ತೂಲಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಡಿ ಭರಮನಗೌಡ ಆಯ್ಕೆ

ಕೊಟ್ಟೂರು: ೨೦೨೩-೨೪ನೇ ಸಾಲಿನ ಎರಡನೇ ಅವಧಿಗೆ ಚುನಾವಣೆಯಲ್ಲಿ ತೂಲಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಎರಡು ನಾಮಪತ್ರ ಸಲ್ಲಿಕೆ ನಡೆಯಿತು ಒಂದು ಇ ಸಿ ನಿಂಗನಗೌಡ ಮತ್ತು ಡಿ ಭರನಗೌಡ ಇದರಲ್ಲಿ ನಿಂಗನಗೌಡರಿಗೆ ೫ ಮತಗಳು ಭರಮನಗೌಡನರಿಗೆ ೭ ಮತಗಳು ಇರುವರಲ್ಲಿ ಡಿ ಭರಮನಗೌಡರು ಎರಡು ಮತಗಳ ಮೂಲಕ ಜಯಶೀಲರಾಗಿ ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆಗೊಂಡಿದ್ದಾರೆ.

 ಉಪಾಧ್ಯಕ್ಷರ ಸ್ಥಾನಕ್ಕೆ ಶಾಖೀರಬೀ ಮತ್ತು ಕವಿತಾ ಹೆಚ್ ನಾಮಪತ್ರ ಸಲ್ಲಿಸಿರುತ್ತಾರೆ. ಇವರಲ್ಲಿ ಇಬ್ಬರು ಸಮನಾಗಿ ಆರು ಆರು ಮತಗಳನ್ನು ಪಡೆದು ಇವರಿಗೆ ಲಾಟರಿ ಮೂಲಕ ಶಾಖೀರಾಬಿ ಉಪಾಧ್ಯಕ್ಷರ ಸ್ಥಾನಕ್ಕೆ ಆಯ್ಕೆಗೊಂಡಿರುತ್ತಾರೆ.

೨೦೨೩ ೨೪ ನೇ ಸಾಲಿನ ಮೊದಲನೇ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಎರಡನೇ ಅವಧಿಗೆ ಅಧ್ಯಕ್ಷರಾಗಿದ್ದು ನನಗೆ ತುಂಬಾ ಖುಷಿಯಾಗಿದೆ ನಾನು ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದೆ ಆದರೆ ಈಗ ಒಂದು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದೀನಿ ಎಂದರೆ ಅದಕ್ಕೆ ಕಾರಣ ನನ್ನ ಸುತ್ತಮುತ್ತಲಿನ ಬಂದು ಸ್ನೇಹಜೀವಿಗಳು ನನ್ನ ಹಿರಿಯರ ಆಶೀರ್ವಾದ ಇವರೆಲ್ಲರಿಗೂ ಅಭಿನಂದನೆಗಳನ್ನು ತಿಳಿಸುತ್ತಾ ನಾನು ಸಾಯುವ ತನಕ ಇವರಿಗೆ ಚಿರನುಡಿಯಾಗಿರುತ್ತೇನೆ ಹಾಗೇನೆ ಸಾರ್ವಜನಿಕರಿಗೆ ಕುಂದು ಕೊರತೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವುದರಲ್ಲಿ ಅಧ್ಯಕ್ಷರಾಗಿ ಕಾರ್ಯ ನಡೆಸಿಕೊಂಡು ಹೋಗುತ್ತೇನೆಂದು ಡಿ ಭರಮನಗೌಡ ಹನುಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ತಿಳಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ