"ಹದಗೆಟ್ಟಿರುವ ಕೊಟ್ಟೂರು ರೈಲ್ವೆ ಸ್ಟೇಷನ್ ರಸ್ತೆ " ಲೋಕೋಪಯೋಗಿ ಇಲಾಖೆ: ಕಣ್ಮುಚ್ಚಿ ಕುಳಿತಿರುವ ಅಧಿಕಾರಿಗಳು

ಕೊಟ್ಟೂರು: ನಾಡಿನ ಆರಾಧ್ಯ ದೈವನಾದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಪುಣ್ಯ ಕ್ಷೇತ್ರವಾದ ಕೊಟ್ಟೂರಿಗೆ ಪ್ರತಿದಿನ ನೂರಾರು ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಬರುತ್ತಾರೆ. ಜನಸಾಮಾನ್ಯರ ಮಧ್ಯಮ ವರ್ಗದ ಜನರ ಜೀವನಾಡಿ ಎಂದರೆ ಅದುವೇ ರೈಲು ಸಂಚಾರವಾಗಿದೆ. ಕೊಟ್ಟೂರು ರೈಲ್ವೆ ನಿಲ್ದಾಣಕ್ಕೆ ಬಂದರೆ ಪ್ರಯಾಣಿಕರನ್ನು ಹದಗೆಟ್ಟಿರುವ ರಸ್ತೆಗಳು ಸ್ವಾಗತಿಸುತ್ತದೆ.

ಕೊಟ್ಟೂರಿಗೆ ರೈಲು ನಿಲ್ದಾಣ ಆಗಬೇಕೆಂದು ಈ ಭಾಗದ ಜನರ ಬಹುದಿನದ ಬೇಡಿಕೆ ಹಾಗೂ ಕೊಟ್ಟೂರು ರೈಲ್ವೆ ಸಮಿತಿ ಹೋರಾಟಗಾರರ ಶ್ರಮದ ಪ್ರತಿಫಲವೇ ಇಂದು ಕೊಟ್ಟೂರಿನಲ್ಲಿ ರೈಲು ನಿಲ್ದಾಣವಾಗಿದೆ. ಕೊಟ್ಟೂರು  ರೈಲು ನಿಲ್ದಾಣಕ್ಕೆ ಬಂದು ಇಳಿದರೆ ಪ್ರಯಾಣಿಕರನ್ನು ಹದಗೆಟ್ಟಿರುವ ರಸ್ತೆಗಳು ಸ್ವಾಗತಿಸುತ್ತದೆ. ಈ ರಸ್ತೆಯಲ್ಲಿ ಬರುವ ಪ್ರಯಾಣಿಕರು ಭಕ್ತರು , ಬೈಕ್ ಸವಾರರು ವಿದ್ಯಾರ್ಥಿಗಳು, ಈ ಮಾರ್ಗದಲ್ಲಿ ಬರುವ ಗ್ರಾಮದ ರೈತರು  ಈ ಹದಗೆಟ್ಟಿರುವ ರಸ್ತೆಗಳ ಗುಂಡಿಗೆ ಬಿದ್ದು ಕೈ ಕಾಲು ಮುರಿದುಕೊಂಡಿರುವ ಎಷ್ಟೋ ಪ್ರಸಂಗಗಳು ನಡೆದಿದೆ ಎಂದು ಬೈಕ್ ಸವಾರ ಗಜಾಪುರ ಹನುಮಂತಪ್ಪ ಆಕ್ರೋಶ ವ್ಯಕ್ತಪಡಿಸಿದರು.

ರಾತ್ರಿ ವೇಳೆ ರೈಲ್ವೆ ಸ್ಟೇಷನ್ ಗೆ ಹೋಗಬೇಕಾದರೆ ಒಂದು ಕ್ಷಣ ಭಯ ಉಂಟಾಗುತ್ತದೆ.  ಯಾಕೆ ಎಂದರೆ ಸರಿಯಾದ ಬೀದಿ ದೀಪಗಳ ವ್ಯವಸ್ಥೆ ಇಲ್ಲ ಬರುವ ಭಕ್ತಾದಿಗಳು ಕತ್ತಲನಲ್ಲೇ ಹೋಗಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನನಿತ್ಯ ಈ ಮಾರ್ಗದಲ್ಲಿ ನೂರಾರು ವಾಹನಗಳು ಸಂಚರಿಸುತ್ತದೆ ಆದರೆ ಪಕ್ಕದಲ್ಲಿರುವ ಮಾಳಿಗೆಗಳ ಅಂಗಡಿ ಮಾಲೀಕರಿಗೆ ಪ್ರತಿದಿನ ಧೂಳನ್ನು ಕುಡಿಯುತ್ತಿದ್ದಾರೆ ಇದರಿಂದ ಎಷ್ಟು ಸಲ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದು ಉಂಟು ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರವನ್ನು ನೀಡಿದರು ಯಾವುದೇ ಪ್ರಯೋಜನವಿಲ್ಲ ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ರಸ್ತೆಯನ್ನು ದುರಸ್ತಿ ಮಾಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ