22 ನೀರಿನ ಗುಮ್ಮಿಗಳಿವೆ. ಎಲ್ಲಾ ಗ್ರಾಮಗಳಲ್ಲಿ ಓವರ್ ಹೆಡ್ ಟ್ಯಾಂಕ್ ಮತ್ತು ಗುಮ್ಮಿಗಳನ್ನು ಸ್ವಚ್ಛಗೊಳಿಸಿ ಕ್ಲೋರಿನೇಷನ್ ಮಾಡಲಾಗಿದೆ.ವಂದಲಿ ಹೊಸೂರು ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಮುಗಿದಿದ್ದು ನೀರು ಸರಬರಾಜು ಮಾಡಲು ಸದಸ್ಯರು ತಿಳಿಸಿದರು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಎಲ್ಲಾ ಕುಡಿಯುವ ನೀರಿನ ಮೂಲಗಳನ್ನು ಪರೀಕ್ಷೆ ಒಳಪಡಿಸಲಾಗಿದೆ. ಎಲ್ಲಾ ಕುಡಿಯುವ ನೀರಿನ ಮೂಲಗಳು ಕುಡಿಯಲು ಯೋಗ್ಯವಾಗಿವೆ ಎಂದು ವರದಿ ಬಂದಿದೆ. ದಯವಿಟ್ಟು ಎಲ್ಲಾ ಗ್ರಾಮಗಳಲ್ಲಿ ಜನರಿಗೆ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಸಿಗುವ ನೀರನ್ನು ಮಾತ್ರ ಕುಡಿಯಲು ಬಳಸಬೇಕು ಮನೆಯಲ್ಲಿ ಬೇರೆ ನೀರನ್ನು ಬಳಕೆ ಮಾಡಿದಲ್ಲಿ ನೀರನ್ನು ಕುದಿಸಿ ಸೋಸಿ ಆರಿಸಿದ ನೀರನ್ನು ಕುಡಿಯಲು ಬಳಸುವಂತೆ ಜಾಗೃತಿ ಮೂಡಿಸಬೇಕು ಎಂದು ಪಿಡಿಒ ಅವರು ಸಭೆಗೆ ತಿಳಿಸಿದರು.ಅದೇ ರೀತಿ ಸಭೆಯಲ್ಲಿ ಸರ್ವ ಸದಸ್ಯರು ಚರ್ಚಿಸಿ ಎಲ್ಲಾ ಗ್ರಾಮಗಳಲ್ಲಿ ಸರ್ವಜನಿಕರಿಗೆ ಅರಿವು ಮೂಡಿಸುವುದಾಗಿ ತಿಳಿಸಿದರು.ಬಾಕಿ ಇರುವ ಕುಡಿಯುವ ನೀರಿನ ಸಮಗ್ರಿ ಖರೀದಿ ಮೋಟರ್ ವೈಂಡಿಂಗ್ ಮಾಡಿಸಿದ ಮತ್ತು ಪೈಪ್ ಲೈನ್ ದುರಸ್ತಿ ಮಾಡಿಸಿದ ಬಿಲ್ ಗಳನ್ನು ಪಾವತಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
4.ಇತರ ಯೋಜನೆಗಳ ಬಗ್ಗೆ ಚರ್ಚೆ ರೋಡಲ ಬಂಡ(ಯುಕೆಪಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ಒಟ್ಟು 2031 ಆಸ್ತಿಗಳಿವೆ. ಎಲ್ಲಾ ಆಸ್ತಿಗಳ ಒಟ್ಟು ಮನೆಕರ 367810/- ಚಾಲ್ತಿಬಾಕಿ ರೂಪಾಯಿ.141017/- ಸೇರಿ ಒಟ್ಟು ರೂ.508827/- ಇರುತ್ತದೆ.ನೀರಿನ ಕರ ಚಾಲ್ತಿ ರೂ70000/- ಬಾಕಿ31378 ಸೇರಿ ಒಟ್ಟು ರೂ.101738/- ಇರುತ್ತದೆ ವಸುಲತೆ ಬಾಳ ಕಡಿಮೆ ಇರುತ್ತದೆ. ಆದ್ದರಿಂದ ಎಲ್ಲ ಗ್ರಾಮಗಳಲ್ಲಿ ಶೇಕಡ 100ರಷ್ಟು ತೆರಿಗೆ ವಸಾಲತಿ ಮಾಡಲು ಗ್ರಾಮ ಪಂಚಾಯಿತಿಯ ವಾಟರ್ ಮ್ಯಾನ್ ಗಳು ಸೇರಿದಂತೆ ಎಲ್ಲರಿಗೂ ಆದೇಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಸಿಬ್ಬಂದಿಯವರು ಕಡ್ಡಾಯವಾಗಿ ವಸುಲತೆ ಮಾಡಲು ಕ್ರಮ ವಹಿಸುವಂತೆ ಸೂಚಿಸಲಾಯಿತು. ಗ್ರಾಮಗಳಲ್ಲಿ ಸಿಬ್ಬಂದಿಯವರು ತೆರಿಗೆ ವಸೂಲಿಗೆ ಬಂದಾಗ ಗ್ರಾಮ ಪಂಚಾಯತಿ ಸದಸ್ಯರು ಸಹಕಾರ ನೀಡಲು ಕೋರಲಾಯಿತು.ಸರ್ವ ಸದಸ್ಯರು ಚರ್ಚಿಸಿ ತೆರಿಗೆ ವಸತಿ ಆದರೆ ಗ್ರಾಮ ಪಂಚಾಯತಿಯ ಸಣ್ಣಪುಟ್ಟ ಕೆಲಸಗಳಿಗೆ ಅನುಕೂಲವಾಗುತ್ತದೆ ಆದ್ದರಿಂದ ಎಲ್ಲ ಸಿಬ್ಬಂದಿಯವರನ್ನು ಕರ ವಸಲಿಗಾರರನ್ನು ಬಳಸಿಕೊಂಡು ಎಲ್ಲಾ ಗ್ರಾಮಗಳಲ್ಲಿ ಶೇಕಡ ನೂರರಷ್ಟು ತೆರಿಗೆ ಮೋಸದತಿ ಮಾಡಲು ತೀರ್ಮಾನಿಸಲಾಯಿತು.
5.ಸಾಮಾನ್ಯ ಸಭೆಯ ಅಧ್ಯಕ್ಷರ ಅಪ್ಪಣೆಯ ಮೇರೆಗೆ ಇತರೆ ವಿಷಯಗಳ ಚರ್ಚೆ ರೋಡಲ್ ಬಂಡ ಯುಕೆಪಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಿಂದ ಸ್ವೀಕೃತವಾಗಿರುವ ಎಲ್ಲಾ ಅರ್ಜಿಗಳನ್ನು ಓದಿ ಹೇಳಲಾಯಿತು. ನಿಗದಿತ ಸಮಯದಲ್ಲಿ ವಿಲವಾರೆ ಮಾಡಲು ಕ್ರಮ ವಹಿಸುವಂತೆ ಎಲ್ಲ ಸದಸ್ಯರು ಚರ್ಚಿಸಿ ಸಭೆಯಲ್ಲಿ ನಿರ್ಣಯ ಮಾಡಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ